PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ:ಅಗಷ್ಟ ೦೪ ಕರ್ನಾಟಕ ರಾಜ್ಯ ಮಡಿವಾಳರ ಮೀಸಲಾತಿ ಜನಜಾಗೃತಿ ರಥಯಾತ್ರೆ ಸಮಿತಿಯ ರಾಜ್ಯಾ ಪದಾಧಿಕಾರಿಗಳು ಮತ್ತು  ಸಮಾಜದ ಸ್ವಾಮಿಜೀಗಳಾದ ಚಿತ್ರದುರ್ಗಾದ ಮಡಿವಾಳ ಮಾಚಿದೇವಾಸ್ವಾಮಿ, ಬೆಂಗಳೂರಿನ ಮಾಚಿದೇವಾ ಶೀವಯೋಗಾನಂದಾಪುರಿಸ್ವಾಮಿ, ಮೂಡಬಿದರಿಯ ಮುಕ್ತಾನಂದಸ್ವಾಮಿ ಕರಿಂಜೆಯವರ ನೇತೃತ್ವದಲ್ಲಿ ಡಾ|| ಅನ್ನಪೂರ್ಣಮ್ಮ ವರದಿ ಜಾರಿಗೆ ಬರಲಿ ಎಂದು ಆಗ್ರಹಿಸಿ ರಾಜ್ಯ ಘಟಕದಿಂದ ದಿನಾಂಕ:೨೭-೦೭-೨೦೧೪ರಂದು ಸಿಂದಗಿ ತಾಲೂಕ ದೇವರಹಿಪ್ಪರಗಿಯಿಂದ ಪ್ರಾರಂಭಗೊಂಡಿರುವ ಬೃಹತ್ ರಥಯಾತ್ರೆಯ ಪಾದಯಾತ್ರೆಯು ಇದೇ ಅಗಷ್ಟ ೦೬ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು ಅಂದು ಬೂದಗುಂಪಾದ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸ್ವಾಗತಿಕೊಳ್ಳಲಾಗುವದು ಎಂದು ಜಿಲ್ಲಾ ಮಡಿವಾಳರ ಸಂಘದ ಅದ್ಯಕ್ಷ ಬಸವರಾಜ ಮಡಿವಾರ ತಿಳಿಸಿದ್ದಾರೆ..
ದೇಶದ ಮಡಿವಾಳ ಜನಾಂಗವನ್ನು ೧೭ ರಾಜ್ಯಗಳಲ್ಲಿ ಮತ್ತು ೩ ಕೇಂದ್ರ ಆಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜದವರ ಜಾತಿ ಧೋಬಿ ಎಂದು ಹೆಸರಿಸಿ ೧೦೧ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿದೆ ಆದರೆ ಕರ್ನಾಟಕದಲ್ಲಿ ಮಡಿವಾಳರನ್ನು ಧೋಬಿ’ ಎಂದು ಕರೆಯದೆ ಮಡಿವಾಳ, ಅಗಸ, ಪರೀಟ ಮುಂತಾದ ಹೆಸರುಗಳಿಂದ ಕರೆಯುತ್ತಿರುವದರಿಂದ ಮಡಿವಾಳರನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸದೆ ಇತರೆ ಹಿಂದುಳಿದ ವರ್ಗದಲ್ಲಿ ವರ್ಗಿಕರಿಸಲಾಗಿದೆ ಹೀಗಾಗಿ ಕರ್ನಾಟಕದ ಮಡಿವಾಳರು ಪರಿಶಿಷ್ಠ ವರ್ಗಕ್ಕೆ ಸಿಗುವ ಸೌಲಬ್ಯಗಳಿಂದ ವಂಚಿತರಾಗಿದ್ದಾರೆ ಈ ಅನ್ಯಾಯವನ್ನು ಸರಿಪಡಿಸುವಂತೆ ಮಡಿವಾಳರು ಕರ್ನಾಟಕ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಶಸ್ವಿಯಾಗಿಲ್ಲ  ಪ್ರಭದ್ದರಾಗಿ ಹಾಗೂ ಸಮರ್ಥವಾಗಿ ಪ್ರಯತ್ನಸದ ಕಾರಣದಿಂದ ಮಡಿವಾಳರು ಶೈಕ್ಷಣಿಕ ರಾಜಕೀಯ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ  ಹಿಂದುಳಿದಿದ್ದು ಅತ್ಯಂತ ಕನಿಷ್ಠ ಮಟ್ಟದ ಜೀವನ ಸಾಗಿಸಬೇಕಾಗಿದೆ. ಸಮಾಜ ಕುರಿತು ಕಾಳಜಿ ಉಳ್ಳವರು ಸುಮಾರು ೬ ವರ್ಷಗಳ ಕಾಲ ಶ್ರಮಿಸಿ ಸಮಾಜದ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ರಾಜ್ಯದ ಎಲ್ಲಾ ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳಿಂದ ನಿಯಮಾನುಸಾರವಾಗಿ ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸುವಲ್ಲಿ ಯಶಸ್ವಿಯಾದರು, ಕರ್ನಾಟಕ ಸರ್ಕಾರವು ಮಡಿವಾಳರ ಸ್ಥಿತಿಗತಿಗಳ ಸತ್ಯಾನ್ವೇಷಣೆಯನ್ನು ಅರಿಯುವದ್ದಾಕ್ಕಾಗಿ ಮೈಸೂರು ವಿಶ್ವವಿದ್ಯಾಲಯದ ಡಾ|| ಅನ್ನಪೂರ್ಣಮ್ಮನವರನ್ನು ಆಯೋಗದ ಅದಕ್ಷರನ್ನಾಗಿ ನೇಮಿಸಿ ವರದಿ ನಿಡುವಂತೆ ಕೇಳಿಕೊಂಡಿತ್ತು, ಈಗ ಡಾ|| ಅನ್ನಪೂರ್ಣಮ್ಮ ಆಯೋಗ ವರದಿಯನ್ನು ಸಲ್ಲಿಸಿದ್ದು ಮಡಿವಾಳ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಲು ಶಿಫಾರಸ್ಸು ಮಾಡಿದೆ. ಸದರಿ ವರದಿಯನ್ನು ಕೇಂದ್ರ  ಸರ್ಕಾರಕ್ಕೆ ಕಳಿಹಿಸಬೇಕಾಗಿದೆ ಆದರೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ ಅದಕ್ಕಾಗಿ ಡಾ|| ಅನ್ನಪೂರ್ಣಮ್ಮ ವರದಿ ಕೂಡಲೆ ಜಾರಿಗೆ ತರುವಂತೆ ಆಗ್ರಹಿಸಿ ಜನಜಾಗೃತಿಗಾಗಿ ಬೃಹತ್ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.
ಈ ಬೃಹತ್ ರಥಯಾತ್ರೆಯ ಪಾದಯಾತ್ರಯಲ್ಲಿ ಜಿಲ್ಲೆಯ ಮಡಿವಾಳ ಸಮಾಜದ ಬಾಂದವರು ತಪ್ಪದೆ ಭಾಗವಹಿಸಿ ಯಶಶ್ವಿಗೊಳಿಸಬೇಕೆಂದು ಜಿಲ್ಲಾದ್ಯಕ್ಷ ಬಸವರಾಜ ಮಡಿವಾಳರ, ತಾಲೂಕಾದ್ಯಾಕ್ಷ ಶಂಕ್ರಪ್ಪ ಮಡಿವಾಳರ, ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಮಡಿವಾಳರ, ಜಗದೀಶ ಮಡಿವಾಳರ  ತಿಳಿಸಿದ್ದಾರೆ. 

Advertisement

0 comments:

Post a Comment

 
Top