ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳು ನಿಯಂತ್ರಿಸುವಲ್ಲಿ ವಿಫಲರಾದ ಸಿದ್ದರಾಮಯ್ಯ ಸರಕಾರ ಮರಕುಂಬಿ ಮತ್ತು ಹೊಸಗುಡ್ಡ ಕೊಲೆ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಮಸ್ಯೆಯನ್ನು ಬಗೆಹರಿಸುವ ಬದಲು ತನ್ನ ಜಾತಿಯ ಜನರನ್ನು ಮತ್ತು ಬಾಡಿಗೆ ಜನರನ್ನು ಬಿಟ್ಟು ಹೋರಾಟಗಾರರಿಗೆ ಬೆದರಿಕೆ ಹಾಕಿಸುತ್ತಿರುವುದರಿಂದ ಅದನ್ನೆಲ್ಲಾ ತೇಪೆ ಹಾಕುವ ದುರುದ್ದೇಶದಿಂದ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮವನ್ನು ಜಿಲ್ಲಾ ಪ್ರಗತಿಪರ ಸಂಘಟನೆ ಪ್ರತಿಭಟಿಸಲು ತೀರ್ಮಾನಿಸಿದೆ.
ದಿನಾಂಕ ೨೪-೦೭-೨೦೧೪ ರಂದು ಕನಕಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೊಸಗುಡ್ಡದಲ್ಲಿ ಹನುಮಮ್ಮ ಗಂಡ ಮರಿಯಪ್ಪ ಹರಿಜನ ಎನ್ನುವ ಮಹಿಳೆಯ ಕೊಲೆಯಾಯಿತು. ಇದರಲ್ಲಿ ನಿಜವಾದ ಆರೋಪಿಗಳನ್ನು ಹಿಡಿಯುವಲ್ಲಿ ವಿಫಲರಾದ ಪೋಲಿಸರು ಆಕೆಯ ಅಣ್ಣ ಮತ್ತು ಮಕ್ಕಳನ್ನೇ ಹಿಡಿದು ಹಿಂಸೆ ನೀಡಿ ಅವರಿಂದ ನಾವೇ ಕೊಲೆ ಮಾಡಿದ್ದೇವೆ ಎನ್ನುವ ಹೇಳಿಕೆ ಪಡೆದು ನಾಲ್ಕು ದಿನ ಅಕ್ರಮ ಬಂಧನದಲ್ಲಿಟ್ಟು ದಿನಾಂಕ ೨೭-೭-೨೦೧೪ ರಂದು ಕೇಸು ದಾಖಲಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಆರೋಪಿಗಳನ್ನು ಕೊಪ್ಪಳ ಜಿಲ್ಲಾ ಬಂಧಿಖಾನೆಯಲ್ಲಿದ್ದಾಗ ಕನಕಗಿರಿ ಪಿಎಸ್‌ಐ ವೀರಣ್ಣ ಮಾಗಿ ದಿನಾಂಕ ೨೧-೦೮-೨೦೧೪ ರಂದು ಭೇಟಿಯಾಗಿ ಮತ್ತ ಬೆದರಿಕೆ ಹಾಕಿ ಬಂದಿದ್ದಕ್ಕೆ ದೂರು ನೀಡಿದರೆ ಅದಕ್ಕೆ ಬೇರೆ ನೆಪಕೊಟ್ಟು ಮುಚ್ಚಿಹಾಕಿದ್ದಾರೆ. ಹನುಮಮ್ಮಳ ಮೈದುನ ಈರಪ್ಪ ಎನ್ನುವಾತನನ್ನು ಬೆದರಿಕೆ ಹಾಕಿ ಹಿಡಿದು ತಂದು, ೩೦ ಸಾವಿರ ಕಿತ್ತುಕೊಂಡ ಪೋಲಿಸನ ಮೇಲೆ ಇಂದಿಗೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಈಗಾಗಲೇ ಕನಕಗಿರಿ, ಕೊಪ್ಪಳ, ಗಂಗಾವತಿ, ಕಾರಟಗಿ ಮತ್ತು ಸಿಂಧನೂರು ಬಂದ್‌ಗಳು ದೊಡ್ಡ ಪ್ರಮಾಣದಲ್ಲಿ ನಡೆದವು. ಇಷ್ಟಾದರೂ ಈ ಪ್ರಕರಣ ಕುರಿತಂತೆ ಸರ್ಕಾರ ಜಾಣ ಕುರುಡು ಮತ್ತು ಕಿವುಡುತನ ಪ್ರದರ್ಶಿಸುತ್ತಿದೆ. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಮರಕುಂಬಿಯಲ್ಲಿ ಅಸ್ಪೃಶ್ಯರಿಗೆ ಕ್ಷೌರ ಮಾಡುವಲ್ಲಿ ಉಂಟಾದ ಸಮಸ್ಯೆಯನ್ನು ತಕ್ಷಣ ಪರಿಹರಿಸದೆ ಅದನ್ನು ಉದ್ದೇಶಪೂರ್ವಕವಾಗಿ ಬೆಳೆಯಲು ಬಿಟ್ಟದ್ದರಿಂದ ಅದು ಬೇರೆ ಬೇರೆ ಸ್ವರೂಪ ಪಡೆಯುತ್ತಾ ಅಲ್ಲಿಯ ದಲಿತರಿಗೆ ಬದುಕವುದೇ ನರಕ ಹಿಂಸೆಯಾಗಿದೆ.
ಈ ಎಲ್ಲಾ ಪ್ರಕರಣಗಳ ಕುರಿತು ನಡೆದ ಹೋರಾಟವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಉಡಾಫೆಯಾಗಿ ನೋಡುತ್ತಾ ಅದಕ್ಕೆ ರಾಜಕೀಯ ಹಾಗೂ ಜಾತಿಯ ಬಣ್ಣ ಬಳಿದು ತಾನು ಉಳಿದುಕೊಳ್ಳುವ ತಂತ್ರ ರೂಪಿಸುತ್ತಾ, ಕೀಳುಮಟ್ಟದ ರಾಜಕಾರಣ ಪ್ರದರ್ಶಿಸುತ್ತಿದ್ದಾರೆ. ಇಂತಹವರನ್ನು ಸಚಿವ ಸಂಪುಟದಲ್ಲಿ ಇಟ್ಟುಕೊಳ್ಳುವುದು ಸರ್ಕಾರಕ್ಕೆ ಅವಮಾನ. ಈ ಪ್ರತಿಭಟನೆಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಅಥವಾ ದುರ್ಲಾಭದ ಹಿನ್ನೆಲೆಯಿಲ್ಲ. ಇದು ಮಾನವೀಯತೆಗಾಗಿ ಮಾನವ ಹಕ್ಕಿನ ರಕ್ಷಣೆಗಾಗಿ ನಡೆಸಿದ ಹೋರಾಟವೆ ಹೊರತು ರಾಜಕೀಯ ಪ್ರಚೋದಿತವಲ್ಲ.
ಪ್ರಕರಣ ಕುರಿತು ಸಿದ್ದರಾಮಯ್ಯ ಪ್ರಾಮಾಣಿಕವಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಿ ಜಿಲ್ಲೆಗೆ ಬಂದಿದ್ದರೆ ನಾವೇ ಸ್ವಾಗತಿಸುತ್ತಿದ್ದೆವು. ಆದ್ದರಿಂದ ಅವರ ಕಾರ್ಯಕ್ರಮವನ್ನು ಪ್ರತಿಭಟಿಸುತ್ತೇವೆ. ಮತ್ತು ಶಿವರಾಜ ತಂಗಡಗಿಯವರನ್ನು ಸಚಿವಸ್ಥಾನದಿಂದ ಕಿತ್ತುಹಾಕಿ ಎರಡೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ತಕ್ಷಣ ಒಳಪಡಿಸಲು ಆಗ್ರಹಿಸುತ್ತೇವೆ.

0 comments:
Post a Comment