PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಇತ್ತೀಚಿಗೆ ಮೂರು ಪುಸ್ತಕಗಳನ್ನು ಹೊರ ತಂದಿರುವ ಈಶ್ವರ ಹತ್ತಿ ತಮ್ಮ ಗಟ್ಟಿ ಬರಹದಿಂದ ಓದುಗರನ್ನು ಸೆಳೆಯುತ್ತಾರೆ. ಅವರ ಚಿಂತನೆ ಅವರ ಆಲೋಚನೆಗಳು ಅವರೊಬ್ಬ ಪ್ರಬುದ್ಧ ಬರಹಗಾರ ಎನ್ನುವುದನ್ನು ತೋರಿಸುತ್ತವೆ. ನಮ್ಮ ಭಾಗದಲ್ಲಿ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದವರ ಸಂಖ್ಯೆ ಬಹಳ ಕಡಿಮೆ. ಈಶ್ವರ ಹತ್ತಿಯವರು ಎಲ್ಲ ಪ್ರಕಾರಗಳಲ್ಲೂ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಾಹಿತಿ ಪ್ರಮೋದ ತುರ್ವಿಹಾಳ ಹೇಳಿದರು.  ಅವರು ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ೧೮೨ನೇ ಕವಿಸಮಯ ಕಾರ‍್ಯಕ್ರಮದಲ್ಲಿ ದೀಪಾವಳಿ ಕವಿಗೋಷ್ಠಿ ಹಾಗೂ ಈಶ್ವರ ಹತ್ತಿಯವರ ಪುಸ್ತಕಗಳ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 
ಬರಹಗಾರ ತನ್ನ ಸಮಾಜಕ್ಕೆ ಮುಖಾಮುಖಿಯಾದಾಗ ಉತ್ತಮ ಸಾಹಿತ್ಯ ರಚನೆಯಾಗುತ್ತೆ. ಅನುವಾದವೆನ್ನುವುದು ಸಂವೇದಾನಶೀಲ ಕೆಲಸ. ಬರಹಗಾರನಿಗೆ ಸಮಾಜಿಕ ತಲ್ಲಣಗಳಿಗೆ ಮತ್ತು ಸಂದರ್ಭಕ್ಕೆ ಮುಖಾಮುಖಿಯಾಗುವ ಅವಶ್ಯಕತೆ ಇರುತ್ತೆ. ಆರೋಗ್ಯಕರ ಚರ್ಚೆ ಮತ್ತು ವಿಮರ್ಶೆಗಳು ಬರಹಗಾರರನ್ನು ಬೆಳೆಸುತ್ತವೆ ಎಂದರು. 
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಎನ್.ಜಡೆಯಪ್ಪ- ದೀಪ,ಶಾಂತಾದೇವಿ ಹಿರೇಮಠ- ದೀಪಾವಳಿಗೆ ಸ್ವಾಗತ, ವೀರಣ್ಣ ಹುರಕಡ್ಡಿ- ಈ ದೀಪಾವಳಿ, ಮಾನಪ್ಪ ಬೆಲ್ಲದ- ಇಲ್ಲವಾದರೆ, ಮಹೇಶ್ ಬಳ್ಳಾರಿ- ಗಜಲ್, ಅನುಸೂಯಾ ಜಾಗೀರದಾರ- ದೀಪಾವಳಿ ಎಂದರೆ, ಅರುಣಾ ನರೇಂದ್ರ- ಗಜಲ್, ಪುಷ್ಪಲತಾ ಏಳುಬಾವಿ- ಬೆಳಕು, ಬಸವರಾಜ್ ಚೌಡ್ಕಿ- ಚುಟುಕು,ಎ.ಪಿ.ಅಂಗಡಿ- ನೀಲಿಕೆಟ್ಟ ಸುದ್ದಿ,ಶ್ರೀಮತಿ ಕಲಾವತಿ ಕುಲಕರ್ಣಿ- ಹಸನ್ಮುಖಿ, ವಿಜಯಲಕ್ಷ್ಮಿ ಕೊmಗಿ- ಕವಿತೆ ಎಣ್ಣೆಗುಂಡಿ, ಸಿರಾಜ್ ಬಿಸರಳ್ಳಿ - ನಾನು ದೇವರಿಗೆ ಎಲ್ಲಾ ಹೇಳ್ತೀನಿ ಕವನಗಳ ವಾಚನ ಮಾಡಿದರು.
ಈಶ್ವರ ಹತ್ತಿಯವರ ಕೃತಿಗಳ ಕುರಿತು ಗೋಷ್ಠಿಯಲ್ಲಿ ಭಾಗವಹಿಸಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಡಿಸಿದರು. ನಂತರ ಮಾತನಾಡಿದ ಈಶ್ವರ ಹತ್ತಿ - ವಿಮರ್ಶೆಗೊಳಪಡಿಸಬೇಕಾದ ಕೃತಿಯ ಪರಿಪೂರ್ಣ ಓದು ಮತ್ತು   ಸಂಬಂಧಗಳನ್ನು ಮರೆತು ವಿಮರ್ಶೆ ಮಾಡಬೇಕಾದ ಅವಶ್ಯಕತೆ ಇದೆ. ಕೃತಿಯ ಹಿನ್ನೆಲೆ, ಕಾವ್ಯ  & ಪರಿಸರದ ಹಿನ್ನೆಲೆಯನ್ನು ಪರಿಗಣಿಸಬೇಕು. ಅನುವಾದಕನಿಗೆ ಸ್ವಾತಂತ್ರ್ಯ ಇರುವುದಿಲ್ಲ. ಮೂಲ ಲೇಖಕನ ಆಶಯಕ್ಕೆ ದಕ್ಕೆಯಾಗದಂತೆ ನೋಡಬೇಕಾದ ಜವಾಬ್ದಾರಿಯಿರುತ್ತೆ. ವಚನಗಳ ಮೂಲಕ ನನ್ನ ತಲ್ಲಣಗಳನ್ನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮಹಾಂತೇಶ ಮಲ್ಲನಗೌಡರ ವಹಿಸಿದ್ದರು. 
 ಈ ಸಂದರ್ಭದಲ್ಲಿ ಶಿವಾನಂದ ಹೊದ್ಲೂರ,ವಿರೇಶ ಕೊಪ್ಪಳ, ಕೆ.ಸತ್ಯನಾರಾಯಣರಾವ್, ಅಮರದೀಪ್, ಎಂ.ವಿ.ಪಾಟೀಲ್, ಶ್ರೀನಿವಾಸ ಚಿತ್ರಗಾರ,ರಾಮಣ್ಣ ವೇಮಲಿ, ಬಿ.ಎ.ವಡ್ಡರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ಎನ್.ಜಡೆಯಪ್ಪ ಕೋರಿದರೆ ವಂದನಾರ್ಪಣೆಯನ್ನು ಮಹೇಶ ಬಳ್ಳಾರಿ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ‍್ಯಕ್ರಮ ನಡೆಸಿಕೊಟ್ಟರು. 

Advertisement

0 comments:

Post a Comment

 
Top