ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರು ನಗರದ ಬಸ್ ನಿಲ್ದಾಣದ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಸಮಾಜದಲ್ಲಿನ ಅನ್ಯಾಯ, ಅಕ್ರಮಗಳನ್ನು ಬಯಲಿಗೆಳೆಯುವುದು ಪತ್ರಕರ್ತರ ಆದ್ಯ ಕರ್ತವ್ಯ. ಆದರೆ, ಬೀದರ್‌ನಲ್ಲಿ ಕರ್ತವ್ಯನಿರತ ಪತ್ರಕರ್ತರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷಿ ನೀಡಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರೆಡ್ಡಿ ಅಳವಂಡಿ, ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆ ಪೊಲೀಸ್ ವೈಫಲ್ಯವಾಗಿದೆ. ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ದೇವು ನಾಗನೂರ, ಶರಣಪ್ಪ ಬಾಚಲಾಪುರ,ದೊಡ್ಡೇಶ ಯಲಿಗಾರ, ಬಸವರಾಜ ಕರುಗಲ್, ಬಸವರಾಜ ಬಿನ್ನಾಳ, ಬಸವರಾಜ ಶೀಲವಂತರ್, ಅಶೋಕ್, ಮಂಜುನಾಥ ಶಿರಸಂಗಿ, ಸಿರಾಜ್ ಬಿಸರಳ್ಳಿ, ಶಿವರಾಜ ನುಗಡೋಣಿ, ಮಹೇಶಗೌಡ ಭಾನಾಪುರ ಸೇರಿದಂತೆ ಹಲವರು ಇದ್ದರು.
0 comments:
Post a Comment