ಅವರು ನಿವಾಸದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡುತ್ತ,ಸರ್ಕಾರಿ ಹಾಗೂ ನಿರುದ್ಯೋಗಿ ಅಂಗವಿಕಲ ಅನೇಕ ಬೇಡಿಕೆಗಳು ಉತ್ತಮವಾಗಿದ್ದು,ಅಲ್ಲದೆ ಇಂತಹ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಮುಂದಿನ ಲೋಕಸಭಾ ಅಧಿವೇಶನದಲ್ಲಿ ಪ್ರಶ್ನೆಸುವುದಲ್ಲದೆ ಪ್ರಧಾನ ಮಂತ್ರಿ ಹಾಗೂ ರೈಲ್ವೇ ಸಚಿವರ ಗಮನಕ್ಕೆ ತಂದು ಶೀಘ್ರವೇ ಬೇಡಿಕೆಗಳ ಈಡೇರಿಕೆಗಾಗಿ ಪ್ರಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಹೇಳಿದರು.
ಇದಕ್ಕೂ ಮುನ್ನ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರ್ಕಾರಿ ಅಂಗವಿಕಲ ನೌಕರರಿಗೆ ೮೦ ಯು ಪ್ರಕಾರ ಆಧಾಯ ತೆರಿಗೆಯಲ್ಲಿ ೫೦ಸಾವಿರುಗಳ ವಿನಾಯತಿ ನೀಡಲಾಗಿದ್ದು ಇದನ್ನು ೧ ಲಕ್ಷಕ್ಕೆ ಏರಿಕೆ ಮಾಡಬೇಕು,ಪ್ರತಿಯೊಂದು ರೈಲುಗಳಿಗೆ ಅಂಗವಿಕಲರ ೨ ಪ್ರತ್ಯೇಕ ಬೋಗಿಗಳನ್ನು ಅಳವಡಿಸಬೇಕು,ಕೇಂದ್ರ ಸರ್ಕಾರದ ಅನುದಾನದಲ್ಲಿ ಅಂಗವಿಕಲರಿಗೆ ಶೇಕಡಾ ೩ ರಷ್ಟು ಅನುಧಾನಗಳ ಸಮರ್ಪಕ ಬಳಕೆಗೆ ಸೂಚಿಸಬೇಕು,ಕೊಪ್ಪಳ ನಗರದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘಕ್ಕೆ ನಿವೇಶನವನ್ನು ಒದಗಿಸಿಕೊಡಬೇಕು,ನಿರುದ್ಯೋಗಿ ಅಂಗವಿಕಲರು ಸ್ವ ಉದ್ಯೋಗ ಕೈಗೊಳ್ಳಲು ಅವರಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಹಾಜರಿದ್ದರು.
0 comments:
Post a Comment