ದಿ.೧೫ ರಿಂದ ೧೭-ಅಗಷ್ಟ-೨೦೧೪ ರವರೆಗೆ ತಮಿಳುನಾಡಿನ ಕೊಯಿಮುತ್ತೂರಿನಲ್ಲಿ ನಡೆದ ೨೧ನೇ ರಾಷ್ಟ್ರೀಯ ಕರಾಟೆ ಸ್ಪರ್ಧೆ ನಡೆಯಿತು. ಮತ್ತು ಭಾರತ ಸರಕಾರದಿಂದ ಹಾಗೂ ಇಂಟರ್‌ನ್ಯಾಷನಲ್ ಓಲಿಂಪಿಕ್ ಕಮಿಟಿ ಯಿಂದ ಮಾನ್ಯತೆ ಪಡೆದ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ (ಕ.ಅ.ಇ.) - ಏಚಿಡಿಚಿಣe ಂssoಛಿiಚಿಣioಟಿ ಔಜಿ Iಟಿಜiಚಿ (ಏ ಂ I) ನಡೆಸುವ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ಯು ನಡೆಸಲಾಯಿತು. ಈ ಬೆಲ್ಟ್ ಪರೀಕ್ಷೆಯನ್ನು ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ದ ಉಪಾಧ್ಯೆಕ್ಷರಾದ ಕಯೋಶಿ ಸಿ.ಎಸ್.ಅರುಣ ಮಾಚಯ್ಯ ರವರು ನಡೆಸಿದರು. ಇಂತಹ ವಿಶೇಷ ಬೆಲ್ಟ್ ಪರೀಕ್ಷೆಯಲ್ಲಿ ನಗರದ ಅಂತರ್ ರಾಷ್ಟ್ರೀಯ ಕರಾಟೆಪಟು ಶ್ರೀನಿವಾಸ ಪಂಡಿತ ಭಾಗವಹಿಸಿ ಬ್ಲ್ಯಾಕ್‌ಬೆಲ್ಟ್ ೨ನೇ ಡಾನ್ ಗ್ರೇಡಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಆಲ್ ಇಂಡಿಯಾ ಶಿತೋ ರಿಯೋ ಕರಾಟೆ ಫೆಡರೇಷನ್ ನ ಉಪಾಧ್ಯೆಕ್ಷರಾದ ಶಿಹಾನ್ ದಶರಥ ದುಮನಸೂರ ಮತ್ತು ಶಿಹಾನ್ ಮಲ್ಲಿಕಾರ್ಜುನ ಕೊತಬಾಳ ತಿಳಿಸಿದ್ದಾರೆ.
0 comments:
Post a Comment