PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ: ಸಹಕಾರ ಸಂಘಕ್ಕೆಗಳ ಉದಯಕ್ಕೆ ಸಿದ್ದನಗೌಡ ಪಾಟೀಲ ಕಣಗಿನಹಾಳ ಕೊಡುಗೆ ಅಪಾರವಾಗಿದೆ ಎಂದು ನಗರ ಸಭೆಯ ಅಧ್ಯಕ್ಷರಾದ ಲತಾ ವೀರಣ್ಣ ಸಂಡೂರ ಹೇಳಿದರು.
   ಭಾಗ್ಯನಗರ ರಸ್ತೆಯಲ್ಲಿರುವ ಪಾನಘಂಟಿ ಮಂಗಲ ಭವನದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ೨೨ನೇ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ,ಪಕ್ಕದ ಗದಗ ಜಿಲ್ಲೆಯ ಕಣಗಿನಹಾಳ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಸಿದ್ದನಗೌಡ ಪಾಟೀಲರವರು ಸ್ವತಂತ್ರ್ಯ ಪೂರ್ವವಾಗಿ ೧೯೦೪ ರಲ್ಲಿ ಭಾರತ ದೇಶದಲ್ಲಿ ಪ್ರಪ್ರಥಮ ಸಹಕಾರ ಸಂಘವನ್ನು ಕಣಗಿನಹಾಳದಲ್ಲಿ ಪ್ರಾರಂಭಿಸುವುದರೊಂದಿಗೆ ಭಾರತ ದೇಶವೇ ತನ್ನ ಕಡೆಗೆ ತಿರುಗಿ ನೊಡುವಂತೆ ಮಾಡಿದ್ದಾರೆ.ನಂತರದ ದಿನಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ಸಹಕಾರ ಸಂಘಗಳು ಬೆಳೆಯಲು ಪ್ರಾರಂಬಿಸಿದವು.ಸಹಕಾರ ತತ್ವದಿಂದ ಮಾನವರು ಸಹಬಾಳ್ವೆಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ.ಸಹಕಾರ ಸಂಘಗಳು ತಮ್ಮ ಸರ್ವ ಸದಸ್ಯರುಗಳಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುವುದರ ಜೊತೆಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕೂಡಾ ಒದಗಿಸಿಕೊಡುತ್ತವೆ.ಇಂತಹ ಸಹಕಾರ ಸಂಘಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಬೇಕು ಈ ಒಂದು ಪತ್ತಿನ ಸಹಕಾರ ಸಂಘವು ಈಗಾಗಲೇ ಗುಲಬರ್ಗಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗಲಿ ಎಂದು ಹೇಳಿದರು.
    ಮುಖ್ಯ ಅಥಿಗಳಾಗಿ ಆಗಮಿಸಿದ್ದ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಮಾತನಾಡುತ್ತ,ಪತ್ತಿನ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ಆ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಹಾಗೂ ಎಲ್ಲಾ ಕಾರ್ಯಕಾರಿ ಮಂಡಳಿಯವರು ಪ್ರಾಮಾಣಿಕ ರೀತಿಯಲ್ಲಿ ಯಾವುದೇ ಲೋಪದೋಷಗಳು ಬರದಂತೆ ಕಾರ್ಯನಿರ್ವಹಿಸಿದಾಗ ಮಾತ್ರ ಒಂದು ಮಾದರಿ ಸಹಕಾರ ಸಂಘವಾಗಲು ಸಾಧ್ಯವಾಗುತ್ತದೆ.ಅಲ್ಲದೆ ಸರಕಾರಿ ನೌಕರರ ಸಂಘವು ಕೂಡಾ ನೌಕರರ ಅನೇಕ ಬೇಡಿಕೆಗಳನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಲಾಗಿದ್ದು,ಅದರಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೆ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಬೇಡಿಕೆಗಳ ಈಡೆರಿಕೆಗಾಗಿ ಹೋರಾಟವನ್ನು ಕೂಡಾ ಮಾಡುವುದರ ಜೊತೆಯಲ್ಲಿ ಮೈಸೂರನಲ್ಲಿ ಜರುಗಿದ ರಾಜ್ಯ ಮಟ್ಟದ ನೌಕರರ ಸಮ್ಮೇಳದಲ್ಲಿ ಭಾಗವಹಿಸಿದ್ದ ಎಲ್ಲಾ ನೌಕರರಿಗೂ ಅಭಿನಂದನೆಯನ್ನು ಸಲ್ಲಿಸಿದರು.
    ಪ್ರಾಸ್ತಾವಿಕವಾಗಿ ಪತ್ತಿನ ಸಂಘದ ಅಧ್ಯಕ್ಷರಾದ ಮೈಲಾರಗೌಡ ಹೊಸಮನಿ ಮಾತನಾಡಿದರು.
ಸರಕಾರಿ ನೌಕರರ ಸಂಘದ ನಿರ್ದೇಶಕರಾದ ಶಂಭುಲಿಂಗನಗೌಡ ಪಾಟೀಲ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭು ಕಿಡದಾಳ,ತಾಲೂಕ ಅಧ್ಯಕ್ಷರಾದ ಮಂಜುನಾಥ.ಬಿ.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ,ಬಿ.ಆರ್.ಸಿ.ಶರಣಪ್ಪ ಗೌರಪುರಿ,ಪತ್ತಿನ ಸಂಘದ ಖಜಾಂಚಿ ಮಹೇಶ ಟಂಕಸಾಲಿ,ನಿರ್ದೇಶಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ದೇವಪ್ಪ ವಂಟಿಗಾರ,ಯಲ್ಲಪ್ಪ ಚಿಜ್ಜೆರಿ,ಎಸ್.ಸಿ/ಎಸ್.ಟಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಭರಮಪ್ಪ ಕಟ್ಟಿಮನಿ,ತಾಲೂಕ ಅಧ್ಯಕ್ಷರಾದ ಹನುಂತಪ್ಪ ಕೊಡ್ಲಿ, ಶಿಕ್ಷಣ ಸಂಯೋಜಕರಾದ ಹನುಮಂತಪ್ಪ ನಾಯಕ,ಬಸಪ್ಪ ದೇವರಮನಿ,ಎನ್.ಯಂಕಪ್ಪ,ವಿಶ್ವನಾಥ ಬೆಲ್ಲದ
        ಕಾರ್ಯಕ್ರಮವನ್ನು ನಿರ್ದೆಶಕರಾದ ಬಾಳಪ್ಪ ಕಾಳೆ ನಿರೂಪಿಸಿದರು.
   ಸಂಘದ ಉಪಾಧ್ಯಕ್ಷರಾದ ಯಶೋದ ಹುನಗುಂದ ಸ್ವಾಗತಸಿ ದೇವಪ್ಪ ಒಂಟಿಗಾರ ವಂದಿಸಿದರು.

Advertisement

0 comments:

Post a Comment

 
Top