ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯತ್ವಕ್ಕಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2000 ತಿದ್ದುಪಡಿ 2006 ರನ್ವಯ ಸಮಿತಿ ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಸದಸ್ಯತ್ವದ ಅವಧಿಯು ಮೂರು ವರ್ಷದ್ದಾಗಿರುತ್ತದೆ. ಆಯ್ಕೆಯಾದ ಸದಸ್ಯರುಗಳಿಗೆ ಗೌರವ ಧನ ಮತ್ತು ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು 30 ರಿಂದ 60 ವರ್ಷ ವಯೋಮಿತಿ ಒಳಗಿರಬೇಕು. ಬಾಲ ನ್ಯಾಯ ಮಂಡಳಿಯಲ್ಲಿ ಮಹಿಳಾ ಅಭ್ಯರ್ಥಿ ಸ್ಥಾನ ಮಾತ್ರ ಖಾಲಿ ಇರುತ್ತದೆ. ಬಾಲ ನ್ಯಾಯ ಮಂಡಳಿಯ ಸದಸ್ಯತ್ವ ಸ್ಥಾನ ಪಡೆಯಲು ಸಮಾಜ ಶಾಸ್ತ್ರ, ಸಮಾಜ ಕಾರ್ಯ, ಮಕ್ಕಳ ಮನಶಾಸ್ತ್ರ, ಕಾನೂನು, ಮಕ್ಕಳ ಅಭಿವೃದ್ದಿ, ಶಿಕ್ಷಣ, ಆರೋಗ್ಯ, ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ವಿದ್ಯಾರ್ಹತೆ ಮತ್ತು ಮೂರು ವರ್ಷಗಳ ಅನುಭವ ಹೊಂದಿರುವುದು ಅಗತ್ಯವಾಗಿದೆ. ಅನುಭವದ ಕುರಿತು ಸಂಕ್ಷಿಪ್ತ ವಿವರವನ್ನು ಒಂದು ಪುಟ ಮಿರದಂತೆ ಪ್ರತ್ಯೇಕವಾಗಿ ನೀಡಬೇಕು. ಅಪರಾಧಿ ಎಂಬ ದಾಖಲೆ ಇದ್ದಲ್ಲಿ, ಮಕ್ಕಳ ಮೇಲಿನ ದೌರ್ಜನ್ಯ, ಮಕ್ಕಳ ಮಾರಾಟ, ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಲ್ಲಿ, ಮಾನವ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದಲ್ಲಿ ಅಥವಾ ಅನೈತಿಕ ಕಾರ್ಯಗಳಲ್ಲಿ ತೊಡಗಿದಲ್ಲಿ ಸಮಿತಿ ಕಾರ್ಯಗಳಲ್ಲಿ ಗಮನ ನೀಡಲು ಅವಕಾಶ ನೀಡದಂತಹ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಯಾವುದೇ ಮಕ್ಕಳ ಪೋಷಣೆ ಸಂಸ್ಥೆಯ ಕಾರ್ಯಕಾರಿ ಅಥವಾ ವ್ಯವಸ್ಥಾಪಕ ಸಮಿತಿಯಲ್ಲಿ ಸದಸ್ಯರಾಗಿದ್ದಲ್ಲಿ, ಇಂತಹ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅನರ್ಹರು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ, ಕೊಪ್ಪಳ ದೂರವಾಣಿ ಸಂಖ್ಯೆ: 08539-225030 ಕ್ಕೆ ಅಥವಾ ಕೇಂದ್ರ ಕಛೇರಿಯ ವೆಬ್‍ಸೈಟ್ www.dwcd.kar.gov.in ನಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment