PLEASE LOGIN TO KANNADANET.COM FOR REGULAR NEWS-UPDATES

  ರಾಜಕೀಯ ಕ್ಷುಲ್ಲಕ ಕಾರಣಗಳಿಂದಾಗಿ ಕೂಕನಪಳ್ಳಿ ಕುರಿ ಸಂತೆ ನಾಲ್ಕು ವಾರಗಳ ಕಾಲ ಸ್ತಗಿತ ಗೊಂಡಿದ್ದರ ಕುರಿತು ಜನಪ್ರತಿನಿಧಿ, ಅಧಿಕಾರಿಗಳ ಹಾಗೂ ಸಂಘಟನೆಗಳನ್ನು, ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿಯವರು ಜೂನ್, ೧೪ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ಕರೆದು ಸಂತೆ ನಡೆಸಲು ಒಮ್ಮತ ಮೂಡಿಸುವಲ್ಲಿ ವಿಫಲವಾದರು. ಕುರಿಗಾರರು ಖರೀದಿದಾರರು ಕೂಕನಪಳ್ಳಿ ಇಕ್ಕಟ್ಟಾದ ಜಾಗದಲ್ಲಿ ಸಂತೆ ನಡೆಸಬಾರದು ಮತ್ತು ಪರ್ಯಾಯವಾಗಿ ಬೂದಗುಂಪದಲ್ಲಿ ಸಂತೆ ನಡೆಸಲು ತೀರ್ಮಾನಿಸಬೇಕೆಂದು, ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸರ್ಕಾರಿ ಸ. ನಂ. ೧೦೯ ರಲ್ಲಿ ೩೮ ಎಕರೆ ಜಮೀನು ಬಳಸಿಕೊಂಡು ಶಾಸ್ವತ ವ್ಯವಸ್ತೆ ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸಿ.ಪಿ.ಐ(ಎಂ.ಎಲ್) ಸಂಘಟನೆಗಳು ಜಂಟಿಯಾಗಿ ಕುರಿಗಾರರ ಮತ್ತು ಖರಿದಿದಾರರ ಬಹುಸಂಖ್ಯಾತರ ಅಭಿಪ್ರಾಯದಂತೆ ಬೂದಗುಂಪದಲ್ಲಿ ಸಂತೆ ನಡೆಸಲು ಒತ್ತಾಯಿಸಿದ್ದರೂ ಕೂಕನಪಳ್ಳಿ ಮತ್ತು ಬೂದಗುಂಪದಲ್ಲಿ ಎರಡೂ ಕಡೆ ಸಂತೆ ನಡೆಸಬಹುದೆನ್ನುವ ತೀರ್ಮಾನಕ್ಕೆ ಸಚಿವರ ನೇತೃತ್ವದ ಸಭೆ ನಿರ್ಣಯ ಮಾಡಿತ್ತು. 
       ಇಂದು ಇದನ್ನು ಧಿಕ್ಕರಸಿ ನಮ್ಮ ಜಂಟಿ ಸಂಘಟನೆಗಳು, ಕುರಿಗಾರರು, ಕುರಿ ಖರೀದಿದಾರರು ಮತ್ತು ಬೂದಗುಂಪ ಹಾಗೂ ಸುತ್ತಲಿನ ಗ್ರಾಮಗಳ ಸಹಕಾರದ ಒಮ್ಮತಾಭಿಪ್ರಾಯದೊಂದಿಗೆ ಕೆಲವರ ಬೆದರಿಕೆ ಮತ್ತು ಒತ್ತಡಗಳು ಇದ್ದಾಗಲೂ ಶುಕ್ರವಾರದ ಕುರಿಸಂತೆ ಮತ್ತು ವಾರದ ತರಕಾರಿ ಸಂತೆ ಹರಾಜ ಪ್ರಕ್ರಿಯೆ ಮೂಲಕ ಇಂದು ಬೂದಗುಂಪದಲ್ಲಿ ಸಂತೆ ಸಂಪೂರ್ಣವಾಗಿ ಯಶಸ್ವಿಯಾಯಿತು. 
    ಕಳೆದ ೧೫ ದಿನಗಳಿಂದ ನಮ್ಮ ಜಂಟಿ ಸಂಘಟನೆಗಳ ಕಾರ್ಯಕರ್ತರು ಹಾಗೂ ಕುರಿಗಾರರು ಹಗಲಿರುಳು ಶ್ರಮಿಸಿ ಪರಸ್ತಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಸಂತೆ ಯಶಸ್ವಿಯಾಗಿ ನಢೆಯಿತು. ಇದೇ ಸಂದರ್ಭದಲ್ಲಿ ಕೂಕನಪಳ್ಳಿಯಲ್ಲಿ ಸಂತೆ ಸಂಪೂರ್ಣವಾಗಿ ತಿರಸ್ಕೃತವಾಗಿರುತ್ತದೆ. ಈ ವಿಷಯವಾಗಿ ಪುನಃ ರಾಜಕೀಯ ಅಸ್ತಿತ್ವ ಅಥವಾ ಪ್ರತಿಕಾರಕ್ಕಾಗಿ ಜನ ಪ್ರತಿನಿಧಿಗಳಿಂದ ತಪ್ಪು ನಡೆಯಾಗಬಾರದೆಂದು, ಈಗಿರುವ ಬೂದಗುಂಪ ಸಂತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೆಕೆಂದು ಒತ್ತಾಯಪಡಿಸುತ್ತೇವೆ. ವಿಳಂಭವಾದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು  ದನ ಮತ್ತು ಕುರಿ ಸಾಕಾಣಿಕೆದಾರರ ಸಂಘಟನೆ (ಡಿ.ಕೆ.ಎಸ್.ಎಸ್) ಜಿಲ್ಲಾ ಸಮಿತಿ ಕೊಪ್ಪಳ. ಹೇಳಿದೆ.



Advertisement

0 comments:

Post a Comment

 
Top