ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಪಡಿತರ ಚೀಟಿಗೆ ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆಗೊಳಿಸುವ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
ಎಲ್ಲ ಪಡಿತರ ಚೀಟಿದಾರರು ಈ ವಿಧಾನ ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ಇದು ಬಹಳ ಸುಲಭ ಹಾಗೂ ಸರಳ ವಿಧಾನವಾಗಿದೆ. ಇದರಿಂದಾಗಿ ಪಡಿತರ ಚೀಟಿದಾರರ ಮೊಬೈಲ್‌ಗೆ ಕಾಲಕಾಲಕ್ಕೆ ಆಹಾರಧಾನ್ಯ ಹಂಚಿಕೆ, ಎತ್ತುವಳಿ ಇತ್ಯಾದಿ ಮಾಹಿತಿಯನ್ನು ಶೀಘ್ರ ತಲುಪಿಸಲು ಸಹಾಯಕಾರಿ ಆಗಲಿದೆ.
ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ, ಆಧಾರ ಸಂಖ್ಯೆಗಳ ಮಾಹಿತಿಯನ್ನು ತಮ್ಮ ಮೊಬೈಲ್ ಮೂಲಕ ಎಸ್.ಎಮ್.ಎಸ್. ಕಳುಹಿಸಬೇಕು. ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ ನಂತರ ಅದೇ ಮೊಬೈಲ್‌ನಿಂದ ಕುಟುಂಬದ ಮುಖ್ಯಸ್ಥರ ಹಾಗೂ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಮತದಾರರ ಗುರುತಿನ ಚೀಟಿ ಮತ್ತು ಆಧಾರ ಸಂಖ್ಯೆಗಳನ್ನು ನೀಡಬೇಕು. ಎಲ್ಲಾ ಸದಸ್ಯರ ಮತದಾರರ ಗುರುತಿನ ಚೀಟಿ ಮತ್ತು ಆಧಾರ ಸಂಖ್ಯೆ ಇರದಿದ್ದಲ್ಲಿ ಲಭ್ಯವಿರುವ ಸದಸ್ಯರ ಮಾಹಿತಿಯನ್ನು ನೀಡಬೇಕು. ಪಡಿತರ ಚೀಟಿದಾರರ ಬಳಿ ಮೊಬೈಲ್ ಇರದಿದ್ದಲ್ಲಿ ತಮ್ಮ ಪರಿಚಯದವರ ದೂರವಾಣಿ ಸಂಖ್ಯೆಯನ್ನು ನೀಡಬಹುದು ಆದರೆ ಒಂದು ಮೊಬೈಲ್ ಸಂಖ್ಯೆಯನ್ನು ೩ ಕ್ಕಿಂತ ಹೆಚ್ಚುಬಾರಿ ನೀಡುವಂತಿಲ್ಲ. ಮೊಬೈಲ್ ಫೋನ್ ಹೊಂದದೇ ಇರುವವರು ಹತ್ತಿರದ ಗ್ರಾಮ ಪಂಚಾಯತಿಗಳಲ್ಲಿ, ತಾಲ್ಲೂಕು ಕಛೇರಿಗಳಲ್ಲಿ, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಮತದಾರರ ಗುರುತಿನ ಚೀಟಿ ಮತ್ತು ಆಧಾರ ಸಂಖ್ಯೆಗಳನ್ನು ನೀಡಬಹುದಾಗಿದೆ.
ಪಡಿತರ ಚೀಟಿದಾರರು ತಮ್ಮ ಮೊಬೈಲ್ ಮೂಲಕ ಮತದಾರರ ಗುರುತಿನ ಚೀಟಿ ಹಾಗೂ ಆಧಾರ ಸಂಖ್ಯೆಗಳ ಮಾಹಿತಿಯನ್ನು ಎಸ್.ಎಂ.ಎಸ್. ಕಳುಹಿಸಲು ಈ ಕೆಳಕಂಡ ವಿಧಾನವನ್ನು ಅನುಸರಿಸಬೇಕು.
೧) ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರು ಮೊದಲು ತಮ್ಮ ಸರಿಯಾದ ಮೊಬೈಲ್ ಸಂಖ್ಯೆಯಿಂದ ಖಅಒಔಃ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ತಮ್ಮ ಸರಿಯಾದ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ೯೨೧೨೩೫೭೧೨೩ ಎಂಬ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. (ಉದಾ ಖಅಒಔಃ ಏPಐI೦೦೧೩೩೪೧೧) ಇದರಿಂದ ತಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗುತ್ತದೆ. ೨) ಮೊಬೈಲ್ ಸಂಖ್ಯೆಯನ್ನು ನೀಡಿದ ನಂತರ ಅದೇ ಮೊಬೈಲ್‌ನಿಂದ ಖಅಇPIಅ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ತಮ್ಮ ಸರಿಯಾದ ಇPIಅ ಸಂಖ್ಯೆಯನ್ನು (ಮತದಾರರ ಗುರುತಿನ ಚೀಟಿ ಕಾರ್ಡ್ ಸಂಖ್ಯೆ) ನಮೂದಿಸಿ ೯೨೧೨೩೫೭೧೨೩ ಎಂಬ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. ೩) ನಂತರ ಕುಟುಂಬದ ಎಲ್ಲಾ ಸದಸ್ಯರ ಇPIಅ ಸಂಖ್ಯೆಯನ್ನು ಒಂದೊಂದಾಗಿ ಇದೇ ವಿಧಾನದಲ್ಲಿ ಕಳುಹಿಸಬೇಕು. ಉದಾ: ಖಅಇPIಅ WZU೦೪೦೦೦೬೪೮ (ಕುಟುಂಬದ ಮುಖ್ಯಸ್ಥರು), ಖಅಇPIಅ ಖಆUI೧೬೪೫೯೪೪ (ಕುಟುಂಬದ ಸದಸ್ಯರು), ಹೀಗೆ ಒಂದಾದ ನಂತರ ಮತ್ತೊಂದು ಸದಸ್ಯರ ಇPIಅ ಮತದಾರರ ಗುರುತಿನ ಸಂಖ್ಯೆಯನ್ನು ಕಳುಹಿಸಬೇಕು. ಈ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಯನ್ನು ಪುನಃ ನೋಂದಣಿ ಮಾಡುವ ಅಗತ್ಯವಿಲ್ಲ. ಆದರೆ ಮೊದಲು ನೋಂದಾಯಿಸಿದ ಮೊಬೈಲ್ ಸಂಖ್ಯೆಯಿಂದಲೇ ಕುಟುಂಬದ ಎಲ್ಲಾ ಸದಸ್ಯರ ಇPIಅ ಸಂಖ್ಯೆಯನ್ನು ಕಳುಹಿಸಬೇಕು. ೪) ನಂತರ UIಆ ಸಂಖ್ಯೆಯನ್ನೂ ಸಹ (ಆಧಾರ್ ಕಾರ್ಡ್ ಸಂಖ್ಯೆ) ಮೇಲ್ಕಂಡಂತೆ ಅದೇ ಮೊಬೈಲ್‌ನಿಂದ ಖಅUIಆ ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ತಮ್ಮ ಸರಿಯಾದ UIಆ ಆಧಾರ ಸಂಖ್ಯೆಯನ್ನು ಒಂದೊಂದಾಗಿ (ಕುಟುಂಬದ ಎಲ್ಲ ಸದಸ್ಯರ) ಮತದಾರರ ಗುರುತಿನ ಸಂಖ್ಯೆಯನ್ನು ಕಳುಹಿಸಿದ ವಿಧಾನದಲ್ಲಿಯೇ ಕಳುಹಿಸಬೇಕು. (ಉದಾ: RCUID ೪೫೦೧೧೨೧೭೨೧೨೭)
( 1) ZÁ°ÛAiÀÄ°ègÀĪÀ ¥ÀrvÀgÀ
aÃnzÁgÀgÀÄ ªÉÆzÀ®Ä vÀªÀÄä ¸ÀjAiÀiÁzÀ ªÉƨÉÊ¯ï ¸ÀASÉå¬ÄAzÀ RCMOB JAzÀÄ mÉÊ¥ï ªÀiÁr MAzÀÄ ¸ÉàÃ¸ï ©lÄÖ vÀªÀÄä ¸ÀjAiÀiÁzÀ gÉõÀ£ï
PÁqïð ¸ÀASÉåAiÀÄ£ÀÄß £ÀªÀÄÆ¢¹ 9212357123 JA§ ¸ÀASÉåUÉ J¸ïJAJ¸ï PÀ¼ÀÄ»¸À¨ÉÃPÀÄ.
(GzÁ RCMOB KPLI00133411) EzÀjAzÀ vÀªÀÄä ªÉƨÉÊ¯ï ¸ÀASÉå
£ÉÆÃAzÀt DUÀÄvÀÛzÉ. 2) ªÉƨÉÊ¯ï ¸ÀASÉåAiÀÄ£ÀÄß ¤ÃrzÀ £ÀAvÀgÀ CzÉÃ
ªÉƨÉʯï¤AzÀ RCEPIC JAzÀÄ
mÉÊ¥ï ªÀiÁr MAzÀÄ ¸ÉàÃ¸ï ©lÄÖ vÀªÀÄä ¸ÀjAiÀiÁzÀ EPIC ¸ÀASÉåAiÀÄ£ÀÄß
(ªÀÄvÀzÁgÀgÀ UÀÄgÀÄw£À aÃn PÁqïð ¸ÀASÉå) £ÀªÀÄÆ¢¹ 9212357123 JA§ ¸ÀASÉåUÉ J¸ïJAJ¸ï PÀ¼ÀÄ»¸À¨ÉÃPÀÄ. 3) £ÀAvÀgÀ
PÀÄlÄA§zÀ J¯Áè ¸ÀzÀ¸ÀågÀ EPIC ¸ÀASÉåAiÀÄ£ÀÄß MAzÉÆAzÁV EzÉà «zsÁ£ÀzÀ°è PÀ¼ÀÄ»¸À¨ÉÃPÀÄ. GzÁ: RCEPIC WZU04000648 (PÀÄlÄA§zÀ ªÀÄÄRå¸ÀÜgÀÄ), RCEPIC RDUI1645944 (PÀÄlÄA§zÀ ¸ÀzÀ¸ÀågÀÄ), »ÃUÉ MAzÁzÀ £ÀAvÀgÀ ªÀÄvÉÆÛAzÀÄ ¸ÀzÀ¸ÀågÀ EPIC ªÀÄvÀzÁgÀgÀ
UÀÄgÀÄw£À ¸ÀASÉåAiÀÄ£ÀÄß PÀ¼ÀÄ»¸À¨ÉÃPÀÄ. F ¸ÀAzÀ¨sÀðzÀ°è ªÉƨÉʯï
¸ÀASÉåAiÀÄ£ÀÄß ¥ÀÄ£ÀB £ÉÆÃAzÀt ªÀiÁqÀĪÀ CUÀvÀå«®è. DzÀgÉ ªÉÆzÀ®Ä £ÉÆÃAzÁ¬Ä¹zÀ
ªÉƨÉÊ¯ï ¸ÀASÉå¬ÄAzÀ¯Éà PÀÄlÄA§zÀ J¯Áè ¸ÀzÀ¸ÀågÀ EPIC
¸ÀASÉåAiÀÄ£ÀÄß PÀ¼ÀÄ»¸À¨ÉÃPÀÄ. 4) £ÀAvÀgÀ UID ¸ÀASÉåAiÀÄ£ÀÆß
¸ÀºÀ (DzsÁgï PÁqïð ¸ÀASÉå) ªÉÄîÌAqÀAvÉ CzÉà ªÉƨÉʯï¤AzÀ RCUID
JAzÀÄ mÉÊ¥ï ªÀiÁr MAzÀÄ ¸ÉàÃ¸ï ©lÄÖ vÀªÀÄä ¸ÀjAiÀiÁzÀ UID DzsÁgÀ
¸ÀASÉåAiÀÄ£ÀÄß MAzÉÆAzÁV (PÀÄlÄA§zÀ J®è ¸ÀzÀ¸ÀågÀ) ªÀÄvÀzÁgÀgÀ
UÀÄgÀÄw£À ¸ÀASÉåAiÀÄ£ÀÄß PÀ¼ÀÄ»¹zÀ «zsÁ£ÀzÀ°èAiÉÄà PÀ¼ÀÄ»¸À¨ÉÃPÀÄ. (GzÁ: RCUID
450112172127) )
ಈ ರೀತಿ ಕಳುಹಿಸಲಾದ ಮಾಹಿತಿಗಳು ಸಂಬಂಧಪಟ್ಟ ರೇಷನ್ ಕಾರ್ಡಿನೊಂದಿಗೆ ಹೊಂದಾಣಿಕೆಯಾಗುತ್ತವೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪಡಿತರ ಚೀಟಿಯ ನೈಜತೆಯನ್ನು ದೃಢೀಕರಿಸಲಾಗುವುದು. ಮಾಹಿತಿ ಸಲ್ಲಿಸದ ಪಡಿತರ ಚೀಟಿಗಳನ್ನು ಹೆಚ್ಚಿನ ತನಿಖೆಗೆ ಕಾಯ್ದಿರಿಸಲಾಗುವುದು. ಅವಶ್ಯಕ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಅಳವಡಿಸಲು ಸೂಚನೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಹಾರ ನಿರೀಕ್ಷಕರು ಅಥವಾ ಉಪನಿರ್ದೇಶಕರನ್ನು ಸಂಪರ್ಕಿಸಬಹುದಾಗಿದ್ದು, ದೂರುಗಳಿದ್ದಲ್ಲಿ ಆಯುಕ್ತರ ಕಛೇರಿಯ ಉಚಿತ ದೂರವಾಣಿ ಸಂಖ್ಯೆ: ೧೯೬೭ ಕ್ಕೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment