PLEASE LOGIN TO KANNADANET.COM FOR REGULAR NEWS-UPDATES

 ಶಾಂತಿ ಸಂದೇಶ ಮಕ್ಕಳ ಹಕ್ಕುಗಳ ಸಂಪನ್ಮೂಲ ಮತ್ತು ಅಭಿವೃದ್ಧಿ ಕೇಂದ್ರವು ಭಾರತದಲ್ಲಿ ಮಕ್ಕಳ ಹಕ್ಕುಗಳು ಎಂಬ ವಿಷಯದ ಮೇಲೆ CHILD RIGHTS FOCUS 2014  ಎಂಬ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ವೃತ್ತಿಪರ ಛಾಯಾಗ್ರಹಕರು ಮತ್ತು ವಿದ್ಯಾರ್ಥಿ ಬಳಗದವರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಭಾಗಿಯಾಗಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
  ಸ್ಪರ್ಧೆಗೆ ಕಳುಹಿಸುವ ಫೋಟೊಗಳು ಭಾರತದಲ್ಲಿ ಮಕ್ಕಳ ಹಕ್ಕುಗಳ ಅನುಷ್ಠಾನದ ಧನಾತ್ಮಕ ಅಥವಾ ಋಣಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುವಂತಿರಬೇಕು, ಸ್ಪರ್ಧಿಗಳನ್ನು ವೃತ್ತಿಪರ ಛಾಯಾಗ್ರಹಕರು ಮತ್ತು ಸಾಮಾನ್ಯರು ಎಂಬ ಎರಡು ಭಾಗಗಳಾಗಿ ಗುರುತಿಸಿದ್ದು ಸಾಮಾನ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು ಮತ್ತು ಇತರೆ ಆಸಕ್ತರು ಭಾಗವಹಿಸಬಹುದು. ವೃತ್ತಿಪರ ಛಾಯಾಗ್ರಾಹಕರು ವೃತ್ತಿಪರ ವಿಭಾಗದಲ್ಲಿ ಮಾತ್ರ ಭಾಗವಹಿಸಬಹುದು. ಕಳುಹಿಸುವ ಫೋಟೊಗಳು  ಕನಿಷ್ಟ ೧೦/೧೨ ಅಳತೆಯದ್ದಾಗಿರಬೇಕು ಅಥವಾ ಕನಿಷ್ಟ ೬೪೦ ಠಿixeಟs ಹತ್ತಿರದಿಂದ ಮತ್ತು ದೂರದಿಂದ ೨೦೦೦ ಠಿixeಟs ಮೀರಿರಬಾರದು. ಫೋಟೊಗಳು ಎPಇಉ ಜಿoಡಿmಚಿಣ ನಲ್ಲಿ ಇರಬೇಕು, ಒಬ್ಬ ಸ್ಪರ್ಧಿ ಗರಿಷ್ಠ ೨ ಫೋಟೊಗಳನ್ನು ಅ.೩೦ ರೊಳಗೆ shanthidhamcsp@gmail.com  ಗೆ ಕಳುಹಿಸಬೇಕು. ಕಳುಹಿಸುವ ಪ್ರತಿ ಫೋಟೊಗೆ ಒಂದು ಅರ್ಥಪೂರ್ಣ ಶಿರ್ಷಿಕೆ/ವಿವರಣೆ ನೀಡಬೇಕು. ತಮ್ಮ ಸ್ವ ವಿವರ ಮತ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿವರವನ್ನು ಫೋಟೊದೊಂದಿಗೆ ಲಗತ್ತಿಸಬೇಕು.  ಸ್ಪರ್ಧಿಸುವ ವಿಭಾಗವನ್ನು ನಮೂದಿಸಬೇಕು, ಫೋಟೊಗಳ ಮೇಲೆ ಯಾವುದೇ ರೀತಿಯ ಲಾಂಛನ, ಹಕ್ಕುಗಳನ್ನು ಕಾಯ್ದಿರಿಸಿರುವುದು, ಬಾರ್ಡರ್, ಅಥವಾ ಯಾವುದೇ ರೆಫರೆನ್ಸ ಇರಬಾರದು, ಚಿತ್ರದ ಸ್ವಾಭಾವಿಕತೆ, ಮೂಲ ಮತ್ತು ನೈಜತೆಗೆ ದಕ್ಕೆ ಆಗದಂತೆBasic editing, including colour enhancement, use of filters and cropping ಬಳಸಬಹುದು, ಫೋಟೊಗಳು ಸ್ವಾಭಾವಿಕ ಮತ್ತು ನಿಜ ಜೀವನದಿಂದ ಸ್ಪರ್ಧಿಯೇ ಚಿತ್ರಿಸಿದಂತಹವು ಆಗಿದ್ದು ಭಾರತೀಯವಾಗಿರಬೇಕು. ಯಾವುದೇ ರೀತಿಯ ಹಕ್ಕು ಕಾಯ್ದಿರಿಸಿದ ಅಂಶಗಳು ಬಳಕೆಯಾಗಿದ್ದಲ್ಲಿ ಅಂಥಹ ಚಿತ್ರಗಳನ್ನು ತಿರಸ್ಕರಿಸಲಾಗುವುದು.
  ಸ್ಪರ್ಧೆಗೆ ಬಂದಂತಹ ಎಲ್ಲಾ ಫೋಟೊಗಳನ್ನು ಮೌಲ್ಯಮಾಪನ ಸಮಿತಿಯು ನವಂಬರ ೫ರಂದು ವಿಶ್ಲೇಷಿಸಲಿದೆ. ಪ್ರದರ್ಶನ ಯೋಗ್ಯ ಫೋಟೊಗಳನ್ನು ನವಂಬರ ೧೫ ರಂದು ನಡೆಯುವ ಮಕ್ಕಳ ಹಕ್ಕುಗಳ ೨೫ ಸಂವತ್ಸರಗಳು ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಾಗುವುದು. ಪ್ರತಿ ವಿಭಾಗದಲ್ಲಿನ ಅತ್ಯುತ್ತಮ ಎರಡು ಫೋಟೊಗಳಿಗೆ Child Rights Focus – Photography State Award 2014  ಮತ್ತು  ನಗದು ಬಹುಮಾನ ವೃತ್ತಿಪರ ವಿಭಾಗ ಪ್ರಥಮ ರೂ. ೧೫,೦೦೦/-, ವೃತ್ತಿಪರ ವಿಭಾಗ ದ್ವಿತಿಯ ರೂ. ೧೦,೦೦೦/-, ಸಾಮಾನ್ಯ ವಿಭಾಗ ಪ್ರಥಮ ರೂ ೧೦,೦೦೦/-, ಸಾಮಾನ್ಯ ವಿಭಾಗ  ದ್ವಿತಿಯ ರೂ ೭,೦೦೦/- ಬಹುಮಾನಗಳನ್ನು ನವಂಬರ ೧೫ ರಂದು ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಛಾಯಚಿತ್ರವನ್ನು (shanthidhamcsp@gmail.com ಗೆ ಕಳುಹಿಸಿ ವಿಳಾಸ: Shanthi Sandesha Trust, Resource and Development Centre, Behind Rosario Cathedral, Bolar, Mangalore – 575001, In case of doubts please contact 0824/2420111 or +919449606258, 7829449740 ಸಂಪರ್ಕಿಸಬಹುದು  

Advertisement

0 comments:

Post a Comment

 
Top