PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮದ ಗವಿಸಿದ್ದಪ್ಪ ತಂದೆ ರಾಮಪ್ಪ ಮಡಿವಾಳರ (14) ಎಂಬ ಬಾಲಕನು ಸೆ.03 ರಂದು ಹೊಲಕ್ಕೆ ಎತ್ತುಗಳನ್ನು ಕಟ್ಟಿ ಬರುತ್ತೇನೆ ಎಂದು ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಬಾಲಕನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ  ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ಬಾಲಕನ ಹೆಸರು ಮತ್ತು ವಿಳಾಸ : ಗವಿಸಿದ್ದಪ್ಪ ತಂದೆ ರಾಮಪ್ಪ ಮಡಿವಾಳರ (14) ಸಾ|| ಕಾಮನೂರು ತಾ||ಜಿ||ಕೊಪ್ಪಳ, ಜಾತಿ : ಮಡಿವಾಳರ, ಕನ್ನಡ ಭಾಷೆ ಮಾತನಾಡುತ್ತಾನೆ. ಉದ್ದನೆಯ ಮುಖ, ಸಾದಾಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿರುತ್ತಾನೆ. ಮೈಮೇಲೆ ನೀಲಿ ಬಣ್ಣದ ಶರ್ಟ, ಕೆಂಪು ಬಣ್ಣದ ನಿಕ್ಕರ ಧರಿಸಿದ್ದಾನೆ.
ಈ ಮೇಲ್ಕಂಡ ಚಹರೆಯುಳ್ಳ ಬಾಲಕನ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಮೊ.9480803746, 08539-221333, ಸಿಪಿಐ ಕೊಪ್ಪಳ ಮೊ.9480803731, ಡಿವೈಎಸ್ಪಿ ಕೊಪ್ಪಳ ಮೊ.9480803720, 08539-230342, ಎಸ್.ಪಿ. ಕಛೇರಿ ಕೊಪ್ಪಳ 08539-230111 ಹಾಗೂ ಕಂಟ್ರೋಲ್ ರೂಂ. ದೂ.08539-230100, 08539-230222 ಈ ದೂರವಾಣಿಗಳಿಗೆ ಸಂಪರ್ಕಿಸುವಂತೆ  ತಿಳಿಸಿದೆ.


ಕೊಪ್ಪಳದಿಂದ ಬಾಲಕ ಕಾಣೆ

 ಕೊಪ್ಪಳದ ಕಲ್ವರಿ ಚಾಪೇಲ್ ಟ್ರಸ್ಟನ  ಕೇರ್ & ಪ್ರೊಟೆಕ್ಷನ್ ಕೇಂದ್ರದಲ್ಲಿದ್ದ ರವಿಕಿರಣ (15) ಸಾ|| ಬೆಂಗಳೂರು ಎಂಬ ಬಾಲಕ ಸೆ.18 ರಿಂದ ಕಾಣೆಯಾಗಿದ್ದು, ಈ ಬಾಲಕನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಅಶೋಕ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
  ಬೆಂಗಳೂರಿನ ಬಾಲಕ ರವಿಕಿರಣ (15), ಕೊಪ್ಪಳದ ಹೊಸಪೇಟೆ ರಸ್ತೆಯ ಕಲ್ವರಿ ಚಾಪೇಲ್ ಟ್ರಸ್ಟ್, ಎಚ್.ಐ.ವಿ./ಏಡ್ಸ್ ಮತ್ತು ಬೆಂಬಲ ಕೇಂದ್ರದಲ್ಲಿದ್ದ.  ಈತ ಕನ್ನಡ ಹಾಗೂ ತಮಿಳು ಭಾಷೆ ಮಾತನಾಡುತ್ತಾನೆ. 8ನೇ ತರಗತಿ ಓದಿದ್ದಾನೆ. ಎತ್ತರ 4” 5”, ಸಾಧಾರಣ ಮೈಕಟ್ಟು, ಕೊಲು ಮುಖ, ಗೋದಿಕೆಂಪು ಮೈಬಣ್ಣ ಹೊಂದಿದ್ದಾನೆ. ನೀಲಿ ಬಣ್ಣದ ಎಂಬ್ರಾಯಡರಿ ಇರುವ ಆಫ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ಈ ಮೇಲ್ಕಂಡ ಚಹರೆಯುಳ್ಳ ಬಾಲಕನ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮೊ.9480803745, ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಮೊ.9845664349, ನಗರ ಪೊಲೀಸ್ ಠಾಣೆಯ ದೂ.ಸಂಖ್ಯೆ: 08539-220333 ಹಾಗೂ ಕಂಟ್ರೋಲ್ ರೂಂ ದೂ.ಸಂಖ್ಯೆ: 08539-230100, 08539-230222 ಈ ದೂರವಾಣಿಗಳಿಗೆ ಸಂಪರ್ಕಿಸುವಂತೆ  ತಿಳಿಸಿದೆ.


Advertisement

0 comments:

Post a Comment

 
Top