ಕೊಪ್ಪಳ : ಅಂತರ್ಜಾತಿಯ ವಿವಾಹವಾದ ಯುವ ಪ್ರೇಮಿಗಳಿಬ್ಬರು ಈಗ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೊಕ್ಕಿದ್ದಾರೆ. ಯಲಬುರ್ಗಾ ತಾಲೂಕಿನ ಮಂಜುನಾಥ ಕೊನಸಾಗರ ಮತ್ತು ನೀಲಮ್ಮ ಚಳಗೇರಿ ಕಳೆದ ತಿಂಗಳು 18ರಂದು ರಿಜಿಸ್ಟರ್ ಮದುವೆಯಾಗಿದ್ದಾರೆ.
ಹುಡುಗನ ಮನೆಯವರಿಂದ ಯಾವುದೇ ತಕರಾರಿಲ್ಲ. ಆದರೆ ಹುಡುಗಿಯ ಕಡೆಯ ಜನ ಬಂದು ಜೀವ ಬೆದರಿಕೆ ಹಾಕಿದ್ದಾರೆ.
ಅಲ್ಲದೆ ಕಿಡ್ನಾಪ್ ಕೇಸ್ ಹಾಕಿದ್ದಾರೆ. ಇಬ್ಬರೂ ವಯಸ್ಕರು ಮತ್ತು ಅಧಿಕೃತವಾಗಿಯೇ ಮದುವೆಯಾಗಿದ್ದಾರೆ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ರಕ್ಷಣೆಗೆ ಮೊರೆ ಹೋಗಿದ್ದಾರೆ.
0 comments:
Post a Comment