ಯಲಬುರ್ಗಾ ಪಟ್ಟಣ ಪಂಚಾಯತಿ ವತಿಯಿಂದ ಪ್ರಸಕ್ತ ಸಾಲಿಗೆ ಕುಶಲ ಕರ್ಮಿಗಳಿಗೆ ಗುಂಪು ವಸತಿ ಕಾರ್ಯಾಗಾರ ಹಾಗೂ ವೈಯಕ್ತಿಕ ಕುಶಲ ಕರ್ಮಿಗಳಿಗೆ ವಸತಿ ಕಾರ್ಯಾಗಾರ ನಿರ್ಮಾಣಕ್ಕಾಗಿ ಕ್ರಿಯಾ ಯೋಜನೆ ಸಲ್ಲಿಸಬೇಕಾಗಿದ್ದು, ಆಸಕ್ತ ಕುಶಲಕರ್ಮಿ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಶಲ ಕರ್ಮಿಗಳಿಗೆ ಬಿದಿರು, ಬೆತ್ತದ, ಬಡಗಿ, ಕಮ್ಮಾರಿಕೆ, ಚರ್ಮಗಾರಿಕೆ, ಕರಕುಶಲ ವಸ್ತು ತಯಾರಿಕೆ, ತೆಂಗಿನ ನಾರಿನ ಉತ್ಪನ್ನ ತಯಾರಿಕೆ, ಬೆಳ್ಳಿ/ಬಂಗಾರ ಆಭರಣಗಳ ತಯಾರಿಕೆ, ಜೀನ್ಸ್ ಹೊಲಿಗೆ, ಕುಂಬಾರಿಕೆ, ಖಾದಿ ಕೈಮಗ್ಗ ನೇಯ್ಗೆಗಾರರು (ಹತ್ತಿ), ರೇಷ್ಮೆ, ಪಾಲಿಸ್ಟರ್), ನೂಲುಗಾರರು ಕೆಲಸ, ಕೌದಿ ಹೊಲಿಯುವುದು, ಜನರಲ್ ಇಂಜನಿಯರಿಂಗ್, ಚಾಪೆ, ಬುಟ್ಟೆ ಹೆಣೆಯುವುದು, ತೆಂಗಿನ ನಾರಿನ ಹಗ್ಗ ಮಾಡುವುದು (ಪ್ಲಾಸ್ಟಿಕ್ ಹೊರತುಪಡಿಸಿ), ಅಗರಬತ್ತಿ, ಕಸೂತಿ, ಎಂಬ್ರಾಯಡರಿ, ಎತ್ತಿನ ಗಾಡಿ ತಯಾರಿಕೆ, ಕಲ್ಲಿನ ಕೆತ್ತನೆ ಕೆಲಸ, ಇತರೆ ಕುಶಲ ಕರ್ಮಿಗಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸುವವರು ಆ.25 ರೊಳಗಾಗಿ ಪಟ್ಟಣ ಪಂಚಾಯತ್ ಕಾರ್ಯಾಲಯ, ಯಲಬುರ್ಗಾ ಇವರಿಗೆ ಅಧಿಕೃತ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ್ ಕಛೇರಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment