PLEASE LOGIN TO KANNADANET.COM FOR REGULAR NEWS-UPDATES

  ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ನಿಲಯ ಮೇಲ್ವಿಚಾರಕರು, ನಿಲಯ ಪಾಲಕರುಗಳ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು 63 ವರ್ಷಗಳ ವಯೋಮಿತಿಯಲ್ಲಿರುವ ನಿವೃತ್ತ ನಿಲಯ ಪಾಲಕರು, ನಿಲಯ ಮೇಲ್ವಿಚಾರಕರು, ಬಿ.ಇಡಿ ಪದವಿ ಹೊಂದಿದ ಶಿಕ್ಷಕರು ಹಾಗೂ ಕಛೇರಿ ಮೇಲ್ವಿಚಾರಕರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
ಕೊಪ್ಪಳ ತಾಲೂಕಿನ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷರಿಗೆ ತಲಾ 01 ರಂತೆ ಒಟ್ಟು 02 ಹುದ್ದೆಗಳು, ಕುಷ್ಟಗಿ ತಾಲೂಕಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷ-02 ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷ-01 ಹಾಗೂ ಮಹಿಳೆ-01 ಒಟ್ಟು 04 ಹುದ್ದೆಗಳು, ಯಲಬುರ್ಗಾ ತಾಲೂಕಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷ-01 ಹುದ್ದೆ. ಗಂಗಾವತಿ ತಾಲೂಕಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಮಹಿಳೆ-01 ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷ-03 ಹಾಗೂ ಮಹಿಳೆ-02 ಒಟ್ಟು 06 ಹುದ್ದೆಗಳು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ  ಪುರುಷ-04 ಹಾಗೂ ಮಹಿಳೆ-01. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷ-05 ಹಾಗೂ ಮಹಿಳೆ-03 ಒಟ್ಟು 13 ಹುದ್ದೆಗಳಿರುತ್ತವೆ. 
ಆಸಕ್ತರು ಅರ್ಜಿಗಳನ್ನು ಆ.8 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ, ಕೊಪ್ಪಳ ಇವರನ್ನು ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ  .

Advertisement

0 comments:

Post a Comment

 
Top