ನಗರದ ಶ್ರೀ ವಿಠ್ಠಲಕೃಷ್ಣ ದೇವಸ್ಥಾನದಲ್ಲಿ ದಿ. ೧೭ ರಂದು ಮತ್ತು ದಿ. ೧೮ ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಜರುಗಲಿದೆ.
ಶ್ರೀ ಮುದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ದಿ. ೧೪ ರಿಂದ ೧೮ರ ವರೆಗೆ ಪ್ರತಿ ದಿನ ಸಾಯಂಕಾಲ ೬ಕ್ಕೆ ಭಾಗವತ ಪ್ರವಚನ ಪಂ. ರಾಘಪ್ರೇಮಾಚಾರ ಮುಳಗುಂದ ಇವರಿಂದ ಹಮ್ಮಿಕೊಳ್ಳಲಾಗಿದೆ.
ಬೆಣ್ಣೆ ಅಲಂಕಾರ : ರವಿವಾರದಂದು ೧೭ಕ್ಕೆ ಬೆಳಿಗ್ಗೆ ೫ಕ್ಕೆ ಸುಪ್ರಭಾತ, ೭ಕ್ಕೆ ನಿಮೂಲ್ಯ ಅಭಿಪೇಕ, ೯ಕ್ಕೆ ಮಹಾಅಭಿಪೇಕ ಅಲಂಕಾರ, ೧೧ಕ್ಕೆ ಶ್ರೀ ವಿಷ್ಣು ಸಹಸ್ರನಾಮಾವಳಿ ಪೂರ್ವಕ ತುಳಸಿ ಅರ್ಚನೆ, ೫ಕ್ಕೆ ಭಗವತ ಪ್ರವಚನ ಸಂಜೆ ೬ಕ್ಕೆ ಶ್ರೀ ವಿಠ್ಠಲಕೃಷ್ಣ ದೇವರಿಗೆ ಬೆಣ್ಣೆ ಅಲಂಕಾರ ರಾತ್ರಿ ೧೨-೩೪ಕ್ಕೆ ಶ್ರೀ ಕೃಷ್ಣ ದೇವರಿಗೆ ಅರ್ಘ್ಯ ಜರುಗಲಿದೆ.
ಬೆಳ್ಳಿ ಉತ್ಸವ ಮೂರ್ತಿ ಸಮರ್ಪಣೆ : ಸೋಮವಾರ ದಿ. ೧೮ ರಂದು ಬೆಳಿಗ್ಗೆ ಸುಪ್ರಭಾತ, ತೊಟ್ಟಿಲು ಸೇವೆ, ಶ್ರೀ ವಿಠ್ಠಲಕೃಷ್ಣ ದೇವರಿಗೆ ಬೆಳ್ಳಿ ಉತ್ಸವ ಮೂರ್ತಿ ಸಮರ್ಪಣೆ, ಶ್ರೀ ವಿಠ್ಠಲಕೃಷ್ಣ ದೇವರಿಗೆ ಪಂಚಾಮೃತ ಅಭಿಪೃಷಕ ಜರುಗಲಿದೆ. ಮಧ್ಯಾಹ್ನ ೪ಕ್ಕೆ ಪ್ರವಚನ ಮತ್ತು ವಿಶೇಷ ಸೇವಾಕರ್ತರಿಗೆ ಪಮಡಿತರಿಂದ ಫಲ ಮಂತ್ರಾಕ್ಷತೆ ೫ಕ್ಕೆ ಗೋಪಾಲಕಾವಲಿ ಜರುಗಲಿದೆ.
ಸನ್ಮಾನ : ಸಂಜೆ ೫ಕ್ಕೆ ಗ್ರಾಮ ಪ್ರದಕ್ಷಣೆ ಶ್ರೀ ಪಾಂಡುರಂಗ ಭಜನಾಮಂಡಳಿ, ಶ್ರೀ ಚೈನ್ಯ ಭಜನಾ ಮಂಡಳಿ, ಶ್ರೀರಾಮ ಭಜನಾ ಮಂಡಳಿ ಗಳೆಯರೊಂದಿಗೆ ನಂತರ ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ನಗರಸಭೆ ಮಾಜಿ ಅಧ್ಯಕ್ಷ ಜಿ. ಸುರೇಶ ದೇಸಾಯಿ, ಉದ್ಯಮಿ ಶ್ರೀನಿವಾಸ ಗುಪ್ತಾ, ಗುತ್ತಿಗೆದಾರ ಎನ್.ಆರ್. ಕುಲಕರ್ಣಿ ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ರಾತ್ರಿ ೭ಕ್ಕೆ ಚಿಕ್ಕಮಕ್ಕಳಿಂದ ವೇಷಭೂಷಣ ಪ್ರದರ್ಶನ, ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಿಗೆ ಬಹುಮಾನ ವಿಚಾರಣೆ ರಾತ್ರಿ ೯ಕ್ಕೆ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದ್ದು ಸರ್ವರೂ ಆಗಮಿಸಿ ಭಗವಂತನ ಕೃಪೆಗೆ ಪಾತ್ರಾಗುವಂತೆ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಜಹಗೀರದಾರ ತಿಳಿಸಿದ್ದಾರೆ.
0 comments:
Post a Comment