ಇದೇ ೨೫ರಂದು ಇಲ್ಲಿನ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಜಂಟಿಯಾಗಿ ಆಯೋಜಿಸಿರುವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಈ ಕಾರ್ಯಾಗಾರದಲ್ಲಿ ಗುಲಬರ್ಗಾದ ಸಹನಿರ್ದೆಶಕರು ಹಾಗೂ ಪ್ರಾಂಶುಪಾಲ ಡಾ. ಹೆಚ್.ಬಾಲರಾಜ್, ಸಾರ್ವಜಿನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಜಿ.ಎಚ್.ವೀರಣ್ಣ, ಡಯಟ್ ಪ್ರಾಂಶುಪಾಲ ಶ್ಯಾಂಸುಂದರ್, ನಿವೃತ್ತ ಉಪಪ್ರಾಂಶುಪಾಲ ಕೃಷ್ಣಮೂರ್ತಿ, ಕೊಪ್ಪಳ ಬಿಇಓ ಉಮೇಶ ಪೂಜಾರ, ಅಕ್ಷರ ದಾಸೋಹದ ಅಧಿಕಾರಿ ಪರಸಪ್ಪ ಬಜಂತ್ರಿ, ಜಿಲ್ಲಾ ಉಪಸಮನ್ವಯಾಧಿಕಾರಿ ವೆಂಕಟೇಶ, ಯಲಬುರ್ಗಾ ಬಿಇಓ ಬಸವರಾಜಯ್ಯ, ಕುಷ್ಟಗಿ ಬಿಇಓ ಎಂ.ಬಿ.ಮುರಟಗಿ ಹಾಗೂ ಗಂಗಾವತಿ ಬಿಇಓ ವಿಜಯಕುಮಾರ ಸಂವಾದ ಹಾಗೂ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡುವರು.
ಉದ್ಘಾಟನೆ: ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮವೂ ಜರುಗಲಿದೆ.
ವೇದಿಕೆಯಲ್ಲಿ ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ವಿಜಯಕುಮಾರ, ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭು ಕಿಡದಾಳ, ತಾಲೂಕು ಅಧ್ಯಕ್ಷ ಮಂಜುನಾಥ, ನೌಕರರ ಸಂಘದ ಮಾಜಿ ಅಧ್ಯಕ್ಷ ಶಂಭುಲಿಂಗನಗೌಡ, ಉಪಾಧ್ಯಕ್ಷ ಲಾಲಾ ನಾಯಕ ಮತ್ತಿತರರು ಉಪಸ್ಥಿತರಿರುವರು.
ಓಓಡಿ ಸೌಲಭ್ಯ: ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲ ಮುಖ್ಯ ಶಿಕ್ಷಕರುಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕರು ಒಂದು ದಿನದ ಓಓಡಿ ಸೌಲಭ್ಯ ನೀಡುವಂತೆ ಆದೇಶಿಸಿದ್ದು, ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಚಾಲಕ ಉಮೇಶ ಸುರ್ವೆ-೯೪೮೦೮೧೦೮೯೯, ತಾಲೂಕು ಸಂಚಾಲಕ ಸಂಗಪ್ಪ ವಟಪರವಿ-೯೪೪೯೯೬೨೬೫೮ ಹಾಗೂ ಕಾರ್ಯದರ್ಶಿ ವೀರೇಶ ಅರಳಿಕಟ್ಟಿ-೯೯೦೦೬೧೧೦೫೬ ಸಂಪರ್ಕಿಸಲು ಕೋರಿದೆ.
0 comments:
Post a Comment