PLEASE LOGIN TO KANNADANET.COM FOR REGULAR NEWS-UPDATES

ದಿನಾಂಕ ೧೬.೧೦.೧೪ ರಂದು ಬಾಲಕರ ಸ.ಪ.ಪೂ ಕಾಲೇಜಿನಿಂದ ಬಸಾಪಟ್ಟಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಒಂದನೇ ದಿನದ ಚಿಂತನ ಕಾರ್ಯಕ್ರಮದಲ್ಲಿ ೩೭೧(ಜೆ) ಕಲಂ ಅನುಷ್ಠಾನ ಸಾಧಕ ಬಾದಕಗಳು ಕುರಿತು ಜನಸಂಗ್ರಾಮ ಪರಿಷತ್‌ನ ಕಾರ್ಯದರ್ಶಿಗಳಾದ  ಧನರಾಜ್ ರವರು ಉಪನ್ಯಾಸ ನೀಡುತ್ತಾ ಬಹಳ ವರ್ಷದ ಕನಸು ಈಡೇರಿದ್ದರೂ ಇನ್ನೂ ಸರ್ಕಾರ ಮತ್ತು ಜನಪ್ರತಿನಿಧಿಗಳ ತಿಳುವಳಿಕೆಯ ಕೊರತೆಯಿಂದಾಗಿ ಸಂಪೂರ್ಣವಾಗಿ ಜಾರಿಯಲ್ಲಿ ತರದೆ ತುಟಿಗೆ ತುಪ್ಪ ನೆಕ್ಕಿಕೊಳ್ಳುತ್ತಾ ಕೂಡುವಂತೆ ಮಾಡಲಾಗಿದೆ. ನಂಜುಂಡಪ್ಪ ವರದಿಯ ಅಂಶಗಳನ್ನಿಟ್ಟುಕೊಂಡು, ಇಲ್ಲಿನ ಅಸಮಾನತೆಗಳನ್ನಿಟ್ಟುಕೊಂಡು ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಕಲಂ ೩೭೧ರ(ಜೆ) ಗಾಗಿ ಬಹಳ ವರ್ಷಗಳಿಂದ ಹೋರಾಟ ನಡೆಯಿತು. 
         
ಈ ಭಾಗದಾದ್ಯಂತ ನಡೆದ ಹೋರಾಟದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ದೆಹಲಿಯ ಜಂತರ್ ಮಂತರ್ ವರೆಗೂ ಅದನ್ನು ಕೊಂಡೊಯ್ದರು. ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿ ಈ ಮೂರು ಅಂಶಗಳ ಮೀಸಲಾತಿಗಾಗಿ ನಡೆದ ಹೋರಾಟ ಯಶಸ್ವಿಯಾಗಿದೆ. ಕಲಂ ಜಾರಿಯಾಗಿದೆ. ಆದರೆ ಇನ್ನೂ ಈ ಮೂರು ಅಂಶಗಳಲ್ಲಿ ನಮಗಿನ್ನೂ ಫಲಸಿಗಬೇಕಾಗಿದೆ. ಇನ್ನು ಮುಂದೆ ಈ ಕಲಂ ಜಾರಿಯಾಯ್ತು ಇನ್ನೇನು ನಮ ಕಷ್ಟ ಪರಿಹಾರವಾಯ್ತು ಎಂದುಕೊಂಡರೆ ಸಾಲದು ವಿದ್ಯಾರ್ಥಿಗಳಾದ ನೀವೆಲ್ಲಾ ಈ ಭಾಗದ ಅಭಿವೃದ್ಧಿಗಾಗಿ ಚಿಂತಿಸಬೇಕು. ಅದರ ಜಾರಿಗಾಗಿ ನೀವೆಲ್ಲಾ ಒಕ್ಕೊರಲಿನಿಂದ ಕೂಗಬೇಕು. ಶೈಕ್ಷಣಿಕ ವಿಭಾಗದಲ್ಲಿ ಉನ್ನತ ಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ಸಿಗಬೇಕು. ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳ ಮೂಲಕ ಜನರಿಗೆ ಉದ್ಯೊಗ ಸಿಗುವಂತಾಗಬೇಕು ಮತ್ತು ಹೆಚ್ಚಿನ ರಾಜಕೀಯ ಸ್ಥಾನಮಾನಗಳು ಸಿಗುವಂತಾಗಬೇಕು. ಕಾನೂನನ್ನು ಸರಿಯಾಗಿ ತಿಳಿದುಕೊಳ್ಳವುದಾಗಬೇಕು. ೩೭೧ ರ ಮೇಲೆ ನಡೆಯುವ ಅನ್ಯಾವನ್ನು ನಿಲ್ಲಿಸಬೇಕು. ನಮ್ಮ ಮೀಸಲಾತಿ ಹಕ್ಕನ್ನು ಪಡೆದು ನಾವೆಲ್ಲಾ ಪಡೆಯುವಂತಾಗಬೇಕು ಎಂದು ಸವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಏ.ಕೆ.ಮಹೇಶಕುಮಾರ್, ಎನ್.ಎಸ್.ಎಸ್ ಸಲಹಾ ಸಮಿತಿ ಸದಸ್ಯ ಪೂಜಾರಿ ನರಸಪ್ಪ ನಾಯಕ,  ಯುವ ಮುಖಂಡ ಮಹಮ್ಮದ್ ದಳಪತಿ, ಎನ್.ಎಸ್.ಎಸ್ ಸಲಹಾ ಸಮಿತಿ ಸದಸ್ಯ ಮಲ್ಲಿಕಾರ್ಜುನ್, ಗ್ರಾಮ ಪಂಚಾಯತ್ ಸದಸ್ಯ ಲಕ್ಮಣ ಮತ್ತು ಕಾರ್ಯಕ್ರಮಾಧಿಕಾರಿಗಳಾದ ಸೋಮಶೇಖರಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಔಷದ ವ್ಯಾಪಾರಿ ಸಂಘದ ಅಧ್ಯಕ್ಷರಾದ ಅಶೋಕಸ್ವಾಮಿ ಹೇರೂರ್ ವಹಿಸಿದ್ದರು. ಎನ್.ಎಸ್.ಎಸ್. ನ ಶಿಬಿರಾರ್ಥಿ ವಿಜಯಕುಮಾರ್ ನಿರೂಪಿಸಿದರು.

Advertisement

0 comments:

Post a Comment

 
Top