ಹಿರಿಯ ರಾಜಕಾರಣಿ, ಸಮಾಜ ಸೇವಕ, ಸಹಕಾರಿ ಕ್ಷೇತ್ರದ ತಜ್ಞ ಸಂಗಪ್ಪ ವಕ್ಕಳದ್‌ರವರು ಸುಮಾರು ೧೦ ರಾಷ್ಟ್ರಗಳ ವಿದೇಶಿ ಪ್ರವಾಸ ಕೈಗೊಂಡಿದ್ದು, ಅವರ ಈ ವಿದೇಶಿ ಪ್ರವಾಸದಿಂದ ಬ್ಯಾಂಕಿಂಗ್ ಆರ್ಥಿಕ ಸುಧಾರಣೆ ವ್ಯವಸ್ಥೆಗೆ ಅವರ ವಿದೇಶಿ ಅಧ್ಯಯನ ಪ್ರವಾಸ ಸಹಕಾರಿಯಾಗಲಿ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ ಸಲಹೆ ನೀಡಿದರು.
ಅವರು ನಗರದ ವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದ ಆವರಣದಲ್ಲಿ ಸಂಘದ ನಿರ್ದೇಶಕರಾಗಿರುವ ಸಂಗಪ್ಪ ವಕ್ಕಳದರವರು ತಮ್ಮ ಪತ್ನಿ ಶ್ರೀಮತಿ ಈರಮ್ಮ ವಕ್ಕಳದ್‌ರವರೊಂದಿಗೆ ಯುರೋಪ, ಡೆನ್ಮಾರ್ಕ್, ಇಟಲಿ, ಲಂಡನ್, ಸ್ವಿಜ್ಜರ್ಲಾಂಡ್, ರೋಮ್, ಜಪಾನ್‌ದಂತಹ ಸುಮಾರು ೧೦ ರಾಷ್ಟ್ರಗಳ ಪ್ರವಾಸ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅವರಿಗೆ ಪತ್ತಿನ ಸಹಕಾರಿ ಸಂಘದ ವತಿಯಿಂದ ಏರ್ಪಡಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಸಂಗಪ್ಪ ವಕ್ಕಳದ್‌ರವರ ವಿದೇಶ ಪ್ರವಾಸ ಯಶಸ್ವಿಯಾಗಲಿ ಅವರ ವಿದೇಶಿ ಅಧ್ಯಯನದಿಂದ ನಮ್ಮ ಈ ಭಾಗದ ಕೈಗಾರಿಕೆ, ಶೈಕ್ಷಣಿಕ ಬ್ಯಾಂಕಿಂಗ್ ಆರ್ಥಿಕ ವ್ಯವಸ್ಥೆ ಸುಧಾರಣೆಗೆ ಅನುಕೂಲವಾಗಲಿ. ಅವರು ತಮ್ಮ ೧೦ ವಿದೇಶಿ ಅಧ್ಯಯನ ಪ್ರವಾಸದ ಬಳಿಕ ಪುಸ್ತಕ ಮಾಡಿ ಅದರಲ್ಲಿ ತಮ್ಮ ಅನುಭವ, ಅಧ್ಯಯನ ಪ್ರಕಟಿಸಿ ಬಿಡುಗಡೆಗೊಳಿಸುವಂತಾಗಲಿ. ಅದರಿಂದ ನಮ್ಮ ಈ ಭಾಗಕ್ಕೆ ಹೆಚ್ಚಿನ ಅನುಕೂಲ ದೊರೆಯಲಿ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಿ.ಎಸ್.ಗೋನಾಳ ಶುಭ ಹಾರೈಸಿದರು.
ಸನ್ಮಾನಿತಗೊಂಡು ಮಾತನಾಡಿದ ಸಂಗಪ್ಪ ವಕ್ಕಳದ್‌ರವರು ೧೯೭೧ ರಲ್ಲಿ ಖಾಸಗಿ ಕಂಪನಿಯಲ್ಲಿದ್ದಾಗ ವಿದೇಶಿ ಪ್ರವಾಸ ಮಾಡಿದ್ದೇ. ಈಗ ಸ್ವಂತ ಖರ್ಚಿನಲ್ಲಿ ನನ್ನ ಕುಟುಂಬದೊಂದಿಗೆ ವಿದೇಶಿ ಪ್ರವಾಸ ಹಮ್ಮಿಕೊಂಡಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಆ ದೇಶಗಳ ಪ್ರಗತಿ ಅಧ್ಯಯನಗಳ ಮಾಡಿಕೊಂಡು ನನ್ನ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಂತಗೌಡ ಪಾಟೀಲ್, ನಿರ್ದೇಶಕರಾದ ಚಂದ್ರಕಾಂತ ಶಿಂಗಟಾಲೂರು, ದೇವಪ್ಪ ಅರಕೇರಿ, ವೆಂಕನಗೌಡ ಮೇಟಿ, ಶರಣಗೌಡ ಪಾಟೀಲ್ ಸೇರಿದಂತೆ ವ್ಯವಸ್ಥಾಪಕ ಬಸವರಾಜ ರಾಮದುರ್ಗ ಮತ್ತಿತರರು ಉಪಸ್ಥಿತರಿದ್ದರು.
0 comments:
Post a Comment