PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲ್ಲೂಕಿನ ಮರಕುಂಬಿ ಗ್ರಾಮದಲ್ಲಿ ೨೯-೦೮-೧೪ ರಂದು ದಲಿತರು ಮತ್ತು ಸವರ‍್ಣೀಯರ ನಡುವೆ ಘರ್ಷಣೆ ನಡೆದು ದಲಿತರಿಗೆ ಸೇರಿದ ನಾಲ್ಕು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು ಆರು ಜನರು ಗಾಯಗಂಡಿದ್ದಾರೆ. ಈ ಧಾಳಿಯನ್ನು ಪಿಯುಸಿಎಲ್ ಉಗ್ರವಾಗಿ ಖಂಡಿಸುತ್ತದೆ. 
೨೦೧೪ ಜೂನ್ ೧೯ರಿಂದ ಗ್ರಾಮದಲ್ಲಿ ಸಣ್ಣ ಪುಟ್ಟ ಕಾರಣಗಳಿಂದ ಘರ್ಷಣೆಗಳು ನಡೆಯುತ್ತಲೇ ಇವೆ. ಅಲ್ಲಿ ದಲಿತರಿಗೆ ಸಾರ್ವಜನಿಕ ಸೆಲೂನ್ಗಳಲ್ಲಿ ಕ್ಷೌರದ ಬಹಿಷ್ಕಾರದಿಂದ ಪ್ರಾರಂಭವಾದ ಘರ್ಷಣೆ , ಗುಡಿಸಲುಗಳಿಗೆ ಬೆಂಕಿ ಹಚ್ಚುವವರೆಗೂ ತಲುಪಿದೆ.ಅಲ್ಲಿ ಈಗ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಜಾರಿಯಲ್ಲಿದೆ. ಕೂಲಿಗೆ ಕರೆಯುತ್ತಲೂ ಇಲ್ಲ. ಆಗಸ್ಟ್ ೪ ರಂದು ಹುಲಿಗಪ್ಪ ಎನ್ನುವರ ಮಕ್ಕಳ ಬಟ್ಟೆ ಹೊಲೆಯಲು ಟೈಲರ್ ನಿರಾಕರಿಸಿದಾಗ ಗಲಾಟೆ ನಡೆದಿದೆ. ದಲಿತರ ಗುಡಿಸಲು ಸುಡುವ ತನಕ ಈ ಸಂಘರ್ಷ ತಲುಪಿರುವುದು ಅಲ್ಲಿನ ಸವರ್ಣೀಯರು ಯಾವುದೇ ಕಾನೂನಿನ ಭಯವಿಲ್ಲದಿರುವುದು ಮತ್ತು ಸಾಮಾಜಿಕ ಬದಲಾವಣೆಗಳನ್ನು ಒಪ್ಪಿಕೊಳ್ಳದ ಮನಸ್ಥಿತಿಯೇ ಕಾರಣವಾಗಿದೆ.
ಈಗಲಾದರೂ ಸರ್ಕಾರ ರಾಜಿ ಸಂಧಾನಗಳ ಮಾರ್ಗ ಅನುಸರಿಸದೆ, ಸಾಮಾಜಿಕ ದಬ್ಬಾಳಿಕೆ ನಡೆಸುತ್ತಿರುವವರ ವಿರುದ್ಧ ಎಸ್/ ಎಸ್ಟಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಕಿಡಿಗೇಡಿಗಳನ್ನು ಬಂಧಿಸಿ ಕಾನೂನಿನ ಕ್ರಮ ತೆಗೆದುಕೊಳ್ಳಬೆಕೆಂದು ಪಿಯುಸಿಎಲ್ ಸರ್ಕಾರವನ್ನು ಆಗ್ರಹಿಸುತ್ತದೆ. ಎಲ್ಲಾ ಪ್ರಗತಿಪರ ಸಂಘಟನೆಗಳು ದಲಿತರ ಪರ ನಿಲ್ಲಬೇಕೆಂದೂ ಒತ್ತ್ತಾಯಿಸುತ್ತದೆ ಎಂದು ಪಿಯುಸಿಎಲ್ ರಾಜ್ಯಾಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಹೇಳಿದ್ದಾರೆ.

Advertisement

0 comments:

Post a Comment

 
Top