PLEASE LOGIN TO KANNADANET.COM FOR REGULAR NEWS-UPDATES



ಸರಕಾರಿ ಮಹಿಳಾ ಪದವಿ ಕಾಲೇಜು ಭಗತ ಸಿಂಗ್‌ರವರ ೧೦೮ನೇ ಜನ್ಮದಿನಾಚಾರಣೆಯನ್ನು ಆಚರಿಸುವಲ್ಲಿ ಸಾಕ್ಷಿಯಾಯಿತು. ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್)ಜಿಲ್ಲಾ ಸಮಿತಿ ಇದನ್ನು ಆಯೋಜಿಸಿತ್ತು.
ಭಗತ್‌ಸಿಂಗ್ ರವರ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್) ರಾಜ್ಯ ಕಾರ್ಯಕರಣಿ ಸದಸ್ಯರಲ್ಲೊಬ್ಬರಾದ ವಿಜಯಕುಮಾರ ಚಿತ್ರದುರ್ಗಾ ಮಾತನಾಡುತ್ತಾ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಭಗತ್‌ಸಿಂಗ್ ರವರು ದೇಶದ ವಿಮೋಚನೆಗಾಗಿ ಕನಸುಕಾಣುತ್ತಿದ್ದುದ್ದನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಾ ಭಾರತದ ಇತಿಹಾಸವನ್ನು  ನೆನಪಿಸುತ್ತಾ ನಮ್ಮ ದೇಶದ ಸ್ವಾತಂತ್ರ ಹೋರಾಟದಲ್ಲಿ ವಿಭಿನ್ನ ದೋರಣೆಯ ಸ್ಪಷ್ಟವಾದ ಎರಡು ಗುಂಪುಗಳಿದ್ದವು. ಒಂದು ಬಣ ಬ್ರಿಟಿಷರೊಂದಿಗೆ ರಾಜಿ ಸಂದಾನಗಳನ್ನು ಮಾಡಿಕೊಳ್ಳುತಾ ಕೇವಲ ರಾಜಕೀಯ ಸ್ವಾತಂತ್ರಕ್ಕಾಗಿ ಬೇಡುತ್ತಿತ್ತು. ಮಹಾತ್ಮ ಗಾಂಧಿಜಿಯವರು ಇದರ ನಾಯಕರಾಗಿದ್ದರು. ಆದರೇ ಇನ್ನೊಂದು ಬ್ರಿಟಿಷರ ಯಾವುದೆ ಸಂದಾನಕ್ಕೆ ಸಿದ್ದವಿರದೆ ಸಂಪೂರ್ಣ ಸ್ವರಾಜ್ಯವನ್ನು   ಹಾಗೂ ಸಮಾಜವಾದಿ ಸಮಾಜ ಸ್ಥಾಪನೆಯ ಗುರಿಯನ್ನು ಹೋತ್ತು ಕ್ರಾಂತಿಕಾರಿ ಮಾರ್ಗದಲ್ಲಿ ಮುನ್ನಡೆಯುತ್ತಾ ಇದರ ಅಗ್ರಗಣ್ಯ ನಾಯಕನಾಗಿ ಭಗತ್‌ಸಿಂಗ್ ಹೋರಹೊಮ್ಮಿದರು. ಅವರ ಹೋರಾಟದ ದಾರಿಗೆ ಹೇದರಿ ಬ್ರಿಟಿಷ ಸರಕಾರ ಕಾನೂನಿನ ಎಲ್ಲಾ ರೀತಿ ನೀತಿಗಳನ್ನು ಗಾಳಿಗೆ ತೂರಿ ಪಿತೂರಿಯಿಂದ ಅವರನ್ನು ಗಲ್ಲಿಗೆರಿಸಿತು. ಆದರೆ ಅವರ ವಿಚಾರಗಳ ಜ್ವಾಲೆ ದೇಶದಲ್ಲೇಲ್ಲಾ ಹರಡಿ ಬಲಿಷ್ಠ ಹೋರಟವಾಗಿ ಬೆಳೆಯಿತು ಇದರಿಂದ ಬ್ರಿಟಿಷರು ದೇಶಬಿಟ್ಟು ತೊಲಗಿದರು. ಆದರೆ ಕೊನೆಕ್ಷಣದಲ್ಲಿ ರಾಜಿಪರ ಪಂಥವು ಮೇಲುಗೈಸಾಧಿಸಿ ಸ್ವಾತಂತ್ರವನ್ನು ಪಡೆಯಿತು. ಆ ಸ್ವಾತಂತ್ರ ಜನತೆಯ ಸಂಪೂರ್ಣ ಸ್ವಾತಂತ್ರ ವಾಗದೆ ಅರೆಬೆಂದ ಸ್ವಾತಂತ್ರವಾಗಿದೆ. ಆದ್ದರಿಂದ ಇಂದಿಗೂ ಕೂಡಾ ಹಲವಾರು ಮೂಲಭೂತ ಸಮಸ್ಯಗಳು ನಮ್ಮನ್ನು ಕಾಡುತ್ತಿವೆ. ಈ ಸಂಧರ್ಭದಲ್ಲಿ ಭಗತ್‌ಸಿಂಗ್‌ರವರ ಕನಸು ನನಸ್ಸಾಗಿಸಲು ಅವರ ಮಾರ್ಗದಲ್ಲಿ ಹೋರಾಟ ಮುಂದುವರಿಸಬೇಕಾಗಿದೆ. ಆಗ ಮಾತ್ರ ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಆದಿಕ್ಕಿನಲ್ಲಿ ನಾವೆಲ್ಲರು ಮುನ್ನಡೆಯೋಣ ಎಂದು ಕರೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಪ್ರಾಂಶುಪಾಲರಾದ ಪ್ರಭುರಾಜ ರವರು ಮಾತನಾಡಿ ಭಗತ್ ಸಿಂಗ ರವರ ಜೀವನದಲ್ಲಿ ನಡೆದ ಹಲವಾರು ಘಟನೆಗಳನ್ನು ವಿವರಿಸುತ್ತಾ ಇಂದಿನ ದಾರಿ ತಪ್ಪುತ್ತಿರುವ ಯುವಜನಕ್ಕೆ ಭಗತ್‌ಸಿಂಗರಂತವರು ಸ್ಪೂರ್ತಿಯ ಸೆಲೆಯಾಗಬೇಕೆಂದು ಅಭಿಪ್ರಾಯಪಟ್ಟರು. 
ಮತ್ತೋಬ್ಬ ಉಪನ್ಯಾಸಕರಾದ ದೇವಂದ್ರಪ್ಪ ರವರು ಭಗತ್‌ಸಿಂಗ ರವರ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶರಣು ಗಡ್ಡಿ, ಉಸ್ತುವಾರಿಯನ್ನು ರಮೇಶ ವಂಕಲಕುಂಟಿ ಎ.ಐ.ಡಿ.ವೈ.ಓ ಕಾರ್ಯದರ್ಶಿಗಳು ವಹಿಸಿದ್ದರು.
ಕಾಂiiಕ್ರಮದಲ್ಲಿ ಮಂಜುಳಾ, ರಜಿಯಾಬೇಗಂ ಲಕ್ಷ್ಮೀ, ಸಂಗೀತಾ ಶಿವು ಗೀಣಗೇರಾಮತ್ತು ಹಲವಾರು ವಿದ್ಯಾರ್ಥಿನೀಯರು ಭಾಗವಹಿಸಿದ್ದರು. 

Advertisement

0 comments:

Post a Comment

 
Top