ಪರಿಶಿಷ್ಠ ಜನಾಂಗವು ಹಲವಾರು ವರ್ಷಗಳಿಂದ ತನ್ನ ಸಮಾಜದ ಅಭಿವೃದ್ದಿಗೆ ಹಾಗೂ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಠ ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ರಾಜ್ಯ ಕಾಂಗ್ರೇಸ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ ನಗರ ಸಭೆ ಸದಸ್ಯೆ ಅಪ್ಪಣ್ಣ ಪದಕಿ ಹೇಳಿದರು,
ಅವರು ನಗರದ ಬಿಜೆಪಿ ಜಿಲ್ಲಾ ಕಾರ್ಯಲಯದಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾದ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಅವದಿಯಲ್ಲಿ ಪರಿಶಿಷ್ಠ ಜನಾಂಗದ ಅಭಿವೃದ್ದಿಗಾಗಿ ನೂರಾರು ಕೋಟಿ ಹಣವನ್ನು ನೀಡಲಾಗಿತ್ತು ಅದನ್ನು ಜಾರಿ ಗೊಳಿಸುವಲ್ಲಿ ಈಗಿನ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಅಲ್ಲದೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಈ ಜನಾಂಗದ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸಹ ರಾಜ್ಯದಲ್ಲಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದ್ದು ಕಾರಣ ಎಸ್ ಟಿ ಜನಾಂಗದವರು ಜಾಗೃತರಾಗಿ ಸರ್ಕಾರದ ಸೌಲಬ್ಯಗಳನ್ನು ಪಡೆಯಲು ಮುಂದಾಗಬೇಕು ಅಲ್ಲದೆ ಬಿಜೆಪಿ ಪಕ್ಷದ ಕಾರ್ಯಕರ್ತರು ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಪರಿಶಿಷ್ಠ ಜನಾಂಗದ ಸಂವಿಧಾನ ಬದ್ದವಾದ ವಿವಿಧ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದರೂ ಈಡೇರಿಕೆಯಾಗಿಲ್ಲ ಅವುಗಳ ಈಡೇರಿಕೆಗಾಗಿ ಹೋರಾಟ ಮಾಡಬೆಕೇಂದು ಅಪ್ಪಣ್ಣ ಪದಕಿ ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ.ಟಿ ಮೋರ್ಚಾದ ನೂತನ ಜಿಲ್ಲಾದ್ಯಕ್ಷ ಮಲ್ಲಪ್ಪ ಪಕೀರಪ್ಪ ಬೇಲೇರಿ ವಹಿಸಿ ಮಾತನಾಡಿದರು
ವೇದಿಕೆಯಲ್ಲಿ ಮುಖಂಡರಾದ ರಾಜು ಭಾಕಳೆ, ಡಾ|| ಕೊಟ್ರೇಶ ಶೇಡ್ಮಿ, ಡಿ ಮಲ್ಲಣ್ಣ, ಮುದಿಯಪ್ಪ ತಿಗರಿ, ವಿರೇಶ ನಾಯಕ ಕುಷ್ಟಗಿ, ರಾಘವೇಂದ್ರ ಸುಬೇದಾರ, ಹಾಲೇಶ ಕಂದಾರಿ, ಮಾಧ್ಯಮ ಪ್ರತಿನಿದಿ ಪರಮಾನಂದ ಯಾಳಗಿ, ಯುವ ಮೋಚಾ ತಾಲೂಕಾ ಅದ್ಯಕ್ಷ ಬಸವರೆಡ್ಡಿ ಬೆಳವಿನಾಳ, ಬಾಳಪ್ಪ ಚಾಕ್ರಿ ಕುಷ್ಟಗಿ ರಮೇಶ ಚೌಡಕಿ, ಹನುಮೇಶ ಹಸಿಕಟಿಗಿ, ನಿಂಗಪ್ಪ ಪಿಡ್ಡನಾಯಕ, ಲಕ್ಷಣ ತಳವಾರ, ಶಂಕರಗೌಡ ಪಾಟೀಲ, ಸಮಾಜದ ಮುಖಂಡ ಸಂಗಣ್ಣ ಕರಡಿ, ಸೇರಿದಂತೆ ಎಲ್ಲಾ ತಾಲೂಕಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಪಧಾದಿಕಾರಿಗಳು
ಪಾಲ್ಗೋಂಡಿದ್ದರು
0 comments:
Post a Comment