PLEASE LOGIN TO KANNADANET.COM FOR REGULAR NEWS-UPDATES

ನಗರದ ಸಾಹಿತ್ಯ ಭವನದ ನೆಲಮಾಳಿಗೆಯ ಜಾಗೆಯಲ್ಲಿ ಪುಸ್ತಕಪ್ರಾದಿಕಾರದ ಮಳಿಗೆಯನ್ನು ಇಂದು ಉದ್ಘಾಟಿಸಲಾಯಿತು.
 ಕೆಲವು ಚಿತ್ರಗಳು









ಕೊಪ್ಪಳ, ಜೂ. ೧೦ : ಇದು ಪ್ರಚಾರ ಯುಗ, ಪ್ರದರ್ಶನ ಮಾಡದಿದ್ದರೆ ಇಲ್ಲಿ ಯಾವೊಂದು ವಸ್ತುಗಳೂಮಾರಾಟವಾಗುವುದಿಲ್ಲ. ಅಧುನಿಕ ಜಗತ್ತು ಈಗ ನೋಡುವ ವಿಧಾನವನ್ನು ಅನುಸರಿಸುತ್ತಿದೆ. ಇತ್ತಿಚಿನಪೀಳಿಗೆಯಲ್ಲಿ ಓದು ಕಡಿಮೆಯಾಘಿದೆ. ಪುಸ್ತಕಗಳಲ್ಲಿ ಒಳ್ಳೆಯ ತುಡಿತ, ಮಿಡಿತಗಳು ಇದ್ದೇಯಿರುತ್ತವೆ. ಯುವ ಪೀಳಿಗೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕಾಗಿದೆ. ಪ್ರಪಂಚದ ಚಲನಶೀಲ ಸಾಹಿತ್ಯದಲ್ಲಿ ಕನ್ನಡವೂ ಒಂದು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಅವರು ಜೂ. ೧೦ ರಂದು ನಗರದ ಸಾಹಿತ್ಯ ಭವನದ ಆವರಣದಲ್ಲಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಆಶಯನುಡಿಗಳನ್ನಾಡಿದರು.ಹೇಳಲು ಹೇಸಿಗೆ ಎನಿಸುವಂತಾಗಿದ್ದ ಈ ಸ್ಥಳವನ್ನು ಪುಸ್ತಕ ದೇವಾಲಯವನ್ನಾಗಿ ಮಾಡುವಲ್ಲಿ ಜೂಡಿಅವರ ಶ್ರಮವಿದೆ. ಅವರಿಗೆ ಎಲ್ಲರೂ ಸಾಥ್ ನೀಡಬೇಕು ಎಂದು ಅವರು ಹೇಳಿದರು. ನೂತನ ಮಳಿಗೆಯನ್ನು ಮುಖ್ಯ ಗ್ರಂಥಾಲಯ ಅಧಿಕಾರಿ ಶಂಕರಗೌಡ ಹಳ್ಯಾಳ ಉದ್ಘಾಟಿಸಿದರು.ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು. ಪತ್ರಕರ್ತ ಬದರಿ ಪುರೋಹಿತ ಅವರ ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಕಜಾಪ ಜಿಲ್ಲಾಧ್ಯಕ್ಷರಾ ಬಸವರಾಜ ಆಕಳವಾಡಿ ಅವರು ಉದ್ಗಾಟಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪುಟ್ಟರಾಮಯ್ಯ ತಹಶಿಲ್ದಾರರು ಕೊಪ್ಪಳಿವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ಅವರು ವಹಿಸಿದ್ದರು. ಮು. ಅಥಿತಿಗಳಾಗಿ ಸಾಹಿತಿಗಳಾದ ಮುನಿಯಪ್ಪ ಹುಬ್ಬಳ್ಳಿ, ಶಾಂತಾದೇವಿ ಹಿರೇಮಠ, ಡಾ. ಮಹಾಂತೇಶ ಮಲ್ಲನಗೌಡ್ರ, ಪತ್ರಕರ್ತ ಸಾಧಿಕ ಅಲಿ ವೇದಿಕೆಯಲ್ಲಿದ್ದರು.     ಹಿಟ್ನಾಳ ಸ.ಪ್ರ.ದ. ಕಾಲೇಜು ಉಪನ್ಯಾಸಕಿ ಕು. ಕನಕಮ್ಮ ಪ್ರಾರ್ಥಿಸಿದರು. ಪುಸ್ತಕ ಮಳಿಗೆ ಜಿಲ್ಲಾ ಪ್ರತಿನಿಧಿ, ಪತ್ರಕರ್ತ ವೈ. ಬಿ. ಜೂಡಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಎನ್. ಎಂ. ದೊಡ್ಡಮನಿ ನಿರೂಪಿಸಿದರು. ಶರಣಪ್ಪ ದಾನಕೈ ವಂದಿಸಿದರು.

Advertisement

0 comments:

Post a Comment

 
Top