ಕೊಪ್ಪಳ: ಜು೨೬, ಕಾರ್ಗಿಲ್ ಯುದ್ದದಲ್ಲಿ ವೀರಮರಣವನ್ನಪ್ಪಿದ ಕೊಪ್ಪಳ ತಾಲೂಕಿನ ಆಳವಂಡಿ ಗ್ರಾಮದ ವೀರಯೋದ ಮಲ್ಲಯ್ಯ ಮೇಗಳಮಠರವರ ಸವಿನೆನಪಿಗಾಗಿ ಅಳವಂಡಿಯಲ್ಲಿ ಸಭಾಭವನ ನಿರ್ಮಾಣಕ್ಕೆ ಸಂಸದ ಸಂಗಣ್ಣ ಕರಡಿ ಭರವಸೆ ನೀಡಿದರು.
ಅವರು ಶನಿವಾರದಂದು ಅಳವಂಡಿ ಗ್ರಾಮದಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಗೋರಟಾ ಸ್ಮಾರಕ ನಿರ್ಮಾಣ ನಿಧಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
೧೯೯೯ ರ ಜುಲೈ ೨೬ ರ ದಿವಸ ನೆನೆದರೆ ಪ್ರತಿಯೊಬ್ಬ ಭಾರತೀಯನು ರೋಮಾಂಚನಗೊಳ್ಳುತ್ತಾನೆ. ಆ ದಿವಸ ಭಾರತೀಯರು ಹೆಮ್ಮೆ ಪಡಬೇಕಾದ ದಿವಸ ಏಕೆಂದರೆ ಕಾರ್ಗಿಲ್ ಪ್ರದೆಶದ ದ್ರಾಸಾ, ಬತಾಲಿಕ್, ಟೊಲಿಂಗ್ ಹಿಗೇ ಮುಂತಾದ ಹಿಮ ಶಿಖರಗಳಲ್ಲಿ ಅಡಗಿ ಕುಳಿತಿದ್ದ ಪಾಕ ಸೈನಿಕರನ್ನು ಒಡೆದು ಹಾಕಿ ವಿಜಯ ಪತಾಕೆ ಹಾರಿಸಿದ ದಿನ ಎಂಬುದು ಮರೆಯಾಲಾಗದು. ಅದರಂತೆ ಅಳವಂಡಿ ಗ್ರಾಮದ ವಿರ ಯೋಧ ದಿ.ಮಲ್ಲಯ್ಯ ಸ್ವಾಮಿಗಳು ಸಹಿತ ಆ ಹೆಮ್ಮೆಯ ದಿವಸವನ್ನು ಭಾರತೀಯ ಪಾಲಿಗೆ ಕೊಡುವಲ್ಲಿ ಪಾಲುದಾರರಾಗಿದ್ದಾರೆ ಹಾಗಂತ ಕೇವಲ ಹೆಮ್ಮಯಿಂದ ಬೀಗಿದರೆ ಅಬಿಮಾನದ ಮಾತುಗಳನ್ನು ಆಡಿದರೆ ಸಾಕಾಗುವದಿಲ್ಲ ಇದರ ಗೆಲವಿನ ಜೊತೆಗೆ ಕಾಡುವ ನೆನಪುಗಳು ಕೂಡಾ ಬಲು ಘೋರವಾಗಿದೆ ಎಂದರು. ಇಂದಿನ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗಿ ದೇಶದ ಅಭಿಮಾನವನ್ನೆ ಮರೆಯುತ್ತಿರುವ ಈ ಸಂದರ್ಭದಲ್ಲಿ ತಾಯಿ ನಾಡಿನ ರಕ್ಷಣೆಗಾಗಿ ಪ್ರತಿಯೊಬ್ಬ ಯುವಕರು ಸಿಡಿದೇಳ ಬೇಕಾದ ಪ್ರಸಂಗ ಬಂದಿದೆ. ದೇಶಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ ಸೈನಿಕ ಮಹನೀಯರಿಂದ ಇಂದು ದೇಶ ಸ್ವತಂತ್ರವಾಗಿದೆ ಸೈನಿಕರ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಅವರ ನೇರವಿಗೆ ಪ್ರಧಾನ ಮಂತ್ರಿ ನರೆಂದ್ರ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆಂದ ಅವರು ವೀರ ಯೋಧ ಮಲ್ಲಯ್ಯ ಮೇಗಳಮಠರವರ ಪ್ರತಿಮೆ ಸ್ಥಾಪನೆಗಾಗಿ ಅಂದಾಜು ೧ ಲಕ್ಷ ೮೦ ಸಾವಿರ ಹಣ ಬೇಕಾಗಿದ್ದು, ಸಂಸದರ ನಿಧಿಯಲ್ಲಿ ಬಿಡುಗಡೆ ಮಾಡುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಸಿದ್ದಲಿಂಗಯ್ಯ ಸ್ವಾಮಿ ಹಿರೇಮಠ, ಅಪ್ಪಣ್ಣ ಪದಕಿ, ರಾಜು ಬಾಕಳೆ, ಮಹಾಂತೇಶ ಮೈನಳ್ಳಿ, ಮಂಜುನಾಥ ಪಾಟೀಲ್ ಹಂದ್ರಾಳ, ಗಂಗಮ್ಮ ಮೇಗಳಮಠ, ಯೋದ ಶೇಖರಗೌಡ ಮಾಲಿ ಪಾಟೀಲ್, ಡಿ.ಮಲ್ಲಣ್ಣ, ವೀರಣ್ಣ ಸಂಕ್ಲಾಪುರ, ಮಂಜುನಾಥ ಹಳ್ಳಿಕೇರಿ, ಪರಮಾನಂದ ಯಾಳಗಿ, ನಾಗಪ್ಪ ಸವಡಿ, ಶಂಕ್ರಪ್ಪ ಕಲಾದಗಿ, ವಸಂತ ನಾಗರಳ್ಳಿ, ರಮೇಶ ಬಾವಳ್ಳಿ, ಹನುಮಂತಗೌಡ ಅಳವಂಡಿ, ಶರಣಪ್ಪ ಪಾಟೀಲ್, ಅಳವಂಡಿ ಗ್ರಾಮಸ್ಥರು ಹಾಜರಿದ್ದರಿದ್ದರು.
0 comments:
Post a Comment