ನವಜಾತ ಹೆಣ್ಣು ಶಿಶು ಪತ್ತೆ : ಸೂಚನೆ
ಗಂಗಾವತಿ ತಾಲೂಕಿನ ಇಸ್ಲಾಂಪುರ ನಗರದ ೧೧ ನೇ ವಾರ್ಡನಲ್ಲಿ ೫ ದಿನದ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು. ಸಂಬಂಧಪಟ್ಟ ಪೋಷಕರು ೬೦ ದಿನಗಳ ಒಳಗಾಗಿ ಬಂದು ಶಿಶುವನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಪತ್ತೆಯಾದ ನವಜಾತ ಶಿಶುವನ್ನು ನಗರ ಪೊಲಿಸ್ ಠಾಣೆ ಗಂಗಾವತಿಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಶಿಶುವಿನ ಪೋಷಕರ ಪತ್ತೆಯಾಗದ ಕಾರಣ ಶಿಶುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ, ಬಿಜಾಪುರದ ಶ್ರೀ ಸಿದ್ದೇಶ್ವರ ವಾತ್ಸಲ್ಯ ಸ್ವದೇಶಿ ದತ್ತು ಸ್ವಿಕಾರ ಕೇಂದ್ರಕ್ಕೆ ತಾತ್ಕಾಲಿಕ ರಕ್ಷಣೆ ಪೋಷಣೆಗಾಗಿ ಹಸ್ತಾಂತರ ಮಾಡಲಾಗಿದೆ. ಶಿಶುವಿಗೆ ಸಂಭಂದಪಟ್ಟ ಪೋಷಕರು ಇದ್ದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ. ಸರಕಾರಿ ಬಾಲಕರ ಬಾಲಮಂದಿರ, ರೋಟರಿ ಕ್ಲಬ್ ಬಿಲ್ಡಿಂಗ ಭಾಗ್ಯನಗರ ರಸ್ತೆ ಕೊಪ್ಪಳ. ದೂ: ೦೮೫೩೯-೨೦೦೭೫೫, ೯೬೩೨೪೪೭೫೮೯, ೯೪೪೮೧೬೯೨೨೭, ೦೮೫೩೯-೨೨೫೦೩೦ ವಿಳಾಸಕ್ಕೆ ೬೦ ದಿನಗಳ ಒಳಗಾಗಿ ಬಂದು ಶಿಶುವನ್ನು ಪಡೆಯಬಹುದು. ಪೋಷಕರು ಪತ್ತೆಯಾಗದಿದಲ್ಲಿ ಶಿಶುವನ್ನು ಕಾನೂನು ಪ್ರಕಾರ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ ಅಧ್ಯಕ್ಷರು ತಿಳಿಸಿದ್ದಾರೆ.
0 comments:
Post a Comment