-
ನಗರದ ಹಸನ್ ರಸ್ತೆಯಲ್ಲಿ ಯುಜಿಡಿ (ಒಳಚಂರಡಿ) ಕಾಮಗಾರಿ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯದ್ವ-ತದ್ವ ಕಾಮಗಾರಿ ನಡೆಸಿ ತೆಗ್ಗು ದಿನ್ನೆಗಳನ್ನು ನಿರ್ಮಿಸಿ ಹೊಗುತ್ತಿದ್ದರಿಂದ ರಸ್ತೆ ಹಾಳಾಗಿದ್ದು, ತಕ್ಷಣ ಸರಿಪಡಿಸಲು ಭಾರತ ಕಮ್ಯೂನಿಸ್ಟ್ ಪಕ್ಷ ಆಗ್ರಹಿಸಿದೆ.
ಹಸನ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡು ಎರಡು ತಿಂಗಳು ಗತಿಸಿದರೂ ಇನ್ನೂವರೆಗೂ ಪೂರ್ಣಗೊಳಿಸುತ್ತಿಲ್ಲ. ರಸ್ತೆಯಲ್ಲಿ ದ್ವಿಚಕ್ರ, ಆಟೋ, ಭಾರಿ ವಾಹನಗಳು ಸಂಚಾರಿಸುತ್ತಿದ್ದು, ಕಾಮಗಾರಿ ನಡೆಯುತ್ತಿದ್ದರಿಂದ ದಿನ ಒಂದೆರಡು ವಾಹನಗಳ ಒಳಚರಂಡಿಗಳ ತೆಗ್ಗುಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ.
ವಾಹನಗಳನ್ನು ತೆಗೆಯಲು ಪ್ರತ್ಯೇಕ ಒಂದು ಜೆಸಿಬಿ ಬರುತ್ತಿದೆ. ವಾಹನಗಳ ಚಾಲಕರು ಪರದಾಡುತ್ತಿದ್ದಾರೆ. ಪಾದಚಾರಿಗಳ ನಡೆದಾಡಲು ಸಹ ರಸ್ತೆ ಯೋಗ್ಯವಿಲ್ಲ. ರಸ್ತೆ ಉದ್ದಕ್ಕೂ ಅಲ್ಲಲ್ಲಿ ನಳದ ಪೈಪ್ ಒಡೆದು ಹಗಲು-ರಾತ್ರಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ನಗರಸಭೆ ಪೌರಾಯುಕ್ತರು, ಅಧ್ಯಕ್ಷರು ಮತ್ತು ವಾರ್ಡಿ ಸದಸ್ಯರ ಇದೇ ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ಆದರೂ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ವಾರ್ಡಿನ ಸದಸ್ಯರು ಮೌನವಾಗಿದ್ದಾರೆ. ಜಿಲ್ಲಾಧಿಕಾರಿಗಳು ಹಸನ್ ರಸ್ತೆ ದುರಸ್ಥೆಯ ಸ್ಥಳ ಪರಿಶೀಲಿಸಿ ತಕ್ಷಣ ಕ್ರಮಕೈಗೊಂಡು ಜನರ ಹಾಗೂ ವಾಹನಗಳ ಸುಮಗ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎ.ಗಫಾರ್. ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ನನ್ನುಸಾಬ ನೀಲಿ, ಶಿವಪ್ಪ ಹಡಪದ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಚಿಕೇನಕೊಪ್ಪ, ಜಿಲ್ಲಾಸಂಚಾಲಕ ಮೈಲಪ್ಪ ಬಿಸರಳ್ಳಿ, ಮಖಬೂಲ ರಾಯಚೂರ ಮತ್ತಿತರರು ಆಗ್ರಹಿಸಿದ್ದಾರೆ.
0 comments:
Post a Comment