PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ  ಇವರುಗಳ ಸಂಯುಕ್ತ ಆಶ್ರಯದಲ್ಲಿ ಜು. 31 ರಂದು ಬೆಳಿಗ್ಗೆ 10 ಗಂಟೆಗೆ ಭಾಗ್ಯನಗರದ ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ಮಧ್ಯಾಹ್ನ 2 ಗಂಟೆಗೆ ಹಿರೇಸಿಂದೋಗಿಯ ಸರ್ಕಾರಿ ಹಿ.ಪ್ರಾ.ಶಾಲೆ ಆವರಣದಲ್ಲಿ ಹಾಗು ಸಂಜೆ 7 ಗಂಟೆಗೆ ಬೆಟಗೇರಿಯ ಮೂಕಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.   
ಭಾಗ್ಯನಗರ : ಕಾನೂನು ಸಾಕ್ಷರತಾ ಅಂಗವಾಗಿ ಭಾಗ್ಯನಗರದಲ್ಲಿ ಜು. 31 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮಾ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ವಕೀಲರಾದ ಆರ್.ಬಿ.ಪಾನಗಂಟಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಲಾ ಅಕಾಡೆಮಿ ಅಧ್ಯಕ್ಷೆ ಸಂಧ್ಯಾ ಬಿ.ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಉದ್ಯಮಿ ಶ್ರೀನಿವಾಸ ಗುಪ್ತಾ, ಸಂಸ್ಥೆಯ ಪ್ರಾಂಶುಪಾಲ ವಾದಿರಾಜ ದೇಸಾಯಿ ಅವರು ಪಾಲ್ಗೊಳ್ಳುವರು.  ವಿಶೇಷ ಉಪನ್ಯಾಸಕರಾಗಿ ವಕೀಲ ವಿ.ಎಂ.ಭೂಸನೂರಮಠ ಅವರು ಮೋಟಾರು ವಾಹನ ಕಾಯ್ದೆ ಕುರಿತು,   ಎಂ.ಹನುಮಂತರಾವ್ ಅವರು ಲೈಂಗಿಕ ಹಲ್ಲೆಗಳಿಂದ ಚಿಕ್ಕ ಮಕ್ಕಳ ರಕ್ಷಣೆ ಕಾಯ್ದೆ ಕುರಿತು ಹಾಗೂ ವಕೀಲರಾದ ಎಸ್.ಬಿ.ಪಾಟೀಲ್ ಅವರಿಂದ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಉಪನ್ಯಾಸ ನೀಡುವರು. 
ಹಿರೇಸಿಂದೋಗಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಸಿಂದೋಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಜು.31 ರಂದು ಮಧ್ಯಾಹ್ನ 2.00 ಗಂಟೆಗೆ ಕಾನೂನು ಸಾಕ್ಷರತಾ ಅಂಗವಾಗಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಕೊಪ್ಪಳ ತಹಶೀಲ್ದಾರ್ ಪುಟ್ಟುರಾಮಯ್ಯ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಎಸ್.ಬಿ.ಕುರಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಶರಣಪ್ಪ ಜಿ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ವಕೀಲರಾದ ವಿ.ಎಂ.ಭೂಸನೂರಮಠ, ಬಿಆರ್‍ಸಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎಚ್.ಕುರಿ ಅವರು ಪಾಲ್ಗೊಳ್ಳುವರು.  ವಿಶೇಷ ಉಪನ್ಯಾಸಕರಾಗಿ ವಕೀಲರಾದ ಎಂ.ಹನುಮಂತರಾವ್ ಅವರು ಪ್ರತಿಕೂಲದಿಂದ ವಿದ್ಯಾರ್ಥಿಗಳಿಗೆ ಪೀಡಿಸುವ ಕುರಿತು, ವಕೀಲರಾದ ಎಸ್.ಬಿ.ಪಾಟೀಲ್ ಅವರು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಹಾಗೂ ವಕೀಲರಾದ ಶಶಿಕಾಂತ ಕಲಾಲ ಅವರು ಮಾಹಿತಿ ಹಕ್ಕು ಅಧಿನಿಯಮ ಕುರಿತು ಉಪನ್ಯಾಸ ನೀಡುವರು.
ಬೆಟಗೇರಿ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಧ್ಯಕ್ಷರು, ಸರ್ವ ಸದಸ್ಯರು ಗ್ರಾಮ ಪಂಚಾಯತಿ ಬೆಟಗೇರಿ, ಶ್ರೀ ಲಾಲಬಹದ್ದೂರ ಶಾಸ್ತ್ರೀ ಗ್ರಾಮೀಣ ಅಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ, ಸ್ತ್ರೀ ಶಕ್ತಿ ಸಂಘಗಳು ಹಾಗೂ ಮಹಿಳಾ ಒಕ್ಕೂಟಗಳು ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಮೂಕಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜು.31 ರಂದು ಸಂಜೆ 7.00 ಗಂಟೆಗೆ ಕಾನೂನು ಸಾಕ್ಷರತಾ ಅಂಗವಾಗಿ ವಿಶೇಷ ಕಾನೂನು ವಿದ್ಯಾ ಪ್ರಸಾರ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ.ಬಬಲಾದಿ ಅವರು ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಕಾಳಮ್ಮ ಕಲ್ಲಳ್ಳಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಬಿ.ದಶರಥ, ಲಾ ಅಕಾಡೆಮಿ ಅಧ್ಯಕ್ಷೆ ಸಂಧ್ಯಾ ಬಿ.ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ, ತಾ.ಪಂ.ಸದಸ್ಯ ವಿರೇಶ ಸಜ್ಜನ್, ಅಳವಂಡಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಪ್ರಕಾಶ ಮಾಳಿ, ಜಿ.ಪಂ.ಸದಸ್ಯ ನಾಗನಗೌಡ ಮಾಲಿ ಪಾಟೀಲ್, ಗ್ರಾ.ಪಂ.ಸದಸ್ಯರಾದ ಶರಣಪ್ಪ ಮತ್ತೂರು, ಭೀಮಣ್ಣ ಕವಲೂರು, ಸಿದ್ದಣ್ಣ ಬಿ.ಸಜ್ಜನ್, ಲಲಿತಮ್ಮ ಹೂಗಾರ, ಕಲ್ಲವ್ವ ಕಮಲಾಪುರ, ರೇಣುಕಾ ಹಂಚ್ಯಾಳಪ್ಪ ಭಜಂತ್ರಿ, ಶಿವಲಿಂಗಮ್ಮ ಬೆಲ್ಲಡಗಿ, ಮುದಿಯಪ್ಪ ಗುಡಿಹಿಂದಿನ, ಗವಿಸಿದ್ದಪ್ಪ ಮಾಳೆಕೊಪ್ಪ, ರಾಮಣ್ಣ ಕಲಿಕೇರಿ, ಪಾರ್ವತಿ ಕುಮಾರಸ್ವಾಮಿ ಪಾತ್ರದ ಅವರು ಪಾಲ್ಗೊಳ್ಳುವರು.  

Advertisement

0 comments:

Post a Comment

 
Top