PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಕ್ಷೇತ್ರದ ಅಳವಂಡಿ, ಹಲವಾಗಲಿ, ಬೊಚನಹಳ್ಳಿ, ತಿಗರಿ, ಬೇಟಗೇರಿ ಗ್ರಾಮಗಳಲ್ಲಿ ಎಸ್.ಸಿ.ಪಿ ಹಾಗೂ ಎಸ್.ಟಿ.ಪಿ. ಯೋಜನೆಯ ಅನುದಾನದ ಅಡಿಯಲ್ಲಿ ಅಂದಾಜು ವೆಚ್ಚ ರೂ. ೩.೦೦ ಕೋಟಿಗಳ ಸಿಸಿ ರಸ್ತೆ ಹಾಗೂ ಸಮುದಾಯ ಭವನಗಳ ಕಾಮಗಾರಿಗಳಳ ಪೂಜೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದ ಜನಪ್ರೀಯ ಕಾಂಗ್ರೇಸ ಸರಕಾರದ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದು ಪ್ರತಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕಗಳ ಯೋಜನೆ ರಸ್ತೆ, ಚರಂಡಿ  ಹಾಗೂ ಈ ಭಾಗದ ಬಹುದಿನಗಳ ಕನಸಾದ ಹುಲಿಗುಡ್ಡ ಏತ ನೀರಾವರಿ ಯೋಜನೆ (ಸಿಂಗಟಾಲೂರು ಏತ ನೀರಾವರಿ) ಹಾಗೂ ಬೇಟಗೇರಿ, ಅಳವಂಡಿ ಗ್ರಾಮಗಳ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು  ತ್ವರಿತಗತಿಯಲ್ಲಿ ಪ್ರಾರಂಭಿಸಿ ಈ ಭಾಗದ ರೈತರಿಗೆ ನೀರಾವರಿ ಯೋಜನೆಯ ಸೌಭಾಗ್ಯ ಒದಗಿಸಿಕೊಡುವುದೇ ನನ್ನ ರಾಜಕೀಯ ಜೀವನದ ಅದಮ್ಯ ಕರ್ತವ್ಯವಾಗಿದೆ.  ಇದಕ್ಕಾಗಿ ನಾನು ಹಾಗೂ ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ಈ ಯೋಜನೆಗಳು ಶೀಘ್ರವೇ ಅನುಷ್ಟಾನಗೊಂಡು ಈ ನೀರಾವರಿ ಯೋಜನೆಗಳು ಈ ಭಾಗದ ರೈತರ ಜೀವನದ ಆರ್ಥಿಕ ಮಟ್ಟವನ್ನು ಹೆಚ್ಚಿಸಲಿದೇ, ನಮ್ಮ ಕ್ಷೇತ್ರದ ಬಹುದಿನಗಳ ಕನಸಾದ ಮೇಡಿಕಲ್ ಕಾಲೇಜಿನ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದ್ದು ಬರುವ ದಿನಗಳಲ್ಲಿ ಕ್ಷೇತ್ರದ ಶೇ ೮೦% ಬಡ ವಿಧ್ಯಾರ್ಥಿಗಳಿಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಸಿಂಗಟಾಲೂರು ಏತ ನೀರಾವರಿಯ ಕಾಲುವೆಯನ್ನು ೭೦ ಕಿ.ಮೀ ವಿಸ್ತರಿಸಲಾಗುವುದೆಂದು ಹೇಳಿದರು. 
ಈ ಸಂದರ್ಭದಲ್ಲಿ ಸುರೇಶ ಬೂಮರಡ್ಡಿ, ಗುರುಮೂರ್ತಿಸ್ವಾಮಿ ಅಳವಂಡಿ, ಬಸವರಡ್ಡಿ ಹಳ್ಳಿಕೇರಿ, ಸಿದ್ದಲಿಂಗಸ್ವಾಮಿ ಇನಾಂದಾರ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ಹನಮಂತಗೌಡ ಗಾಳಿ ಶಿವನಗೌಡ ಹಲವಾಗಲಿ, ದೇವಪ್ಪ ಹಳ್ಳಿ, ಚೌಡಪ್ಪ ಜಂತ್ಲಿ, ಗೋನೇಶ ಉಪ್ಪಾರ, ಗುರುಬಸವರಾಜು, ಸುರೇಶ ದಾಸರಡ್ಡಿ, ಯಲಪ್ಪ ಜೀರ, ನಜಿರ್‌ಸಾಬ, ಇಸ್ಮಾಯಿಲ್‌ಸಾಬ, ಭೀಮಶೇಪ್ಪ ಬೊಚನಹಳ್ಳಿ, ಅಡಿವೇಪ್ಪ ರಾಟಿ, ತೋಟಪ್ಪ ಸಿಂಟರ್, ನಾರಾಯಣಪ್ಪ ಬೇಟಗೇರಿ, ಅಂದಾನಯ್ಯ ಸ್ವಾಮಿ, ಹನಂತಪ್ಪ ಕರಡಿ ವೀರುಪಾಕ್ಷಪ್ಪ ಜೋಳದ, ಪ್ರಾಣೇಶ, ಪರಶುರಾಮ ಬೈರಾಪೂರು ಇನ್ನೂ ಅನೇಕರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top