ಅವರು ಬುಧುವಾರ ನಗರದ ರೈಲ್ವೆ ನಿಲ್ದಾಣದಲ್ಲಿ ತಮ್ಮ ೮೦ನೇ ಹುಟ್ಟುಹಬ್ಬ ದಿನದ ಪೂರ್ವವೇ ಅಭಿಮಾನಿಗಳು ಕಾರ್ಯಕರ್ತರು ಏರ್ಪಡಿಸಿದ್ದ ಅವರ ಹುಟ್ಟುಹಬ್ಬದ ಪ್ರಯುಕ್ತ ಕೇಕ ಕತ್ತರಿಸಿ ಮಾತನಾಡಿದರು
ಮುಂದುವರೆದು ಮಾತನಾಡಿದ ಅವರು ತಮ್ಮ ೮೦ನೇ ಹುಟುಹಬ್ಬದ ಅಂಗವಾಗಿ ತಮಿಳುನಾಡಿನ ತಿರುಕಡಿಯೂರಾ ಪ್ರಸಿದ್ದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದ್ದಕ್ಕಾಗಿ ತಮಿಳುನಾಡಿಗೆ ತಾವು ಪ್ರಯಾಣ ಬೆಳಸುತ್ತಿದ್ದು ಆಭಿಮಾನಿಗಳು ಕಾರ್ಯಕರ್ತರು ಏರ್ಪಡಿಸಿದ ಸಮಾರಂಭಕ್ಕೆ ಅಭಿನಂದನೆ ಸಲ್ಲಿಸಿ ತಾವು ಅನಾರೋಗ್ಯದಿಂದ ಬಳಲುತ್ತಿದ್ದಾಗ ಅನೇಕ ಕಾರ್ಯಕರ್ತರು ಜಾತಿ,ಮತ, ಬೇದವಿಲ್ಲದೆ ಮಂದಿರ,ಮಸೀದಿ,ಚರ್ಚುಗಳಲ್ಲಿ ಅನೇಕ ಅಭಿಮಾನಿಗಳು ತಾವು ಗುಣಮುಖವಗಲೇಂದು ಪ್ರಾರ್ಥನೇ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದರ ಪರಿಣಾಮವಾಗಿ ಇಂದು ನಾನು ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದೆನೆ ಎಂದರೆ ಜನರ ಆರ್ಶೀವಾದದ ದೊಡ್ಡ ಪರಿಣಾಮವೆಂದು ಹೇಳಿದರು.
ಇಂದಿನ ರಾಜಕೀಯ ಕುರಿತು ಮಾತನಾಡಲು ಹಿಂಜರಿದ ಅವರು ಇಂದು ರಾಜಕೀಯವು ವ್ಯಾಪಾರಿಕರಣವಾಗಿದ್ದು, ಮೊದಲಿನ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಕಲುಶಿತಗೊಂಡಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾಜಿ ಸಚಿವ ಯಾದವರಾವ್,ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಮುಖಂಡರಾದ ನ್ಯಾಯವಾದಿ ಆಶೀಫ್‌ಅಲಿ, ಡಾ|| ಮಲ್ಲಿಕಾರ್ಜುನ ರಾಂಪುರ, ಶಾಂತಣ್ಣ ಮುದಗಲ್ಲ, ಶ್ರೀನಿವಾಸ ಗುಪ್ತ, ಐ.ಬಿ ಸತ್ಯನಾರಾಯಣ, ವೈಜನಾಥ್ ದಿವಟರ್, ಅರ್ಜುನ್‌ಸಾ ಕಾಟ್ವಾ, ಯಲ್ಲಪ್ಪ ಕಾಟ್ರಳ್ಳಿ, ಪರಮಾನಂದ ಯಾಳಗಿ, ಯಂಕಣ್ಣ ಹೊರತಟ್ನಾಳ, ಕರಿಮುದ್ದೀನ ಕಿಲ್ಲೇದಾರ ತುಕರಾಮಪ್ಪ ಗಢಾದ, ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೋಂಡಿದ್ದರು.
0 comments:
Post a Comment