PLEASE LOGIN TO KANNADANET.COM FOR REGULAR NEWS-UPDATES


ನಿಧನ ಹೊಂದಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾರಸ್ವತ ಲೋಕದ ಧೀಮಂತ ಸಾಹಿತಿ ಡಾ ಉಡುಪಿ ರಾಜಗೋಪಾಲಚಾರ್ಯ ಅನಂತಮೂರ್ತಿ ಹಾಗೂ ಜಿಲ್ಲೆಯ ಹಿರಿಯ ರಂಗ ಕಲಾವಿದೆ ಸರೋಜಮ್ಮ ಧುತ್ತರಗಿ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಹಾಗೂ ತಾಲೂಕು ಘಟಕಗಳ ಕನ್ನಡ ಸಾಹಿತ್ಯ ಪರಿಷತ್ತು  ಮತ್ತು ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ ಇವುಗಳ ಸಹಯೋಗದಲ್ಲಿ ನಗರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿ, ಅನಂತಮೂರ್ತಿ ಸದಾ ವಿವಾದಗಳಲ್ಲಿ ಇದ್ದರೂ ಕೂಡ, ಸಾರ್ವಕಾಲಿಕ ಉಳಿಯುವಂಥ ಬರಹವನ್ನು ಸಮಾಜಕ್ಕೆ ನೀಡಿದ್ದಾರೆ.ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರದ ಬಹುದೊಡ್ಡ ಲೇಖಕರು ಎಂದು ನುಡಿದರು. ರಂಗ ನಟಿ ಸರೋಜಮ್ಮ ಧುತ್ತರಗಿ ಕುರಿತು ಮಾತನಾಡಿ ರಂಗಭೂಮಿಗೆ ದುತ್ತರಗಿ ದಂಪತಿಗಳ ಕೊಡುಗೆ ಅಪಾರ ಎಂದು ನುಡಿದರು.
ಬಂಡಾಯ ಸಾಹಿತಿ, ಕವಿ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಅನಂತಮೂರ್ತಿ ಸಂಸ್ಕಾರ ಕಾದಂಬರಿಯಲ್ಲಿ ಮನುಷ್ಯ ಬದುಕಿನ ಹಲವು ಮಜಲುಗಳನ್ನು ಅನಾವರಣಗೊಳಿಸಿ, ಮನುಷ್ಯ ಬದುಕು ಕೊನೆಗೆ ಮಣ್ಣಿಗೆ ತುತ್ತು ಅನ್ನುವದನ್ನು ಹೊರಹಾಕಿದ್ದಾರೆ. ಸಹಬಾಳ್ವೆ ಸಮುದಾಯಕ್ಕೆ ಅಗತ್ಯ ಅನ್ನುವದನ್ನು ಅನಂತಮೂರ್ತಿ ಎಂದೂ ಮರೆತವರಲ್ಲ ಎಂದು ಅವರು ತಿಳಿಸಿದರು. 
ಮತ್ತೊಬ್ಬ ಅತಿಥಿ ಡಾ. ವಿ ಬಿ ರಡ್ಡೇರ ಮಾತನಾಡಿ, ಘಟಶ್ರಾದ್ಧ ಮತ್ತು ಸಂಸ್ಕಾರ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ. ಅವು ಚಲನಚಿತ್ರಗಳಾಗಿ ಭಾರತ ಸರಕಾರದಿಂದ ಸ್ವರ್ಣ ಕಮಲ ಪ್ರಶಸ್ತಿಗಳಿಸಿ ಕೊಡುವಲ್ಲಿ ಯಶಸ್ವಿಯಾಗಿವೆ ಎಂದರು. ಅಂಥ ಒಬ್ಬ ಮಹಾನ್ ವ್ಯಕ್ತಿಯ ನಿಧನದ ಸುದ್ದಿ ತಿಳಿದ ಕೆಲವು ಸಂಪ್ರದಾಯಸ್ತ ಸಂಘಟನೆಗಳು ಪಟಾಕಿ ಹಚ್ಚಿ, ಸಿಹಿ ವಿತರಿಸಿ ಸಂಭ್ರಮಿಸಿದ್ದನ್ನು ವಿಕೃತಿ ಎಂದು ಖಂಡಿಸಿದರು. 
  ಕೋಟೆಯ ಕರ್ನಾಟಕ ದಿನ ಪತ್ರಿಕೆ ಸಂಪಾದಕ, ಕಲಾವಿದ ವೈ ಬಿ ಜೂಡಿ, ಅಪ್ಪಳಿಸು ಪತ್ರಿಕೆಯ ಸಂಪಾದಕ ರುದ್ರಪ್ಪ ಭಂಡಾರಿ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಡಾ ಪ್ರಕಾಶ ಬಳ್ಳಾರಿ, ಪತ್ರಕರ್ತ ಸಿದ್ದಪ್ಪ ಹಂಚಿನಾಳ, ನ್ಯಾಯವಾದಿ ವಿಜಯ ಅಮೃತರಾಜ, ವೀರ ಕನ್ನಡಿಗ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಪತ್ರಕರ್ತ ಸ. ಶರಣಪ್ಪ ಪಾಟೀಲ, ಡಾ ಸತ್ಯನಾರಾಯಣ ಬಳ್ಳಾರಿ, ಪತ್ರಕರ್ತ ಬಸವರಾಜ ಗುಡ್ಲಾನೂರು, ಪ್ರಜಾವಾಣಿ ಪತ್ರಿಕೆಯ ವರದಿಗಾರ ಶರತ್ ಹೆಗಡೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಕ್ಬರ ಸಿ ಕಾಲಿಮಿರ್ಚಿ ಮಾತನಾಡಿದರು.
ಜಿಲ್ಲಾ ಚುಸಾಪ ಅಧ್ಯಕ್ಷ ಹನುಂತಪ್ಪ ಅಂಡಗಿ, ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದಶಿ ಅರುಣ ವೇದಪಾಠಕ, ಕರಾಟೆಪಟು ಶ್ರೀನಿವಾಸ ಪಂಡಿತ, ಜಿಲ್ಲಾ ಕಸಾಪ ಗೌರವ ಕಾಶಾಧ್ಯಕ್ಷ ಆರ್ ಎಸ್ ಸರಗಣಾಚರ್ ಇತರರು ಉಪಸ್ತಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರಪ್ಪ ಮ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಕೊಪ್ಪಳ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿ ಕಾ ಬಡಿಗೇರ ನಿರೂಪಿಸಿದರು, ಕೊನೆಯಲ್ಲಿ ಅರ್ ಎಸ್ ಸರಗಣಾಚಾರ್ಯ ವಂದಿಸಿದರು.
ಫೋಟೊ : ೧, ೨







Advertisement

0 comments:

Post a Comment

 
Top