ತಾಲೂಕಿನ ಹೊಸಕೇರಾ ಗ್ರಾಮದ ಸವಳಕ್ಯಾಂಪನಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಪರಿಶೀಲಿಸಲು ಮಾ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಸದಸ್ಯರಾದ ನ್ಯಾಯಮೂರ್ತಿ ಸಿ.ಜಿ.ಹುನಗುಂದ ರವರು ದಿ ೧೧-೦೫-೨೦೧೪ ರಂದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ದಲಿತರ ಆಹ್ವಾಲು ಸ್ವೀಕರಿಸಿದರು.
ಸವಳಕ್ಯಾಂಪ್‌ನಲ್ಲಿ ವಾಸವಿರುವ ೨೦ ಇಲಿ ಹಿಡಿಯುವ ಯಾನಾದಿ ನಾಯಕ ಕುಟುಂಬಗಳಿಗೆ ಸವರ್ಣೀಯರು ಮತ್ತು ಭೂ-ಮಾಲೀಕರು ಶೋಷಣೆ ಮಾಡುತ್ತಿರುವುದನ್ನು ಮತ್ತು ಗ್ರಾಮ ಪಂಚಾಯತ್ ಯಾನಾದಿ ಜನಕ್ಕೆ ಮಂಜೂರು ಮಾಡಿದ ನಿವೇಶನಗಳನ್ನು ಕಬಳಿಸಿರುವುದು ಪ್ರತ್ಯಕ್ಷ ಗಮನಿಸಿ ಕೂಡಲೇ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ನ್ಯಾಯಮೂರ್ತಿ ಸಿ.ಜಿ.ಹುನಗುಂದ ಸೂಚಿಸಿದ್ದಾರೆ. ಸವಳಕ್ಯಾಂಪ್ ನಿವಾಸಿಗಳಿಗೆ ಮಾನವ ಹಕ್ಕುಗಳ ಆಯೋಗದಿಂದ ರಕ್ಷಣೆ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಗಳೊಂದಿಗೆ ಪಿಯುಸಿಎಲ್‌ನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಕಾರ್ಯದರ್ಶಿ ಅಲ್ಲಾಗಿರಿರಾಜ್, ಪಿಯುಸಿಎಲ್‌ನ ಹಿರಿಯ ಆಜೀವ ಸದಸ್ಯ ಭಾರದ್ವಾಜ್,ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೆಕಲ್, ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಯೇಸಪ್ಪ ಮತ್ತೀತರು ಉಪಸ್ಥಿತರಿದ್ದರು.
ಭೂ-ಮಾಲೀಕರ ಬೆದರಿಕೆ :
ನ್ಯಾಯಮೂರ್ತಿ ಸಿ.ಜಿ.ಹುನಗುಂದ ರವರು ಸವಳಕ್ಯಾಂಪ್‌ನಲ್ಲಿ ವಿಕ್ಷಿಸಿ ಹೋದ ನಂತರ ಭೂ-ಮಾಲೀಕರಾದ ಪಾಲರಾಮು ಮತ್ತು ಲಕ್ಷ್ಮೀನಾರಾಯಣರವರು ಯಾನಾದಿ ಜನಾಂಗದ ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ಬೈದು ಇಂತಹ ನ್ಯಾಯಮೂರ್ತಿಗಳು ಎಷ್ಟು ಜನ ಬಂದರೂ ನಿಮಗೆ ಸಹಾಯ ಮಾಡಲಾಗುವುದಿಲ್ಲ, ನೀವುಗಳು ನಮಗೆ ಹೊಂದಿಕೊಂಡರೆ ಮಾತ್ರ ಜೀವನ ಮಾಡುತ್ತೀರಿ ಇಲ್ಲದಿದ್ದಲ್ಲಿ ನಿಮಗೆ ಬಹಳ ಕಷ್ಟಗಳು ಬರುತ್ತವೆ ಎಂದು ಧಮಕಿ ಹಾಕಿದ್ದಾರೆ.
0 comments:
Post a Comment