ನಗರದ ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಚೈತ್ರಾ ಎ.ಜಿ., ಐಶ್ವರ್ಯ ಜಿ.ಎಂ., ರಾಜೇಶ್ವರಿ, ಮಂಜುನಾಥ ಬಿ.ಎನ್., ನಾಗರಾಜ ಪಾಟೀಲ, ಗೋಪಿಕೃಷ್ಣ, ಬಿ. ಕಿರಣ ಮತ್ತು ಮತ್ತು ಪ್ರಶಾಂತ ಇವರು ಈ ಸಾಲಿನ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಪುರಸ್ಕಾರವನ್ನು ಪಡೆದಿದ್ದಾರೆ.
ದಿ. ೧೧-೦೬-೨೦೧೪ ರಂದು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜರು ಇವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ಕೊಪ್ಪಳ ಜಿಲ್ಲೆಯ ಪರವಾಗಿ ರಾಜ್ಯಪಾಲರಿಂದ ಪ್ರಶಸ್ತಿ ಪಡೆಯಲು ನಮ್ಮ ಶಾಲೆಯ ಚೈತ್ರಾ ಎ.ಜಿ. ಮತ್ತು ಬಿ. ಕಿರಣ ಇವರು ಆಯ್ಕೆಯಾಗಿದ್ದರು. ಎಲ್ಲ ಈ ೮ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಶಾಲಾ ಪ್ರಾಚಾರ್ಯ ಎ. ಧನಂಜಯನ್, ಶಾಲಾ ಸ್ಕೌಟ್ಸ್ ಶಿಕ್ಷಕ ಬಿ. ಪ್ರಹ್ಲಾದ್, ಗೈಡ್ಸ್ ಶಿಕ್ಷಕಿ ಶಿವಲೀಲಾ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment