ಕೊಪ್ಪಳ ತಾಲೂಕಿನ ಗುಳದಳ್ಳಿ ಹಾಗೂ ತೊಗರಿ ಗ್ರಾಮಗಳಲ್ಲಿ ಡೆಂಗ್ಯೂ ಕಾಯಿಲೆಗಳ ಹರಡುವಿಕೆ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ಎಂ.ಎಂ.ಕಟ್ಟಿಮನಿ ಅವರು ಸ್ಪಷ್ಠೀಕರಣ ನೀಡಿದ್ದಾರೆ.
ಗುಳದಳ್ಳಿ ಗ್ರಾಮದಲ್ಲಿ ಜ್ವರ ಪ್ರಕರಣಗಳು ಕಂಡು ಬಂದ ಪ್ರಯುಕ್ತ ಸೆ.15 ರಿಂದ ಸ್ಥಳೀಯವಾಗಿ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ಇದುವರೆಗೂ 82 ಜ್ವರ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. 450 ಮನೆಗಳಲ್ಲಿ ಲಾರ್ವಾ ಸಮೀಕ್ಷಾ ಮತ್ತು ಸೊರ್ಸ ರಿಡಕ್ಷನ್ ಕಾರ್ಯಕ್ರಮ ಜರುಗಿಸಲಾಗಿದೆ. ಕುಡಿಯುವ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಲಾಗಿದೆ. ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಅದರಂತೆ ತಿಗರಿ ಗ್ರಾಮದಲ್ಲಿ ಜ್ವರ ಪ್ರಕರಣಗಳು ಸೆ.13 ರಿಂದ ಕಂಡು ಬಂದಿದ್ದು, 1 ಪ್ರಕರಣ ಎಸ್.ಡಿ.ಎಂ. ಧಾರವಾಡದಲ್ಲಿ, 2 ಪ್ರಕರಣಗಳು ಕೆ.ಎಲ್.ಇ. ಬೆಳಗಾವಿಯಲ್ಲಿ ದಾಖಲಾಗಿ ಸಂಶಯಾಸ್ಪದ ಡೆಂಗ್ಯೂ ಪ್ರಕರಣಗಳಾಗಿ ದಾಖಲಾಗಿದೆ. ಸೆ.13 ರಿಂದ ಸ್ಥಳೀಯವಾಗಿ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ವೈದ್ಯಾಧಿಕಾರಿಗಳ ನೇರ ನಿಗಾವಣಿಯಲ್ಲಿ ಸರ್ವ ಸಿಬ್ಬಂದಿಯವರ ಕರ್ತವ್ಯನಿರ್ವಹಿಸುತ್ತಿದ್ದ 31 ರಕ್ತ ಲೇಪನಗಳನ್ನು ಸಂಗ್ರಹಿಸಲಾಗಿರುತ್ತದೆ. 390 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ಮತ್ತು ಸೊರ್ಸ್ ರಿಡಕ್ಷನ್ ಕಾರ್ಯಕೈಗೊಂಡಿದ್ದು, 28 ಮನೆಗಳಲ್ಲಿ ಲಾರ್ವಾಗಳು ಕಂಡು ಬಂದಿರುವುದನ್ನು ದೃಢಪಡಿಸಿ ನೀರಿನ ಮೂಲಗಳನ್ನು ಖಾಲಿ ಮಾಡಿ ಲಾರ್ವಾ ನಾಶಗೊಳಿಸಲಾಗಿದೆ. ಸಂಶಯಾಸ್ಪದ ಜ್ವರ ಪ್ರಕರಣಗಳಲ್ಲಿ 10 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಸ್ಥಳೀಯ ಜಿಲ್ಲಾ ಸರ್ವೇಕ್ಷಣಾ ಘಟಕದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿ ಯಾವುದೇ ಪ್ರಕರಣಗಳು ದೃಢಪಟ್ಟಿರುವುದಿಲ್ಲ. ಈ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣಗಳ ಹರಡುವಿಕೆ, ನಿಯಂತ್ರಣ ಕುರಿತಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಡಾ|| ಎಂ.ಎಂ.ಕಟ್ಟಿಮನಿ ತಿಳಿಸಿದ್ದಾರೆ.
0 comments:
Post a Comment