ವಕೀಲಗೇಟ್ ಕೊಳಚೆ ಪ್ರದೇಶದ ಸಮಸ್ಯೆ
ಗಂಗಾವತಿ ನಗರದ ನಗರಸಭೆಯ ಹತ್ತಿರ ನಿನ್ನೆಯಿಂದ ವಕೀಲ್‌ಗೇಟ್ ಕೊಳಚೆ ಪ್ರದೇಶ ನಿವಾಸಿಗಳ ಸಂಘದವರು ವಿನ್ಯಾಸದ ಪ್ರಕಾರ ಗುಡಿಸಲುಗಳನ್ನು ಸರಿಪಡಿಸುವುದು, ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸುವುದು, ಹಳೆಯ ಭೂಮಾಲೀಕರಿಂದ ಕೊಳಚೆ ನಿವಾಸಿಗಳಿಗೆ ರಕ್ಷಣೆ ಕೋರಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿ, ಆ ಪ್ರದೇಶದ ನಿವಾಸಿಗಳ ಬಹುವರ್ಷಗಳ ಬೇಡಿಕೆಗಳನ್ನು ಈಡೇರಿಸಲು ತಕ್ಷಣ ಸ್ಪಂದಿಸುವಂತೆ ದೂರವಾಣಿಯಲ್ಲಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದೇ ವಿಷಯದ ಬಗ್ಗೆ ನಿನ್ನೆ ಕೊಳಚೆ ಅಭಿವೃದ್ಧಿ ಮಂಡಳಿಯ ಆಯುಕ್ತರಾದ ಶ್ರೀ ಗುರುಪ್ರಸಾದ ಹಾಗೂ ಕಾರ್ಯಪಾಲಕ ಅಭಿಯಂತತರರಾದ ಶ್ರೀ ಮೆಂಡಿಗೇರಿ ಜೊತೆಗೂ ಚರ್ಚಿಸಲಾಗಿದ್ದು, ಈಗಾಗಲೇ ನಿರ್ಣಯಿಸಿದಂತೆ ಭೂಮಾಲೀಖರು ಹಾಗೂ ಸ್ಥಳೀಯ ನಿವಾಸಿಗಳಿಗೆ ಅನ್ಯಾಯವಾಗದಂತೆ ಸಂಧಾನದೊಂದಿಗೆ ತಕ್ಷಣ ಕ್ರಮಕೈಗೊಳ್ಳಲು ತಿಳಿಸಲಾಗಿದ್ದು, ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ನನ್ನ ಅಧ್ಯಕ್ಷತೆಯಲ್ಲಿ ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಕ್ಷಣ ಕ್ರಮಕೈಗೊಳ್ಳಲು ತಿಳಿಸಲಾಗಿತ್ತು. ಆದರೆ, ಅಂದಿನ ಜಿಲ್ಲಾಧಿಕಾರಿಗಳು ಲೋಕಸಭಾ ಚುನಾವಣೆಗಳು ಸಮೀಪಿಸಿದ್ದರಿಂದ, ಚುನಾವಣೆಯ ನಂತರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಜಿಲ್ಲಾಡಳಿತ ಹಾಗೂ ಕೊಳಚೆ
ನಿರ್ಮೂಲನಾ ಮಂಡಳಿಯವರು ಕ್ರಮಕೈಗೊಳ್ಳದಿರುವುದರಿಂದ ಸ್ಥಳೀಯ ನಿವಾಸಿಗಳು ಅನಿವಾರ್ಯವಾಗಿ ಅನಿರ್ದಿಷ್ಟಕಾಲ ಧರಣಿ ಹಮ್ಮಿಕೊಂಡಿದ್ದು, ತಕ್ಷಣ ಸ್ಪಂದಿಸಲು ಗಂಗಾವತಿಯ ನಗರಸಭೆಯ ಆಯುಕ್ತರಿಗೂ ನಿರ್ದೇಶನ ನೀಡಲಾಯಿತು.
0 comments:
Post a Comment