PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಜಿಲ್ಲಾಡಳಿತ, ಬಸವ ಜಯಂತಿ ಉತ್ಸವ ಸಮಿತಿ, ಬಸವಾನಾಯಾಯಿಗಳ ಸಂಘ-ಸಂಸ್ಥೆಗಳ ಕೊಪ್ಪಳ ಇವರ ಸಂಯುಕ್ತಾಶಯಗಳಲ್ಲಿ ಬಸವ ಜಯಂತಿ ಉತ್ಸವ ಸಮಾರಂಭ ದಿ. ೨-೫-೨೦೧೪ ರಂದು ಜರುಗಲಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜಾ ಮತ್ತು ಪ್ರಾರ್ಥನೆ ನಡೆಯಲಿದೆ. ಸಂಜೆ ೪ ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಕೊಪ್ಪಳ ನಗರದ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಿಂದ ಜಹವಾಹರ ರಸ್ತೆಯ ಮೂಲಕ ಶ್ರೀ ಗವಿಮಠದ ಆವರಣಕ್ಕೆ ತಲುಪಲಿದೆ. ಸಂಜೆ ೬ ಗಂಟೆಗೆ ಶ್ರೀ ಗವಿಮಠದ ಆವರಣದಲ್ಲಿ ಬಸವ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ವಹಿಸಲಿದ್ದಾರೆ. ಪಾವನ ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ಧರಾಮ ಶರಣರು, ಬೆಲ್ದಾಳ ಬಸವ ಯೋಗ ಕೇಂದ್ರ ಕೌಠಾ (ಬಿ) ಬಸವ ಕಲ್ಯಾಣ ವಹಿಸಲಿದ್ದಾರೆ. ಬಸವ ನುಡಿಗಳು ಪೂಜ್ಯ   ಅಕ್ಕ ಡಾ. ಗಂಗಾಂಬಿಕೆ ತಾಯಿ ಬಸವ ಸೇವಾ ಪ್ರತಿಷ್ಠಾನ ಬೀದರ ಇವರ ಮಾತನಾಡಲಿದ್ದಾರೆ. ವಚನ ಸಂಗೀತವನ್ನು  ಸದಾಶಿವ ಪಾಟೀಲ ಹಾಗೂ ಸಂಗಡಿಗರು ನಡೆಸಿಕೊಂಡಲಿದ್ದಾರೆ. ವಿಶ್ವಗುರು ಬಸವೇಶ್ವರ ಟ್ರಸ್ಟಿನ ವಿದ್ಯಾರ್ಥಿಗಳಿಂದ ವಚನ ನೃತ್ಯವನ್ನು ನಡೆಸಿಕೊಂಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರಮಕ್ಕೆ ಹಾಗೂ ಕಾಯಕ ಜೀವಗಳಿಗೆ ಕೊಡುವ ಬಸವಕಾರುಣ್ಯ ಪ್ರಶಸ್ತಿಯನ್ನು ಶರಣ ಮುದಕಪ್ಪ ಹೂಗಾರ, ವೆಂಕಟೇಶ ಹಲಗೇರಿ, ಶ್ರೀಮತಿ ಯಲ್ಲಮ್ಮ ಹಡಪದ ಹಾಗೂ ಮಹೇಶ ಬಳ್ಳಾರಿ ಕೊಡಲಾಗುವುದು. ಪ್ರಸಾದ ದಾಸೋಹವನ್ನು    ಶರಣಬಸವರಾಜ ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಬಸವ ಅಭಿಮಾನಿಗಳು ಹಾಗೂ ಎಲ್ಲಾ ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ  ತಿಳಿಸಿದ್ದಾರೆ.

Advertisement

0 comments:

Post a Comment

 
Top