ಕೊಪ್ಪಳ-೦೫ ನಗರದ ೨೮, ೨೯, ೦೩, ೦೧, ೧೯, ೨೪,೦೮ ಹಾಗೂ ೦೭ ನೇ ವಾರ್ಡಗಳಲ್ಲಿ ನಗರ ಸಭೆ ವತಿಯಿಂದ ನಡೆಯುತ್ತಿರುವ ನಗರೊಥಾನ್ನ, ಎಸ್.ಏಫ್.ಸಿ. ಒಳಚರಂಡಿ ಕಾಮಗಾರಿ, ೨೪ ತಾಸು ಕುಡಿಯುವ ನೀರಿನ ಪೈಪಲೈನ್ ಕಾಮಗಾರಿಗಳನ್ನು ವೀಕ್ಷಿಸಿ ಸಂಬಂದಪಟ್ಟ ಅಧಿಕಾರಿಗಳಿಗೆ ಕಾಮಗಾರಿಗಳನ್ನು ನಿಗದಿತ ಅವದಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಇದೆ ವೇಳೆ ಅನೇಕ ವಾರ್ಡಗಳಲ್ಲಿ ಜನರ ದೈನಂದಿನ ಸಮಸ್ಯಗಳನ್ನು ಆಲಿಸಿ ಅವುಗಳನ್ನು ತ್ವರಿತಗತಿಯಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶೀಘ್ರವೇ ಜನಸಾಮಾನ್ಯರ ಸಮಸ್ಯಗಳಿಗೆ ಸ್ಪಂದಿಸುವ ವಿಶ್ವಾಸ ವ್ಯಕ್ತಪಡಿಸಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಎಂ ಸೈಯದ, ಲತಾ ವೀರಣ್ಣ ಸೊಂಡುರು, ಅಜ್ಮದ ಪಟೇಲ, ರಾಮಣ್ಣ ಹದ್ದಿನ, ಜಾಕೀರ ಹುಸೇನ ಕಿಲ್ಲೇದಾರ, ಮುತ್ತುರಾಜ ಕುಷ್ಟಗಿ, ಮಲ್ಲಪ್ಪ ಕವಲೂರು,ಶಿವಾನಂದ ಹೊದ್ಲೂರು, ಮೌಲಾಹುಸೇನ ಜಮಾದಾರ, ಮಹೇಶ ಭಜಂತ್ರಿ, ಬಾಳಪ್ಪ ಬಾರಕೇರ, ಮೀನಾಕ್ಷಮ್ಮ, ವಾಹಿದ ಸೋಂಪೂರು, ರಾಜು ನಾಲವಾಡ, ಮಾನ್ವಿಪಾಷಾ, ಅಜ್ಜಪ್ಪ ಸ್ವಾಮಿ, ಮಂಜುನಾಥ ಗಾಳಿ, ಮಹ್ಮದಸಾಬ ಮಂಡಲಗೇರಿ, ಹಾರುನಖಾನ, ರಾಮಣ್ಣ ಕಲ್ಲನ್ನವರ, ದೇವಪ್ಪ ಕಟ್ಟಿಮನಿ, ರಫಿ ಆರ್.ಎಂ. ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು, ಅಭಿಯಂತರರು, ಇನ್ನೂ ಅನೇಕರು ಉಪಸ್ಥಿತರಿದ್ದರು.
0 comments:
Post a Comment