PLEASE LOGIN TO KANNADANET.COM FOR REGULAR NEWS-UPDATES

  ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೦೮ ವಿಧಾನಸಭಾ ಕ್ಷೇತ್ರಗಳಲ್ಲಿ ಏ. ೧೭ ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟಾರೆ ಶೇ. ೬೫. ೫೧ ರಷ್ಟು ಮತದಾನ ನಡೆದಿದ್ದು, ಕಳೆದ ೨೦೦೯ ರಲ್ಲಿನ ಮತದಾನ ಪ್ರಮಾಣಕ್ಕಿಂದ ಶೇ. ೧೦ ರಷ್ಟು ಹೆಚ್ಚಳವಾಗಿದೆ.  
೨೦೦೯ ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ೫೫. ೩೮ ರಷ್ಟು ಮತದಾನವಾಗಿತ್ತು.

  ಒಟ್ಟಾರೆಯಾಗಿ ಕೊಪ್ಪಳ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ಜರುಗದೆ, ಶಾಂತಿಯುತವಾಗಿ ಮತದಾನ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ನೆಮ್ಮದಿಯನ್ನುಂಟು ಮಾಡಿದೆ.  ಕೊಪ್ಪಳ ಲೋಕಸಭಾ ಕ್ಷೇತ್ರದ ೧೮೩೬ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು ೧೫೩೪೮೨೬ ಮತದಾರರ ಪೈಕಿ 

೧೦೦೬೬೮೫ ಮತದಾರರು ಮತದಾನ ಮಾಡಿದ್ದು, 
೫೨೬೦೯೬ ಪುರುಷರು ಹಾಗೂ 
೪೮೦೫೮೭ ಮಹಿಳೆಯರು ಮತ ಚಲಾಯಿಸಿದ್ದಾರೆ.  

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಳೆದ ೨೦೦೯ ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯ ಅಂಕಿ-ಅಂಶಗಳನ್ನು ಹೋಲಿಸಿದಾಗ ಕ್ಷೇತ್ರದಲ್ಲಿ ಒಟ್ಟಾರೆ ಶೇ. ೧೦ ಕ್ಕಿಂತಲೂ ಹೆಚ್ಚು ಮತದಾನ ಪ್ರಮಾಣ ಏರಿಕೆಯಾಗಿರುವುದು ಪ್ರಮುಖ ಅಂಶವಾಗಿದೆ.  
* ಸಿಂಧನೂರು ಕ್ಷೇತ್ರದಲ್ಲಿ ಈ ಬಾರಿ ಶೇ. ೬೧. ೯೩ ರಷ್ಟು ಮತದಾನವಾಗಿದ್ದು ಕಳೆದ ಬಾರಿ ಶೇ. ೪೫. ೬೩ ರಷ್ಟು ಮತದಾನವಾಗಿತ್ತು.  ಇಲ್ಲಿ ಶೇ. ೧೬. ೩ ರಷ್ಟು ಏರಿಕೆಯಾಗಿದೆ.  
* ಮಸ್ಕಿ ಕ್ಷೇತ್ರದಲ್ಲಿ ಶೇ. ೫೮. ೬೦ ರಷ್ಟು ಮತದಾನವಾಗಿದ್ದು, ೨೦೦೯ ರಲ್ಲಿ ಶೇ. ೪೮. ೨೯ ಮತದಾನವಾಗಿತ್ತು.  ಇಲ್ಲಿ ಶೇ. ೧೦. ೩೧ ಏರಿಕೆಯಾಗಿದೆ.  
* ಕುಷ್ಟಗಿ ಕ್ಷೇತ್ರದಲ್ಲಿ ಈ ಬಾರಿ ಶೇ. ೫೯. ೩೪ ಮತದಾನವಾಗಿದ್ದು, ಕಳೆದ ಚುನಾವಣೆಯಲ್ಲಿ ಶೇ. ೫೧. ೯೨ ಮತದಾನವಾಗಿತ್ತು.  ಇದರಿಂದಾಗಿ ಇಲ್ಲಿ ಶೇ. ೭. ೪೨ ರಷ್ಟು ಮತದಾನ ಹೆಚ್ಚಳವಾಗಿದೆ.  
*   ಕನಕಗಿರಿ ಕ್ಷೇತ್ರದಲ್ಲಿ ಶೇ. ೬೯. ೬೬ ರಷ್ಟು ಮತದಾನವಾಗಿದ್ದು, ಈ ಹಿಂದೆ ೫೯. ೨೯ ರಷ್ಟಾಗಿತ್ತು.  ಇಲ್ಲಿ ಶೇ. ೧೦. ೩೭ ರಷ್ಟು ಏರಿಕೆಯಾಗಿದೆ.  
*  ಗಂಗಾವತಿ ಕ್ಷೇತ್ರದಲ್ಲಿ ಈ ಬಾರಿ ಶೇ. ೬೮. ೯೩ ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. ೬೧. ೧೪ ಮತದಾನವಾಗಿತ್ತು.  ಇದರಿಂದಾಗಿ ಇಲ್ಲಿ ಶೇ. ೭. ೭೯ ರಷ್ಟು ಹೆಚ್ಚಳವಾಗಿದೆ.  
*    ಯಲಬುರ್ಗಾ ಕ್ಷೇತ್ರದಲ್ಲಿ ಈ ಬಾರಿ ೬೮. ೨೪ ರಷ್ಟು ಮತದಾನವಾಗಿದ್ದು, ಈ ಹಿಂದೆ ೬೦. ೪೪ ಮತದಾನ ನಡೆದಿತ್ತು.  ಇಲ್ಲಿ ಶೇ. ೭. ೮೦ ರಷ್ಟು ಏರಿಕೆಯಾಗಿದೆ.  
*  ಕೊಪ್ಪಳ ಕ್ಷೇತ್ರದಲ್ಲಿ ಈ ಬಾರಿ ಶೇ. ೭೧. ೬೫ ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿ ೬೦. ೫೬ ರಷ್ಟು ಮತದಾನವಾಗಿತ್ತು.  ಇಲ್ಲಿ ಒಟ್ಟು ಶೇ. ೧೧. ೦೯ ರಷ್ಟು ಮತದಾನ ಹೆಚ್ಚಳವಾಗಿದೆ.  
*  ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. ೬೫. ೭೯ ರಷ್ಟು ಮತದಾನವಾಗಿದ್ದು, ೨೦೦೯ ರಲ್ಲಿ ಶೇ. ೫೭. ೮೮ ಮತದಾನ ದಾಖಲಾಗಿತ್ತು.  ಇಲ್ಲಿ ಶೇ. ೭. ೯೧ ರಷ್ಟು ಪ್ರಮಾಣದ ಮತದಾನ ಹೆಚ್ಚಳವಾಗಿದೆ.

       ಸಿಂಧನೂರು ವಿಧಾನಸಭಾ ಕ್ಷೇತ್ರದ ೨೩೭ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ೨೦೬೮೬೭ ಮತದಾರರ ಪೈಕಿ ೧೨೮೧೨೦ ಜನ ಮತ ಚಲಾಯಿಸಿದ್ದು, ಶೇ. ೬೧. ೯೩ ರಷ್ಟು ಮತದಾನ ನಡೆದಿದೆ.  ಈ ಕ್ಷೇತ್ರದಲ್ಲಿ ೬೭೬೬೪ ಪುರುಷರು ಹಾಗೂ ೬೦೪೫೬ ಮಹಿಳೆಯರು ಮತ ಚಲಾಯಿಸಿದ್ದಾರೆ.
           ಮಸ್ಕಿ ವಿಧಾನಸಭಾ ಕ್ಷೇತ್ರದ ೨೦೪ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ೧೭೨೭೮೯ ಮತದಾರರ ಪೈಕಿ ೧೦೧೨೫೭ ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೫೮. ೬೦ ರಷ್ಟು ಇಡೀ ಕ್ಷೇತ್ರದಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನವಾಗಿದೆ.  ಈ ವಿಧಾನಸಭಾ ಕ್ಷೇತ್ರದಲ್ಲಿ ೫೩೮೭೦ ಪುರುಷರು ಹಾಗೂ ೪೭೩೮೫ ಮಹಿಳೆಯರು ಮತದಾನ ಮಾಡಿದ್ದಾರೆ.
    ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ ೨೫೨ ಮತಗಟ್ಟೆಗಳಲ್ಲಿ ಮತದಾನವಾಗಿದ್ದು, ೨೦೧೯೦೪ ಮತದಾರರ ಪೈಕಿ ೧೧೯೮೨೬ ಜನ ತಮ್ಮ ಸಂವಿಧಾನಾತ್ಮಕ ಮತದಾನ ಹಕ್ಕು ಚಲಾಯಿಸಿದ್ದಾರೆ.  ಇಲ್ಲಿ ಶೇ. ೫೯. ೩೪ ರಷ್ಟು ಮತದಾನ ನಡೆದಿರುತ್ತದೆ. ಈ ಕ್ಷೇತ್ರದಲ್ಲಿ ೬೨೯೨೪ ಪುರುಷರು ಹಾಗೂ ೫೬೯೦೨ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ೨೩೯ ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ ೧೯೧೧೪೫ ಮತದಾರರ ಪೈಕಿ ೧೩೩೧೫೨ ಜನ ಮತದಾನ ಮಾಡಿದ್ದು ಶೇ. ೬೯. ೬೬ ರಷ್ಟು ಮತದಾನವಾದಂತಾಗಿದೆ.  ಈ ಕ್ಷೇತ್ರದಲ್ಲಿ ೬೯೧೨೫ ಪುರುಷರು ಹಾಗೂ ೬೪೦೨೭ ಮಹಿಳೆಯರು ಮತದಾನ ಮಾಡಿದ್ದಾರೆ.
  ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ ೨೧೧ ಮತಗಟ್ಟೆಗಳಲ್ಲಿ ಮತದಾನ ನಡೆದು, ೧೭೯೭೦೩ ಮತದಾರರ ಪೈಕಿ ೧೨೩೮೮೧ ಜನ ಮತ ಚಲಾಯಿಸಿದ್ದಾರೆ.  ಈ ಕ್ಷೇತ್ರದಲ್ಲಿ ಶೇ. ೬೮. ೯೩ ರಷ್ಟು ಮತದಾನವಾಗಿದ್ದು, ೬೩೮೧೩ ಪುರುಷರು ಹಾಗೂ ೬೦೦೬೮ ಮಹಿಳೆಯರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ೨೩೭ ಮತಗಟ್ಟೆಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು ೧೮೭೨೨೩ ಮತದಾರರ ಪೈಕಿ ೧೨೭೭೬೭ ಜನ ಮತ ಚಲಾಯಿಸಿದ್ದು, ಶೇ. ೬೮. ೨೪ ರಷ್ಟು ಮತದಾನ ನಡೆದಿದೆ.  ಈ ಕ್ಷೇತ್ರದಲ್ಲಿ ೬೭೦೩೨ ಪುರುಷರು ಹಾಗೂ ೬೦೭೩೫ ಮಹಿಳೆಯರು ಮತ ಚಲಾಯಿಸಿದ್ದಾರೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರದ ೨೫೩ ಮತಗಟ್ಟೆಗಳಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ೨೧೬೨೧೨ ಮತದಾರರ ಪೈಕಿ ೧೫೪೯೨೩ ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೭೧. ೬೫ ರಷ್ಟು ಕ್ಷೇತ್ರದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ.  ಈ ವಿಧಾನಸಭಾ ಕ್ಷೇತ್ರದಲ್ಲಿ ೮೦೭೧೪ ಪುರುಷರು ಹಾಗೂ ೭೪೨೦೯ ಮಹಿಳೆಯರು ಮತದಾನ ಮಾಡಿದ್ದಾರೆ.
  ಶಿರಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿನ ೨೦೩ ಮತಗಟ್ಟೆಗಳಲ್ಲಿ ಮತದಾನವಾಗಿದ್ದು, ೧೭೮೯೮೩ ಮತದಾರರ ಪೈಕಿ ೧೧೭೭೫೯ ಜನ ತಮ್ಮ ಸಂವಿಧಾನಾತ್ಮಕ ಮತದಾನ ಹಕ್ಕು ಚಲಾಯಿಸಿದ್ದಾರೆ.  ಇಲ್ಲಿ ಶೇ. ೬೫. ೭೯ ರಷ್ಟು ಮತದಾನ ನಡೆದಿರುತ್ತದೆ. ಈ ಕ್ಷೇತ್ರದಲ್ಲಿ  ೬೦೯೫೪ ಪುರುಷರು ಹಾಗೂ ೫೬೮೦೫ ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
  ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮತದಾನವು  ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿರುವುದಿಲ್ಲ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ಕೆ.ಪಿ. ಮೋಹನ್‌ರಾಜ್  ತಿಳಿಸಿದ್ದಾರೆ.

Advertisement

0 comments:

Post a Comment

 
Top