ವಿಸ್ತಾರ್ ಥಿಯೇಟರ್ ಕೊಪ್ಪಳ
ನಾಟಕ ಪ್ರಯೋಗ :- ಕೋರೆಗಾಂವ್
ಅಭಿನಯ :- ವಿಸ್ತಾರ್ ಬಾಂಧವಿ ಸಿಬ್ಬಂಧಿವರ್ಗ
ರಚನೆ, ಸಂಗೀತ, ವಿನ್ಯಾಸ ಹಾಗೂ ನಿರ್ದೇಶನ :- ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ದಿನಾಂಕ :- ೦೮/೦೬/೨೦೧೪
ಸ್ಥಳ :- ಸಾಹಿತ್ಯ ಭವನ ಕೊಪ್ಪಳ (ಅಶೋಕ ಸರ್ಕಲ್)
ಸಮಯ :- ಸಂಜೆ:೦೬:೦೦ ಗಂಟೆಗೆ.
ಕಾರ್ಯಕ್ರಮದ ಅಧ್ಯಕ್ಷತೆ :- ವಿಠ್ಠಪ್ಪ ಗೋರಂಟ್ಲಿ
ಉದ್ಘಾಟನೆ :- ಬಾಂಧವಿ ಮಕ್ಕಳಿಂದ.
ಆಶಯ ನುಡಿ :- ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ಮುಖ್ಯ ಅಥಿತಿಗಳು :- ಡೇವಿಡ್ ಸೆಲ್ವರಾಜ್ ನಿರ್ದೇಶಕರು ವಿಸ್ತಾರ್ ಸಂಸ್ಥೆ,
ಮರ್ಸಿ ಕಾಪೆನ್ ನಿರ್ದೇಶಕರು ವಿಸ್ತಾರ್ ಸಂಸ್ಥೆ
ಫ್ರಾನ್ಸಿಸ್ ನಿರ್ದೇಶಕರು ವಿಸ್ತಾರ್ ಸಂಸ್ಥೆ
ವಿಸ್ತಾರ್:-
ವಿಸ್ತಾರ್ ಇದೊಂದು ನ್ಯಾಯ ಮತ್ತು ಶಾಂತಿಗೆ ಸಂಬಂಧಪಟ್ಟ ವಿಷಯಗಳನ್ನು ಅಧ್ಯಯನ ಮಾಡುವ ಶೈಕ್ಷಣಿಕ ಸಂಸ್ಥೆ. ೧೯೮೯ರಲ್ಲಿ ’ಟ್ರಸ್ಟ್’ ಆಗಿ ನೋಂದಣಿಯಾಗಿದ್ದು, ಜಾತ್ಯಾತೀತ ಮನೋಭಾವವನ್ನು ಅಳವಡಿಸಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ, ಸ್ವಾಯತ್ತತೆಯುಳ್ಳ ಸಂಸ್ಥೆಯಾಗಿದೆ. ಬಡತನ, ಸ್ಥಳಾಂತರ, ಅಸಮಾನತೆ, ಸಮಾಜದಿಂದ ಹೊರದೂಡಲ್ಪಟ್ಟ ಶೋಷಿತ ಸಮುದಾಯಗಳಿಗೆ; ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪರ್ಯಾಯ ಅಭಿವೃಧ್ಧಿ ಮತ್ತು ಶಿಕ್ಷಣಕ್ಕಾಗಿ ಸಾಮಾಜಿಕ ಕಾರ್ಯದಲ್ಲಿ ನಿರತರಾದ ಸಂಘ ಸಂಸ್ಥೆಗಳೊಂದಿಗೆ ಚಳುವಳಿ ಮತ್ತು ವಕಾಲತ್ತುಗಳ ಮೂಲಕ ಸಾಮಾಜಿಕ ಪ್ರಜ್ನೆ ಮೂಡಿಸುವುದರಲ್ಲಿಇದು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ.
ಪರಿವರ್ತನಾತ್ಮಕ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿಯ ಆಚರಣೆ ಎಂಬ ಎರಡು ಕಾರ್ಯಕ್ರಮದಡಿ, ೧೯೮೯ರಿಂದ ಬೆಂಗಳೂರಿನಲ್ಲಿ ಮತ್ತು ೨೦೦೭ರಿಂದ ಕೊಪ್ಪಳದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ವಿನಾಶಕಾರಿ ಅಭಿವೃದ್ಧಿ, ಪುರುಷ ಪ್ರಧಾನ ವ್ಯವಸ್ಥೆ, ಕೋಮುವಾದ ಮುಂತಾದ ಸಮಸ್ಯೆಗಳಿಂದ ಮಹಿಳೆಯರ, ಮಕ್ಕಳ ಮತ್ತು ದಲಿತರ ಮೇಲೆ ಆಗುತ್ತಿರುವ ಹಿಂಸೆಗಳ ವಿರುದ್ಧದ ಆಂದೋಲನಗಳಲ್ಲಿ ಭಾಗಿಯಾಗಿ, ಜಗತ್ತಿನಾದ್ಯಂತ ಇರುವ ಚಳುವಳಿ-ಗುಂಪುಗಳ ಜೊತೆ ಒಡನಾಟ ಇಟ್ಟುಕೊಂಡಿರುತ್ತದೆ. ಅಲ್ಲದೇ, ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು, ಕೋಮ ಸೌಹಾರ್ಧತೆ, ಸಾಮಾಜಿಕ ನೀತಿ, ಶಾಂತಿ ಮತ್ತು ಅಭಿವೃದ್ಧಿ, ಶಾಂತಿಯ ಶಾಲೆ, ಲಿಂಗತ್ವ, ಅಂಗವಿಕಲತೆ ಮತ್ತು ಅಭಿವೃದ್ಧಿ, ಜಾತಿ-ವರ್ಗ-ಲಿಂಗತ್ವಗಳ ಮಧ್ಯೆ ಇರುವ ಮಿತಿಮೀರಿದ ಸಂಬಂಧಗಳ ದುಷ್ಪರಿಣಾಮಗಳು, ನೀರು ಮತ್ತು ಮಣ್ಣಿನ ಸಂರಕ್ಷಣೆ ಮತ್ತು ಸಾವಯವ ಕೃಷಿ, ಮಕ್ಕಳ-ಮಹಿಳೆಯರ-ಮಾನವ ಹಕ್ಕುಗಳು, ಸುಸ್ಥಿರ ಅಭಿವೃದ್ಧಿಯ ಕಲ್ಪನೆ ಮತ್ತು ಆಚರಣೆಗಳ ಕುರಿತಾದ ವಿಷಯಗಳನ್ನು ವಿಶ್ವದ ಹಲವಾರು ವಿಶ್ವ ವಿಧ್ಯಾಲಯಗಳ ಮುಖಾಂತರ ರಾಷ್ಟ್ರೀಯ ಮತ್ತು ಅಂತರ್-ರಾಷ್ಟ್ರೀಯ ವಿಧ್ಯಾರ್ಥಿಗಳಿಗೆ, ಯುವಕರಿಗೆ, ಮಕ್ಕಳಿಗೆ, ರೈತರಿಗೆ, ಶಿಕ್ಷಕರಿಗೆ, ಸಮುದಾಯ ಮುಖಂಡರಿಗೆ, ಎಸ್.ಡಿ.ಎಮ್.ಸಿ.ಯವರಿಗೆ, ಜನಪ್ರತಿನಿಧಿಗಳಿಗೆ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ - ತರಬೇತಿ, ಕಾರ್ಯಾಗಾರ ಮತ್ತು ಸಮಾಲೋಚನೆ ಹಮ್ಮಿಕೊಳ್ಳುವುದರ ಮೂಲಕ ಸಾಮಾಜಿಕ ಪಿಡುಗುಗಳ ಮೂಲಬೇರನ್ನು ವಿಶ್ಲೇಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
೨೦೦೭ರಿಂದ ಕೊಪ್ಪಳದಲ್ಲಿ, ಸಂಕಷ್ಟದಲ್ಲಿರುವ ಬಾಲಕಿಯರಿಗೆ ಬಾಂಧವಿ ಶಾಲೆ, ಪರಿವರ್ತನಾತ್ಮಕ ನಾಯಕತ್ವಕ್ಕಾಗಿ ವಿಸ್ತಾರ್ ಸಮುದಾಯ ಕಾಲೇಜು, ಪರ್ಯಾಯ ಶಿಕ್ಷಣಕ್ಕೆ ಒತ್ತುಕೊಟ್ಟು ಸಮಗ್ರ ಶಿಕ್ಷಣ ಶಾಲೆ, ನೀರಿನ ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ವೈವಿಧ್ಯಮಯ ಕೃಷಿಯ ಆಚರಣೆಗಾಗಿ ಭೂಮಿ ಶಾಲೆ, ಮಕ್ಕಳ ಹಕ್ಕಿನ ಶಿಕ್ಷಣ ಮತ್ತು ವಕ್ಕಾಲತ್ತಿಗಾಗಿ ಅಖಇಂ ಮುಂತಾದ ಸಮುದಾಯ ಆಧಾರಿತ ಕಾರ್ಯಕ್ರಮಗಳೊಡನೆ ಕಾರ್ಯ ನಿರ್ವಹಿಸುತ್ತಾ ಬಂದಿರುತ್ತದೆ.
ಪ್ರಾಂರಂಭದಿಂದಲೇ ರಂಗಭೂಮಿಯನ್ನು ಸಂಸ್ಥೆಯ ವಿವಿಧ ಯೋಜನೆಗಳ ಸಂವಹನಕ್ಕಾಗಿ ಬಳಸಿಕೊಂಡಿರುವುದಲ್ಲದೇ, ದೇಶ ವಿದೇಶದ ರಂಗಭೂಮಿ ತಂಡಗಳ ಜೊತೆ ಒಡನಾಟವನ್ನು ಹೊಂದಿದೆ. ರಂಗ ತಂಡಗಳ ಪ್ರದರ್ಶನಗಳಿಗೆ ಸಹಕಾರಗಳು ನೀಡುವುದು, ರಂಗಭೂಮಿಯ ತಜ್ಞರ ಜೊತೆ ನಿರಂತರ ಸಂಬಂಧ, ಬೆಂಗಳೂರಿನ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾದ ಒಳಾಂಗಣ ಮತ್ತು ಬಯಲು ರಂಗವೇದಿಕೆಗಳು, ಹಲವಾರು ಯೋಜನೆಗಳಲ್ಲಿ ಕಲಾಜಾಥಗಳನ್ನು ನಡೆಸುತ್ತಾ ಬಂದಿರುವುದು ರಂಗಭೂಮಿಯ ಬಗೆಗಿರುವ ಅರಿವನ್ನು ಸಮರ್ಥಿಸುತ್ತದೆ.
ಇಷ್ಟೆ ಅಲ್ಲದೆ, ವಿಸ್ತಾರ್‌ನ ೨೫ನೇ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಾಲ್ಕುರಿಕೆ ರಂಗಭೂಮಿ ಜೊತೆ ಸೇರಿ ಜೂನ್ ೨೦೧೫ರಿಂದ ವಿಸ್ತಾರ್ ರಂಗಶಿಕ್ಷಣ ಶಾಲೆ ಮತ್ತು ದಲಿತ ಸಾಂಸ್ಕೃತಿಕ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸುತ್ತಿದೆ. ಇದು ದಲಿತ ಬದುಕಿನ ಮೇಲಿನ ಕಾಳಜಿ ಮತ್ತು ರಂಗಭೂಮಿಯ ಮೇಲಿನ ಆಸಕ್ತಿ ಮತ್ತು ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತದೆ.
ಕೋರೇಗಾಂವ್ ಈ ದಿಸೆಯಲ್ಲಿ ಪ್ರಥಮ ಪ್ರಯೋಗವಾಗಿದ್ದು ಇನ್ನೂ ಹೆಚ್ಚು ಪ್ರಯೋಗಗಳಲ್ಲಿ ಒಳಗೊಳ್ಳುವ ಆಶಯವನ್ನು ಹೊಂದಿದೆ.
ಕೋರೇಗಾಂವ್ ನಾಟಕದ ಕಥಾನಕ
ಕೋರೇಗಾಂವ್ ನಾಟಕ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ. ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟವು ಬ್ರಿಟೀಷರಿಗೆ ಗೆಲುವು ತಂದು ಕೊಡುತ್ತದೆ. ಬ್ರಿಟೀಷರು ಮಹರ್ ಸೈನಿಕರನ್ನು ನಡೆಸಿಕೊಳ್ಳುವ ರೀತಿಯು ನಾಟಕದಲ್ಲಿ ವಿಸ್ಮಯವನ್ನು ಮೂಡಿಸುತ್ತದೆ. ಪೇಶ್ವೆ ಮತ್ತು ಬ್ರಿಟೀಷರ ನಡುವಿನ ಯುದ್ಧದಲ್ಲಿ ಮಹರ್ ಸೈನಿಕರು ಅನುಭವಿಸುವ ಕರಾಳತೆಯೇ ನಾಟಕದ ವಸ್ತುವಾಗಿದೆ. ಕೋರೇಗಾಂವ್ ಕದನ ಇತಿಹಾಸದ ಪಠ್ಯದಲ್ಲಿ ಮುಚ್ಚಿಹೋಗಿರುವುದರ ಜೊತೆಗೆ ಅಸ್ಪೃಶ್ಯರ ಸಾಹಸ, ಕೌಶಲ್ಯ, ಸೃಜನಶೀಲತೆಯನ್ನು ಮಣ್ಣುಪಾಲು ಮಾಡಿರುವ ಸನ್ನಿವೇಶಗಳು ಈ ನಾಟಕದಲ್ಲಿ ಬಿಚ್ಚಿಕೊಳ್ಳುತ್ತವೆ. ಬಾಬಾ ಸಾಹೇಬ್ ಡಾ|| ಬಿ. ಆರ್. ಅಂಬೇಡ್ಕರ್ ಕೋರೇಗಾಂವ್ ಘಟನೆಯನ್ನು ಶೋಧಿಸಿ ಬೆಳಕಿಗೆ ತಂದಿದ್ದಾರೆ. ೧೮೧೮ ಜನವರಿ ಒಂದರಂದು ಮಹಾರಾಷ್ಟ್ರದ ಪುಣೆಯ ಕೋರೇಗಾಂವ್‌ನಲ್ಲಿ ಪೇಶ್ವೆ ಮತ್ತು ಬ್ರಿಟೀಷರ ನಡುವೆ ಯುದ್ಧ ನಡೆದು ಮೂವತ್ತು ಸಾವಿರ ಪೇಶ್ವೆ ಸೈನಿಕರು ಸೋತು ಬ್ರಿಟೀಷರ ೫೦೦ ಮಹರ್ ಸೈನಿಕರು ಗೆಲ್ಲುತ್ತಾರೆ. ಈ ಘಟನೆಯನ್ನಿಟ್ಟುಕೊಂಡು ರಂಗ ವಿಜ್ನಾನಿ ಹಾಲ್ಕುರಿಕೆ ಶಿವಶಂಕರ್‌ರವರು ನಾಟಕ ಬರೆದಿದ್ದಾರೆ. ವಿಸ್ತಾರ್ ಥಿಯೇಟರ್ ಈ ನಾಟಕವನ್ನು ರಂಗ ಪ್ರಯೋಗಗೊಳಿಸುತ್ತಿದೆ.
:: ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ::
ಕನ್ನಡ ರಂಗಭೂಮಿಯನ್ನು ಬೌದ್ಧಿಕ ನೆಲೆಯಲ್ಲಿ ಪ್ರಯೋಗಗೊಳಿಸುತ್ತಾ ಬರುತ್ತಿರುವ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಅಭಿನಯವನ್ನು ಕೇಂದ್ರವಾಗಿಟ್ಟುಕೊಂಡು ಬದುಕಿನ ವಾಸ್ತವಗಳನ್ನು ರಂಗ ಸಂವೇದನೆಗೊಳಿಸುತ್ತಾರೆ. ಮೂರ್ತ, ಮತ್ತು ಅಮೂರ್ತ ನೆಲೆಯಲ್ಲಿ ಕಾಣಸಿಗುವ ರಂಗ ಸೂಕ್ಷ್ಮಗಳನ್ನು ಉದ್ದೀಪನಗೊಳಿಸಿ ಪ್ರೇಕ್ಷಕರ ಬುದ್ಧಿ ನೆಲೆಯಲ್ಲಿ ಸ್ಥಾಪಿಸುವಂತೆ ಮಾಡುತ್ತಾರೆ. ಕನ್ನಡ ರಂಗಭೂಮಿಯಲ್ಲೇ ಭಿನ್ನ ಮಾದರಿಯನ್ನು ಹಿಡಿದು, ಪ್ರಜ್ಞಾಪೂರ್ವಕವಾದ ಆಳದ ಅನುಭವದೊಂದಿಗೆ ರಂಗಭೂಮಿಯನ್ನು ಕಟ್ಟುತ್ತಿದ್ದಾರೆ, ಮನುಷ್ಯನ ಬದುಕಿನ ಆಳದ ಒರತೆಯ ಹುಡುಕಾಟದ ಪ್ರಜ್ಞೆಯು ಹೆಚ್ಚು ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪರಿಭಾಷೆಯಿಂದ ಕೂಡಿರುತ್ತದೆ. ಹಾಲ್ಕುರಿಕೆ ಥಿಯೇಟರ್ ಮೂಲಕ ಶೂನ್ಯ ಪರಿಕಲ್ಪನೆಯ ಆಧುನಿಕ ಅಭಿನಯ ಸಿದ್ಧಾಂತದ ಉತ್ಕಲನವು ಇವರ ರಂಗ ಚಿಂತನೆಯ
ಆವಿಷ್ಕಾರವಾಗಿದೆ. ಈ ಸಿದ್ದಾಂತದ ಮೂಲಧಾತು ಭಾರತೀಯ ಮನುಷ್ಯರ ಮನೋಘಾತಗಳನ್ನು ರಂಗದ ಮೇಲೆ ಪರಿಷ್ಕರಿಸುತ್ತಾ, ನಟನ ಮಾನಸಿಕ ಪರಿಕರಗಳ ಮೂಲಕ ಬಾಹ್ಯ ವಸ್ತು ಪರಿಕರಗಳನ್ನು ಗೌಣಗೊಳಿಸುವ ಮಾರ್ಗದಲ್ಲಿ ನಟನ ಮನಸ್ಸು ಮತ್ತು ಬುದ್ಧಿಯನ್ನು ಸಜ್ಜುಗೊಳಿಸುವುದಾಗಿರುತ್ತದೆ. ರಂಗ ಕ್ರಿಯೆಯ ಅಕರಗಳಾದ ನಾಟಕ ಕೃತಿ, ನಟನೆ, ಪ್ರೇಕ್ಷಕ, ನಿರ್ದೇಶನ ಇನ್ನಿತರ ವಿಸ್ತಾರ ರೂಪಗಳನ್ನು ಆಧುನಿಕ ಸ್ವರೂಪ ಮಾದರಿಗಳಲ್ಲಿ ಶೋಧಿಸುವ ಪ್ರಯೋಗಾತ್ಮಕ ಹುಡುಕಾಟವೇ ಶೂನ್ಯ ಪರಿಕಲ್ಪನೆಯ ಆಧುನಿಕ ಅಭಿನಯ ಸಿಧ್ಧಾಂತದ ಆಶಯವಾಗಿದೆ ಎನ್ನುತ್ತಾರೆ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್.
ಸಾಹಿತ್ಯ, ಕಾವ್ಯ, ಚಳುವಳಿ, ಹೋರಾಟದ ಹಿನ್ನಲೆಯಲ್ಲಿ ತಮ್ಮ ಬದುಕಿನ ವ್ಯಕ್ರಿತ್ವ ರೂಪಿಸಿಕೊಂಡಿರುವ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಕವಿಯಾಗಿ, ನಾಟಕಕಾರರಾಗಿ, ರಂಗ ವಿಜ್ಞಾನಿಯಾಗಿ, ಲೇಖಕರಾಗಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಯನ್ನು ಮನೋಶಾಸ್ತ್ರೀಯ ತಾತ್ವಿಕ ನೆಲೆಯಲ್ಲಿ ಹುಡುಕುತ್ತಿದ್ದಾರೆ. ರಂಗಭೂಮಿ. ಕಲೆ, ಸಾಹಿತ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಮಾತು, ಚರ್ಚೆ, ಸಂವಾದ ಮುಂತಾದ ಅಭಿವ್ಯಕ್ತಿಗಳನ್ನು ಸಮಗ್ರವಾಗಿ ತಲುಪಿಸುವ ಉದ್ದೇಶದಿಂದ ಕಳೆದ ಆರು ವರ್ಷಗಳಿಂದ ಹಾಲ್ಕುರಿಕೆ ಥಿಯಟರ್ ಮಿರರ್ ಮಾಸ ಪತ್ರಿಕೆಯನ್ನು ಹೊರತರುತ್ತಿದ್ದಾರೆ
-:: ಪ್ರಸ್ತುತ ರಂಗ ವಿಜ್ಞಾನಿ ಹಾಲ್ಕುರಿಕೆ ಕಾರ್ಯಸ್ಥಳ ::-
ಹದಿನೈದು ವರ್ಷಗಳ ಕಾಲ ಬೆಂಗಳೂರಿನಲ್ಲಿ ರಂಗಭೂಮಿಯ ವಿವಿಧ ಸ್ವರೂಪಗಳನ್ನು ಶೋಧಿಸಿ. ಜಾಗತಿಕ ವಿದ್ಯಮಾನಗಳನ್ನು ವಾಸ್ತವಿಕ ಪರಿಧಿಯ ಅಸ್ಮಿತೆಯಲ್ಲೇ ರಂಗ ಪ್ರಾಯೋಗಿಕ ಸಂವೇದನೆಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುತ್ತಿದ್ದರು. ಶೋಧನೆ, ಆವಿಷ್ಕಾರ, ಉತ್ಖಲನವನ್ನೇ ಉಸಿರಾಗಿಸಿಕೊಂಡು ರಂಗ ಸಾಧ್ಯತೆಗಳ ಹೊಸ ಶೋಧನೆಗೆ ಇಡೀ ಕುಟುಂಬವನ್ನೇ ಕಟ್ಟಿಕೊಂಡು ಕೊಪ್ಪಳ ಜಿಲ್ಲೆಗೆ ಪಯಣಿಸುತ್ತಾರೆ. ಕನ್ನಡ ರಂಗಭೂಮಿಯ ರಂಗ ವಿಶ್ಲೇಷಕರು ಹಾಲ್ಕುರಿಕೆಯವರ ಪಯಣವನ್ನು ಮಹಾ ರಂಗಯಾನ ಎಂದು ವ್ಯಾಖ್ಯಾನಿಸುತ್ತಾರೆ. ಪ್ರಸ್ತುತ- ಕೊಪ್ಪಳ ತಾಲೂಕಿನ ಬೂದುಗುಂಪಾ ಗ್ರಾಮದಲ್ಲಿ ಹಾಲ್ಕುರಿಕೆ ಥಿಯೇಟರ್ ಮೂಲಕ ನಟನ ಪ್ರಯೋಗಾಲಯವನ್ನು ಆರಂಬಿಸಿ ತೀವ್ರ ತರದ ರಂಗ ಶೋಧನೆಯಲ್ಲಿ ತೊಡಗಿದ್ದಾರೆ.
ಪಾತ್ರ ವರ್ಗ ನಟವರ್ಗ
ಬಾಜೀರಾವ್‌ಪೇಶ್ವೆ ನಾಜ಼ರ್ .ಪಿ.ಎಸ್
ಬಾಪುಗೋಖಲೆ ರೇಣುಕಾ ಹಾಲವರ್ತಿ
ಪೇಶ್ವೆ ಸೈನಿಕ ಮೀನಾಕ್ಷಿ ಮನ್ನಾಪುರ್
ಬ್ರಾಹ್ಮಣ/ಬ್ರಿಟೀಷ್ ಸೈನಿಕ್ ಶರಣಪ್ಪ. ಎಮ್ ಗೊಂಡಬಾಳ
ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್-ಶೀಲಾ ಹಾಲ್ಕುರಿಕೆ
ವಿಚಿತ್ರ೧ ಶಕುಂತ ಬಾನಾಪುರ
ವಿಚಿತ್ರ೧ ಅಂಬಮ್ಮ ತಳವಾರ
ವಿಚಿತ್ರ೧ ರೇಣುಕಾ ರಾಯಚೂರ್
ಸಿದನಾಕ/ಅಸ್ಪೃಶ್ಯ ಸುದಾಕರ್
ಹರನಾಕ/ ಅಸ್ಪೃಶ್ಯ ರಾಜು ವಿ. ರಾಠೋಡ್
ವಟಿನಾಕ/ ಅಸ್ಪೃಶ್ಯ/ವಿಚಿತ್ರ ಪ್ರಕಾಶ್ ಆರ್ ಕಲಿಕೇರಿ
ಗಣನಾಕ/ ಅಸ್ಪೃಶ್ಯ ಕರಿಯಪ್ಪ.ಎಮ್. ಕುರಿ
ದೇವನಾಕ/ ಅಸ್ಪೃಶ್ಯ//ವಿಚಿತ್ರ ಯೋಸೆಫ್ ಡಣಾಪುರ್
ಸ್ಟಂಡನ್/ಬ್ರಿಟೀಷ್ ಸೈನಿಕ ಸುಭಾಸ್‌ಚಂದ್ರ.ಎಸ್.ಬಂಡಿ
ಪಲ್ಸಮನ್ ಸುಂಕಪ್ಪ ಮೀಸಿ ನರೇಗಲ್
ಸೈನಿಕ೧ ಬಸವರಾಜ್‌ತಳವಾರ್
ಸೈನಿಕ೨ ಶಿವಪ್ಪ .ಬಿ.ಹೆಚ್. ಬೈರನಾಯಕನಹಳ್ಳಿ
ತಾಂತ್ರಿಕ ವರ್ಗ
ಹಿನ್ನಲೆಸಂಗೀತ ಶೀಲಾ ಹಾಲ್ಕುರಿಕೆ, ಮರಿಯಮ್ಮಚೂಡಿ, ಧರ್ಮರಾಜ್ ಗೋನಾಳ್,ಸುಂಕಪ್ಪಮೀಸಿ
ಕೀಬೋರ್ಡ್ ಸಂಗಮೇಶ ಮನ್ನೆರಾಳ್
ರಿದಂಪ್ಯಾಡ್ ಶೇಖರ್ ಭಾಗ್ಯನಗರ
ಸಹ ರಿದಂ ಧರ್ಮರಾಜ್ ಗೋನಾಳ್
ರಂಗಸಜ್ಜಿಕೆ ವಿನ್ಯಾಸ/ರಂಗ ಪರಿಕರ ಶರಣು ಶೆಟ್ಟರ್ ಗಂಗಾವತಿ
ಸಹಾಯ ಧೀಮಂತ್ ಆರ್, ರೇಣುಕಾ ರಾಯಚೂರ್ ,ಮರಿಯಮ್ಮಚೂಡಿ, ಧರ್ಮರಾಜ್ ಗೋನಾಳ್
ವಸ್ತ್ರವಿನ್ಯಾಸ ನೀಲ .ಕೆ. ನಿಂಬನಗೌಡರ್ ಗದಗ
ಪ್ರಸಾದನ ಸುಂದರರಾವ್ ಕಾರಂತ್ ಸಿಂಧನೂರ, ಪರುಶರಾಮ್ ಪ್ರಿಯ ಎಮ್. ನೀನಾಸಂ
ಬೆಳಕಿನ ವಿನ್ಯಾಸ ಧೀಮಂತ್ ಆರ್
ಬೆಳಕು/ಸೌಂಡ್/ಕರ್ಟನ್ ಲಕ್ಷ್ಮಣ ಫಿಟ್ಟರ್ ಶ್ರೀ ವೆಂಕಟೇಶ್ವರ ಡ್ರಾಮಾ ಸೀನ್ಸ್, ಹಲಗೇರಿ.
ರಚನೆ. ಸಂಗೀತ, ವಿನ್ಯಾಸ, ನಿರ್ದೇಶನ ರಂಗವಿಜ್ನಾನಿ ಹಾಲ್ಕುರಿಕೆ ಶಿವಶಂಕರ್
0 comments:
Post a Comment