ಕೊಪ್ಪಳ : ಕೊಪ್ಪಳ ತಾಲೂಕಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ದಿ.6ರಂದು ಬೆಳಿಗ್ಗೆ 10 ಗಂಟೆಗೆ ಶಿವಶಾಂತವೀರ ಮಂಗಲಭವನದಲ್ಲಿ ಶಿಕ್ಷಕರ ದಿನಾಚರಣೆ-ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ರುಸ್ಮಾದ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾನಘಂಟಿ ಸರಕಾರದಿಂದ ಹಮ್ಮಿಕೊಳ್ಳಲಾಗುವ ಶಿಕ್ಷಕರ ದಿನಾಚರಣೆಯಲ್ಲಿ ನಮ್ಮ ಶಿಕ್ಷಕರನ್ನು ನಿರ್ಲಕ್ಷಿಸಲಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಹಲವಾರು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಶಿಕ್ಷಕಿಯರಿದ್ದಾರೆ. ಅವರಿಗೆ ಗೌರವಿಸುವ,ಸನ್ಮಾನಿಸುವ ಕಾರ್ಯಕ್ರಮವನ್ನು ಕ್ರುಸ್ಮಾದಿಂದ ಹಮ್ಮಿಕೊಳ್ಳಲಾಗಿದೆ. ತಾಲೂಕ ಸಂಘಟನೆಯಲ್ಲಿ 75 ಸಂಸ್ಥೆಗಳಿವೆ. ಆಯಾ ಶಾಲೆಗಳೇ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುತ್ತವೆ. ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಉತ್ತಮವಾದ ಸೌಲಭ್ಯ ಮತ್ತು ವೇತನಗಳನ್ನು ಕೊಡಲಾಗುತ್ತಿದೆ. ಹೀಗಾಗಿ ಶಿಕ್ಷಕರು ನಿರಂತರವಾಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ಶಾಲೆಗಳು ಇದಕ್ಕೆ ಅಪವಾದವಿರಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಹ್ಲಾದ ಅಗಳಿ, ಮಹಮದ್ ಅಲಿಮುದ್ದೀನ್ ,ವಿಜಯಕುಮಾರ ಕರಡಿ,ಹುಲಗಪ್ಪ ಕಟ್ಟಿಮನಿ, ನಾಗರಾಜ ಚಿಲವಾಡ್ಗಿ, ಮಲ್ಲಿಕಾರ್ಜುನ ಚೌಕಿಮಠ ಉಪಸ್ಥಿತರಿದ್ದರು
0 comments:
Post a Comment