PLEASE LOGIN TO KANNADANET.COM FOR REGULAR NEWS-UPDATES



ಕೋರ್ಟ ಆದೇಶದಂತೆ ನಿನ್ನೆ ಬೆಳಗಾವಿಯ ಎಳ್ಳೂರಿನಲ್ಲಿ ನಾಮಪಲಕವನ್ನು ಬೆಳಗಾವಿಯ ಜಿಲ್ಲಾಡಳಿತ ತೆರವುಗೊಳಿಸಿದ್ದು, ಪುನಃ ಮಹರಾಷ್ಟ್ರ ಎಂ.ಇ,ಎಸ್, ಕಾರ್ಯಕರ್ತರು ಮತ್ತೆ ನಾಮಪಲಕವನ್ನು ಹಾಕಿ ಪುಂಡಾಟಿಕೆ ಮೆರೆದಿದ್ದು ಖಂಡನಾರ್ಹ ಎಂದು ಕರವೇ (ನಾರಾಯಣಗೌಡ ಭಣ) ಕಾರ್ಯಕರ್ತರು ನಗರದ ಅಶೋಕ ವೃತ್ತದಲ್ಲಿ ಸಂಜೆ ೬ ಗಂಟೆಗೆ ದಿಡೀರ ಪ್ರತಿಭಟನೆ ನಡೆಸಿದರು. ನಮ್ಮ ನೆಲದಲ್ಲಿಬಂದು ಅಟ್ಟಹಾಸ ಮೆರೆದಿರುವುದು ಮತ್ತು ಶಾಂತಿ  ಭಂಗವನ್ನುಂಟು ಮಾಡಿರುವುದು ವಿಪರ್ಯಾಸ. ಮಾದ್ಯಮ ಮತ್ತು ಪೋಲಿಸರನ್ನು ಸಹ ನಾಮಪಲಕ ಸ್ಥಳದ ಹತ್ತಿರ ಬಿಡದೆ ಗುಂಡಾಗಿರಿ ವರ್ತನೆ ಮಾಡಿದ್ದು ಮತ್ತು ಕಲ್ಲು ತೂರಾಟ ನಡೆಸಿದ್ದು ನಾಚಿಕೇಗೇಡಿನ ಕೆಲಸವಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ. ಎಂ.ಇ.ಎಸ್ & ಮಹರಾಷ್ಟ್ರ ಸರಕಾರದ ವಿರುದ್ದ ಘೋಷಣೆಯನ್ನು ಕೂಗಿದ ಕರವೇ ಕಾರ್ಯಕರ್ತರು ನಮ್ಮ ರಾಜ್ಯ ಸರಕಾರವು ಇಇದಕ್ಕೆ ತಕ್ಕ ಉತ್ತರ ನೀಡಬೇಕೆಂದು ಆಗ್ರಹಿಸಿದರು. ಟೈರಿಗೆ ಬೆಂಕಿ ಹಚ್ಚಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು. 
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಪ್ರವೀಣ ಬ್ಯಾಹಟ್ಟಿ, ಪೃತ್ವಿರಾಜ್ ಚಾಕಲಬ್ಬಿ, ಗವಿಸಿದ್ದಪ್ಪ ಅಂಡಿ, ಜೀವನಕುಮಾರ ಹಿರೇಮಠ, ಶಶಿ ಹೂಗಾರ, ಮಂಜುನಾಥ ಯಲಬುರ್ಗಾ, ಬಸು ಬೆಲ್ಲದ ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top