PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳಜಿಲ್ಲೆ ಕಲೆ, ಸಾಹಿತ್ಯ, ಕವಿಗಳ ಬೀಡಾಗಿದೆ, ಹಾಗೆಯೇ ರಂಗಭೂಮಿಯಲ್ಲಿ ಅನೇಕ ತಾರೆಗಳು ಇಲ್ಲಿ  ಮಿನುಗಿವೆ ಈಗಲೂ ಮಿನುಗುತ್ತಿವೆ. ಅನೇಕ ನಾಟಕ ರಚನೆಯಲ್ಲಿ ಕವಿಗಳು, ಕಲಾವಿದರೂಗಳು ಅಪೂರ್ವ ಸಾಧನೆಗಳನ್ನು ಮಾಡಿ ರಂಗಭೂಮಿಗೆ ತಮ್ಮದೆ ಆದ ಕೊಡುಗೆಗಳನ್ನು ಇತ್ತಿದ್ದಾರೆ. ಇಂಥಹ ಅಪೂರ್ವ ಸಾಧಕರಲ್ಲಿ ಈ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ನೀಲಪ್ಪ ವಕ್ರ ಕೂಡಾ ಒಬ್ಬರು.
   ಮರಿ ಬಸಪ್ಪ ಸಂಗನ ಬಸಮ್ಮ ಎಂಬ ಆದರ್ಶ ದಂಪತಿಗಳ ಉದರದಿಂದ ಸೆಪ್ಟಂಬರ್ ೨ ೧೯೪೬ ರರಲ್ಲಿ  ಮಂಗಳೂರು ಗ್ರಾಮದಲ್ಲಿ ಜನಿಸಿದ ನೀಲಪ್ಪ ವಕ್ರ ವೃತ್ತಿಯಲ್ಲಿ ಶಿಕ್ಷಕರು.  ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ  ನೀಲಪ್ಪ ಸರ್. ಶಿಸ್ತು, ಸಂಯಮಕ್ಕೆ ಇನ್ನೊಂದು ಹೆಸರು ಅಂದರೆ ವಕ್ರ ಸರ್ ಅಂದರೆ ಅತಿಶಯೋಕ್ತ ಏನಲ್ಲ. ಇವರ ಮೌಲ್ಯಯುತ ಸೇವೆಯನ್ನು ಮೆಚ್ಚಿ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದವು. ಅನೇಕ ಸಂಘ,ಸಂಸ್ಥೆಗಳ ಸನ್ಮಾನ, ಪ್ರಶಸ್ತಿಗಳು ಲೆಕ್ಕವಿಲದಷ್ಟು. ಕೇವಲ ಉತ್ತಮ ಶಿಕ್ಷಕರಷ್ಟೆ  ಅಲ್ಲದೆ ಅನೇಕ ಉತ್ತಮ ಪ್ರವೃತ್ತಿಗಳನ್ನು ಮೈಗೂಡಿಸಿಕೊಂಡು ಬೆಳೆದವರು. ನಾಟಕಗಳನ್ನು ರಚಿಸಿ,ಕವಿಗಳಾಗಿ ಉತ್ತಮ ಕವಿತೆಗಳನ್ನು ರಚಿಸಿ,ರಂಗಭೂಮಿಯಲ್ಲಿ ಕಲಾವಿದರಾಗಿ ತಮ್ಮ ನಟನಾ ಚಾತಿರ‍್ಯದಿಂದ ಜನಮನ ರಂಚಿಸಿ ಮೆಚ್ಚುಗೆ ಪಡೆದವರು.
   ಮಗ ಮಾಡಿದ ಮದುವೆ, ಮೂಗುತಿ ಇಲ್ಲದ ಮುತೈದೆ, ಅವ್ವ ಅಟ್ಟದ ಮ್ಯಾಲೆ ಅಪ್ಪ ಕಟ್ಟಿಮ್ಯಾಲೆ. ಅಧಿಕಾರಿ ಅಣ್ಣ ದರೋಡೆಕೋರ ತಮ್ಮ, ಮದುವೆಯಾದಮೇಲೆ ಮಗ ನನ್ನವನಲ್ಲ, ಹುಬ್ಬೇರಿಸಿದ ಹುಬ್ಬಳ್ಳಿ ಹುಲಿ ಇವರು ರಚಿಸಿ ಜನಪ್ರೀಯ ನಾಟಕಗಳು. ಅಷ್ಟೆಅಲ್ಲದೆ ಸಿಂಧೂರ ಲಕ್ಷ್ಮಣ, ಸಂತ ಶಿಶುನಾಳ ಷರೀಫ, ಇಲಕಲ್ಲ ವಿಜಯಮಾಹಂತೇಶ ಮಹಾತ್ಮೆ, ವೀರರಾಣಿ ಕಿತ್ತೂರು ಚನ್ನಮ್ಮ, ನರಗುಂದ ಬಾಬಾಸಾಹೇಬ್ ಇನ್ನು ಮುಂತಾದ ಏಕಾಂತನಾಟಕಗಳನ್ನು ರಚಿಸಿ  ಅವುಗಳನ್ನು ಶಾಲೆಯ ಮಕ್ಕಳಿಂದ ಪ್ರಯೋಗಗಳನ್ನು ಮಾಡಿಸಿದಾಗ   ಗ್ರಾಮದ ಜನರಿಂದ ಅಪಾರ ಮೆಚ್ಚುಗೆ ಅಷ್ಟೆಅಲ್ಲ  ಖ್ಯಾತಿಯನ್ನು ತಂದುಕೊಟ್ಟವು.
  ಪವಾಡ ಪುರುಷ ರ‍್ಯಾವಣಿಕಿ ಮುಡಿಯಪ್ಪಜ್ಜನ ಚರಿತ್ರೆ ಬರೆದದ್ದು ಇವರ ಸಾಧನೆಳಲ್ಲಿ ಮಹತ್ವವಾದದ್ದು.  ರತ್ನ ಮಾಂಗಲ್ಯ, ಬಸ್ ಹಮಾಲ, ಅಣ್ಣ-ತಂಗಿ, ಚಿನ್ನದ ಗೊಂಬೆ, ಸತಿ ಸಂಸಾರದ ಜ್ಯೋತಿ, ಬಂಜೆ ತೊಟ್ಟಿಲು, ರೈತನ ಮಕ್ಕಳು, ಸತ್ಯದ ಸಾವು, ಬಸ್ ಕಂಡಕ್ಟರ್ ಅನೇಕ ಸಾಮಾಜಿ ನಾಟಕಗಳಲ್ಲಿ ಅಭಿನಯಿಸಿ ಕಂಚಿನ ಕಂಠದ ಸಂಭಾಷಣೆಗೆ ಕಲಾರಸಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಜನಮನ ಸೂರೆಗೊಂಡಿದ್ದರು.
   ಐವತ್ತಕ್ಕೂ ಹೆಚ್ಚು ನಾಟಕಗಳಗಳನ್ನು ನಿರ್ದೇಶಿಸಿದ್ದಾರೆ. ಅನೇಕ ನಾಟಕ ಕಂಪನಿಗಳು ಇವರ ಈ ಗಣನೀಯ  ಸೇವೆ ಕಂಡು ವೃತ್ತಿಯಲ್ಲಿ ಆರ್ದಶ ಶಿಕ್ಷಕನ ಪ್ರವೃತ್ತಿಯ ಮೇರು ಸಾಧನೆಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತವೆ.  ೨೦೦೯ ಮೇ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಭುತವಾದ ಏಕಪಾತ್ರಾಭಿನಯ ಕಂಡು ಪ್ರೇಕ್ಷಕರು ಮಂತ್ರಮುಗ್ದರಾಗಿದ್ದರು. ಹಾಗೆಯೇ ಅವರ ಈ ನಟನಾ ಕೌಶಲ್ಯಕ್ಕೆ ರಾಜ್ಯ ಮಟ್ಟದ ಕಲಾ ರತ್ನ ಪ್ರಶಸ್ತಿ ಒಲಿದುಬಂತು.
   ಹೀಗೆ ಬದುಕು ಬರಹ. ಒಂದೇ ನಾಣ್ಯದ ಎರಡು ಮುಖಗಳಂತೆ ವೃತ್ತಿ ಪ್ರವೃತ್ತಿಗಳ ಜೊತೆಗೆ ಅದಮ್ಯ ಚೇತನವಾಗಿ ೬೮ ಹರೆಯದಲ್ಲೂ ಮೂವತ್ತರ ಯುವಕರು ನಾಚಿಸುವಂತೆ ಎಲ್ಲಾರಂಗಗಳಲ್ಲೂ ಸದಾ ಚಟುವಟಿಕೆಗಳಿಂದ ಸದಾ ಸಮಾಜಕ್ಕಾಗಿ ಮಿಡಿಯುವ ನೀಲಪ್ಪ ವಕ್ರರ ಜೀವನ ಮಾದರಿಯಾದದ್ದು. ಆದರೆ ಇಂಥ ಪ್ರತಿಭೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಗದಿರುವುದು ನಿರಾಸೆಯ ಸಂಗತಿ.  ಇಂಥಹ ಮೇರು ಪ್ರತಿಭೆಗೆ ರಾಜ್ಯೋತ್ಸ ಪ್ರಶಸ್ತಿ ಒಲಿದು ಬರಲಿ ಹಾಗೂ ಇವರಿಂದ ಇನ್ನೂ ಅನೇಕ ಕೃತಿಗಳು ಹೊರಬರಲಿ.
                                    -ಬದರಿ ಪುರೋಹಿತ್.ಕೊಪ್ಪಳ.

Advertisement

0 comments:

Post a Comment

 
Top