PLEASE LOGIN TO KANNADANET.COM FOR REGULAR NEWS-UPDATES



ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಗುಲ್ಬರ್ಗದ ಚೈತನ್ಯಮಯೀ ಆರ್ಟ ಗ್ಯಾಲರಿ,ಚಂದನ ಫೋಟೋ ಹೌಸ್.ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಹಾಗೂ ಎನ್.ಟೆಲ್ ಮೊಬೈಲ್ ಕಂಪನಿಯವರು ಜಂಟಿಯಾಗಿ ಏರ್ಪಡಿಸಿದ್ದ, ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಪ್ರತಿಭಾವಂತ ಫೋಟೋಗ್ರಾಫರ್ ಪ್ರಕಾಶ ಕಂದಕೂರ ಸೆರೆಹಿಡಿದ ಛಾಯಾಚಿತ್ರಕ್ಕೆ ನಿಸರ್ಗ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರೆತಿದೆ.
ಕೊಪ್ಪಳದ ಬೆಟ್ಟದಲ್ಲಿರುವ ಈಶ್ವರಲಿಂಗದ ಶಿಲ್ಪದ ಎದುರು ಒಂದು ಅಳಿಲು ಪ್ರಸಾದ ತಿನ್ನುತ್ತಿರುವ ಸಂದರ್ಭದಲ್ಲಿ.ಅಳಿಲು ಕೈಮುಗಿದು ಸೇವೆ ಮಾಡುತ್ತದೆಯೇನೋ ಎಂಬಂತೆ  ನಿಸರ್ಗ ಸಹಜವಾಗಿ ‘ಅಳಿಲು ಸೇವೆ’ಶೀರ್ಷಿಕೆಯ ಭಾವಚಿತ್ರವನ್ನು ತೀರ್ಪುಗಾರರು ಮೊದಲ ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ.
ಮೂರು ಸಾವಿರ ರೂಪಾಯಿ ನಗದು ಹಾಗೂ ಪ್ರಮಾಣ ಪತ್ರಗಳನ್ನು ಇತ್ತೀಚೆಗೆ ಗುಲಬರ್ಗಾದಲ್ಲಿ ನಡೆದ ವಿಶ್ವ ಛಾಯಾಚಿತ್ರ ದಿನದ ಸಮಾರಂಭದಲ್ಲಿ ಪ್ರಕಾಶ ಕಂದಕೂರ ಅವರಿಗೆ ನೀಡಿ ಗೌರವಿಸಲಾಯಿತು.
ಗುಲಬರ್ಗಾ ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಮಹಿಪಾರಡ್ಡಿ ಮುನ್ನೂರ,ಎಂ.ಎನ್.ಎಸ್.ಶಾಸ್ತ್ರಿ,ಕರ್ನಾಟಕ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಪ್ರಕಾಶ ಕಂದಕೂರ ಅವರ ಈ ಸಾಧನೆಗೆ ಕೊಪ್ಪಳ ಜಿಲ್ಲಾ ತಿರುಳ್ಗನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ಅಂಗಡಿ,ಕಾರ್ಯದರ್ಶಿ ಮಂಜುನಾಥ ಡಿ.ಡೊಳ್ಳಿನ,ಬಸವರಾಜ ಕರುಗಲ್,ಬಸವರಾಜ ಬಿನ್ನಾಳ,ಶಿವರಾಜ ನುಗಡೋಣಿ,ಗಿರೀಶ ಪಾನಘಂಟಿ ಮೊದಲಾದವರು ಹರ್ಷ ವ್ಯಕ್ತಪಡಿಸಿದ್ದಾರೆ. 

Advertisement

0 comments:

Post a Comment

 
Top