ಮರಕುಂಬಿಯಲ್ಲಿ ದಲಿತರ ಮೇಲೆ ಹಲ್ಲೆ ಅವರ ಮನೆಗಳ ಸುಟ್ಟ ಪ್ರಕರಣ ... ಹೊಸಗುಡ್ಡ ದಲಿತ ಮಹಿಳೆಯ ಕೊಲೆ ಪ್ರಕರಣ ಆರೋಪಿಗಳನ್ನು ಬಂದಿಸಲು ಹಾಗೂ ದಲಿತರ ರ ಕ್ಷಣೆ ನೀಡಲು ವಿಫಲರಾದ ಸಚಿವ . ಶಿವರಾಜ್ ತಂಗಡಗಿ ಸಂಪುಟದಿಂದ ಕೈಬಿಡಲು ಒತ್ತಾಯಿಸಿ ಕೊಪ್ಪಳ ಬಂದ್ ಯಶಸ್ವಿಯಾಯಿತು. ಬೆಳಗಿನಿಂದಲೇ ಜನ ಸಂಚಾರ್ ಎಂದಿನಂತಿತ್ತು ಆದರೆ ಅಂಗಡಿಗಳು, ವ್ಯಾಪಾರಿ ಮಳಿಗೆಗಳು , ಪೆಟ್ರೊಲ್ ಬಂಕ್ ಗಳು ಸ್ವಪ್ರೇರಣೆಯಿಂದ್ ಬಂದ್ ಮಾಡಿದ್ದವು.
ಬಸ್ ಸಂಚಾರ್ ಸ್ಥಗಿತಗೊಂಡಿದ್ದರಿಂದ ಜನರು ಪರದಾಡಿದರು. ಬೇರೆ ಊರಿನಿಂದ ಬಂದವರು ಡಿಸಿ ಆಫೀಸ್ ಹತ್ತಿರ ಇಳಿಯಬೇಕಾಯಿತು. ಬೆಳಿಗ್ಗೆ ಮಾದಿಗ ದಂಡೂರ ಸಂಘಟನೆಯ ಕಾರ್ಯಕರ್ತರು ಬಸ್ ಸ್ಟಾಂಡ್ ಎದುರಿಗೆ ಟೈರ್ ಗೆ ಬೆಂಕಿ ಹಚ್ಚಿ ದಿಕ್ಕಾರ ಕೂಗಿದರು. ಮದ್ಯಾಹ್ನ 12 ಗಂಟೆಯ ಸುಮಾರಿಗೆ ಭೀಮರಾಯ ಸರ್ಕಲ್, ಅಶೋಕ್ ಸರ್ಕಲ್ ಬಳಿ ಸೇರಿದ ಪ್ರತಿಭಟನಾಕಾರರು ದಿಕ್ಕಾರ ಕೂಗಿದರು. ನಗರದ ಹಲವೆಡೆ ಮರಕುಂಬಿ ಗ್ರಾಮದಲ್ಲಿ ಗಾಯಗೊಂಡವರ, ಹಲ್ಲೆಗೊಳಗಾದವರ ಚಿತ್ರಗಳ ಪ್ಲೆಕ್ಸ್ ಇದ್ದವು.
ಯಾವುದೇ ಅಹಿತಕರ ಘಟನೆ ನಡೆದಿಲ್ಲ.....
0 comments:
Post a Comment