PLEASE LOGIN TO KANNADANET.COM FOR REGULAR NEWS-UPDATES

 ಜಾನಪದ ವಿದ್ವಾಂಸ, ನಾಡೋಜ ಎಚ್.ಎಲ್. ನಾಗೇಗೌಡರ ಜನ್ಮ ಶತಮಾನೋತ್ಸವ ಅಂಗವಾಗಿ ಜಿಲ್ಲಾ ಮಟ್ಟದ ಜನಪದ ಗೀತಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತರು ಭಾಗವಹಿಸಲು ಕೋರಲಾಗಿದೆ. 
ಜನಪದ ಗೀತಗಾಯನ ಸ್ಪರ್ಧೆಯಲ್ಲಿ ಬಾಗವಹಿಸುವವರು ೧೫ ರಿಂದ ೩೫ ವರ್ಷದೊಳಗಿನವರಾಗಿರಬೇಕು. ತಪ್ಪದೆ ವಯಸ್ಸಿನ ದಾಖಲಾತಿ ಹಾಜರುಪಡಿಸಬೇಕು. ತಂಡದಲ್ಲಿ ಕನಿಷ್ಟ ೫, ಗರಿಷ್ಡ ೮ ಜನ ಭಾಗವಹಿಸಬಹುದು. ಚರ್ಮವಾದ್ಯಗಳನ್ನು ಬಳಸಿಕೊಂಡು ಮೂಲ ಜನಪದ ಗೀತೆಗಳನ್ನು ಮಾತ್ರ ಹಾಡಬೇಕು. ಸ್ಪರ್ಧೆಗಳು ೧೦ ನಿಮಿಷದಲ್ಲಿ ಮೂರು ಹಾಡುಗಳನ್ನು ಹಾಡಬಹುದಾಗಿದೆ. ಯುವಕ ಯುವತಿಯರು ಸೇರಿ ಹಾಡಬೇಕು. ಸ್ಪರ್ಧಾಳುಗಳಿಗೆ ಯಾವುದೇ ಸಂಭಾವನೆ ಹಾಗೂ ಪ್ರಮಾಣ ಭತ್ಯೆ ನೀಡಲಾಗುವುದಿಲ್ಲ. ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬೇಕು. ತೀರ್ಪುಗಾರರ ತೀರ್ಮಾನವೆ ಅಂತಿಮ. ವಿಜೇತ ತಂಡಗಳಿಗೆ ಪ್ರಥಮ ರೂ. ೧೦೦೦/- ಹಾಗೂ ದ್ವಿತೀಯ ರೂ ೫೦೦/- ಬಹುಮಾನ ನೀಡಲಾಗುವುದು. 
ಬೆಂಗಳೂರು ಸಮೀಪದ ರಾಮನಗರದಲ್ಲಿರುವ ಜಾನಪದ ಲೋಕದಲ್ಲಿ ಇದೆ ತಿಂಗಳ ೧೩ ರಂದು ನಡೆಯಲಿರುವ ರಾಜ್ಯಮಟ್ಟದ ಗೀತಗಾಯನ ಸ್ಪರ್ಧೆಗೆ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡವನ್ನು ಕಳುಹಿಸಿಕೊಡಲಾಗುವುದು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಪ್ರಥಮ. ರೂ. ೧೦,೦೦೦, ದ್ವಿತೀಯ ರೂ. ೭,೫೦೦, ತೃತಿಯ ರೂ. ೫,೦೦೦, ಹಾಗೂ ರೂ.೨,೫೦೦ ಗಳ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು. 
ಜಿಲ್ಲಾ ಮಟ್ಟದ. ಜನಪದ ಗೀತಗಾಯನ ಸ್ಪರ್ಧೆಯನ್ನು ಇದೇ ಸೆ. ೧೦ ರಂದು ಬೆಳೆಗ್ಗೆ ೧೦-೦೦ ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನದ ಪಕ್ಕದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ನಡೆಯಲಿದೆ. ಭಾಗವಹಿಸಲಿಚ್ಚಿಸುವವರು ವಯಸ್ಸಿನ ದಾಖಲಾತಿಯೊಂದಿಗೆ ಹಾಜರಾಗಿ ಸ್ಪರ್ಧೆಗೆ ತಮ್ಮ ಹೆಸರನ್ನು ನೋಂದಾಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ (ಮೊ.೯೪೮೨೯೩೮೯೧೭)ಅವರು ತಿಳಿಸಿದ್ದಾರೆ.    

Advertisement

0 comments:

Post a Comment

 
Top