PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಸೆ. ೨೩-ನಿವೃತ್ತ ಅಸಂಘಟಿಕ ಕಾರ್ಮಿಕರು ೧೫ ವಯಸ್ಸಿನಿಂದ ೪೦ ವರ್ಷಗಳಿಗೂ ಹೆಚ್ಚಿನ ಅವಧಿ ಹಗಲು-ರಾತ್ರಿ ಎನ್ನತೆ ಬೇವರಿನ ದುಡಿಮೆಯಿಂದ ನಗರ, ನಾಲೆ, ಡ್ಯಾಮ್, ಸೇತುವೆಗಳನ್ನು ಕಟ್ಟಿನ ನಾನಾ ರೀತಿಯ ಅತ್ಯಾವಶ್ಯಕ ಸೇವೆಗಳಲ್ಲಿ ದುಡಿದು ಕೃಷಿ, ಕೈಗಾರಿಕಾ, ಸೇವಾ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಲಕ್ಷ, ಕೋಟಿಗಳನ್ನು ಮೀರಿರುವಂತ ಗಣನೀಯ ಕೊಡುಗೆಯನ್ನು ಆಧರಿಸಿ ಅವರು ಒತ್ತಾಯಿಸಿತ್ತಿರುವ ತಿಂಗಳಿಗೆ ೫೦೦೦ ರೂ. ಮೂಲ ಪಿಂಚಿಣಿ ನಿಗಧಿಯಾಗಬೇಕು. ಅದರ ಜೊತೆ ಬೆಲೆ ಏರಿಕೆ ಸರಿದೂಗಿಸಲು ಸರ್ಕಾರ ನಿಗದಿಪಡಿಸುವ ಕಡ್ಡಾಯ ಡಿ.ಎ., ಕುಟುಂಬ ಮತ್ತು ಸಮುದಾಯದ ನಿರ್ಲಕ್ಷ್ಯಗೊಳಪಡುತ್ತಿರುವ ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಒಂದು ಹೊತ್ತು ಬಿಸಿಯೂಟ ನೀಡಬೇಕು. ಅವರ ಕನಿಷ್ಟ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್, ಬಿ.ಪಿ, ಕ್ಯಾಲ್ಸಿಯಂ ಮಾತ್ರೆ ಅವಶ್ಯವಾಗಿ ಪೂರೈಕೆಯಾಗಬೇಕು ಎಂಬ ಮುಂತಾದ ಬೇಡಿಕೆಗಳನ್ನು ಈಡೇರಿಕೆಗಾಗಿ ನಿವೃತ್ತ ಅಸಂಘಟಿತ ಕಾರ್ಮಿಕ ಪರವಾಗಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರದಂದು ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಹಿ ಸಂಗ್ರಹ ಚಳುವಳಿಗೆ ನಿವೃತ್ತ ಪ್ರಾಚಾರ್ಯ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ಅಲ್ಲಮಪ್ರಭು ಬೆಟ್ಟದೂರು ಹಾಗೂ ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್ ರೀಬನ್ ಕತ್ತಿರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾನಸ ಪ್ರಕಾಶನದ ಅಧ್ಯಕ್ಷ ಡಾ. ಮಹಾಂತೇಶ ಮಲ್ಲನಗೌಡ್ರ, ವೀರಗನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರು, ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಚಾಲಕ ಮೈಲಪ್ಪ ಬಿಸರಳ್ಳಿ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್, ಗುರು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖಂಡ ವಜೀರಸಾಬ ತಳಕಲ್, ಅಬ್ದುಲ್ ವಹಾಬ್, ಮಲ್ಲಯ್ಯ ಪ್ರಿಂಟರ‍್ಸ್ ಮಾಲಿಕ ಹೆಚ್.ಕೆ. ಸುಭಾಸ, ಸೇವಾ ಸಂಸ್ಥೆಯ ಅಧ್ಯಕ್ಷ ರಾಜಾಬಕ್ಷಿ ಹೆಚ್.ವಿ., ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಸಿ. ಕಾಲಿಮಿರ್ಚಿ ಮತ್ತಿತರರು ಭಾಗವಹಿಸಿದ್ದರು.

Advertisement

0 comments:

Post a Comment

 
Top