ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಜರುಗಿದ ಮತದಾನದಲ್ಲಿ ಒಟ್ಟಾರೆ ಶೇ. ೬೫. ೫೯ ರಷ್ಟು ಮತದಾನ ದಾಖಲಾಗಿದ್ದು, ಕ್ಷೇತ್ರದಲ್ಲಿ ಅತಿಹೆಚ್ಚು ಕೊಪ್ಪಳ ತಾಲೂಕಿನ ಹನುಮನಹಳ್ಳಿಯಲ್ಲಿ ಶೇ. ೯೫. ೩೩ ರಷ್ಟು ಮತದಾನ ದಾಖಲಾಗಿದೆ. ಅತಿ ಕಡಿಮೆ ಮತದಾನ ಕ್ಷೇತ್ರದ ಸಿಂಧನೂರಿನ ಮತಗಟ್ಟೆ ಸಂಖ್ಯೆ ೧೧೮ ರಲ್ಲಿ ಶೇ. ೩೩. ೪೬ ರಷ್ಟು ದಾಖಲಾಗಿದೆ.
ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಚಿಂತಮನದೊಡ್ಡಿ- ಶೇ. ೮೩. ೮೩. ಅತಿ ಕಡಿಮೆ ಸಿಂಧನೂರು ಮತಗಟ್ಟೆ ಸಂಖ್ಯೆ ೧೧೮ ರಲ್ಲಿ ಶೇ. ೩೩. ೪೬ ರಷ್ಟು ದಾಖಲಾಗಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಜಂಗಮರಹಳ್ಳಿ- ಶೇ. ೭೭. ೧೫. ಅತಿ ಕಡಿಮೆ ಸರ್ಜಾಪುರ- ಶೇ. ೩೭. ೧೪. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನೆರೆಬೆಂಚಿ- ಶೇ. ೮೮. ೧೦. ಅತಿ ಕಡಿಮೆ ಕುಷ್ಟಗಿ ಮತಗಟ್ಟೆ ಸಂಖ್ಯೆ-೩ ರಲ್ಲಿ ಶೇ. ೩೯. ೧೫ ರಷ್ಟು ದಾಖಲಾಗಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕನಕಗಿರಿ ಮತಗಟ್ಟೆ ಸಂಖ್ಯೆ ೨೧೮ ರಲ್ಲಿ ಶೇ. ೮೬. ೭೦. ಅತಿ ಕಡಿಮೆ ಕನಕಗಿರಿ ಮತಗಟ್ಟೆ ಸಂಖ್ಯೆ- ೧೮೯ ರಲ್ಲಿ ಶೇ. ೪೯. ೩೧ ದಾಖಲಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಗಂಗಾವತಿಯ ಮತಗಟ್ಟೆ ಸಂಖ್ಯೆ ೧೧ ರಲ್ಲಿ ಶೇ. ೮೯. ೭೦. ಅತಿ ಕಡಿಮೆ ಗಂಗಾವತಿ ಮತಗಟ್ಟೆ ಸಂಖ್ಯೆ ೧೭೧ ರಲ್ಲಿ ಶೇ. ೫೧. ೨೭ ರಷ್ಟು ದಾಖಲಾಗಿದೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹನುಮಾಪುರ- ಶೇ. ೯೧. ೦೩. ಅತಿ ಕಡಿಮೆ ತೊಂಡಿಹಾಳ- ಶೇ. ೪೭. ೬೦ ದಾಖಲಾಗಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹನುಮನಹಳ್ಳಿ- ಶೇ. ೯೫. ೩೩. ಅತಿ ಕಡಿಮೆ ಕೊಪ್ಪಳ ಮತಗಟ್ಟೆ ಸಂಖ್ಯೆ ೧೩೭ ರಲ್ಲಿ ಶೇ. ೪೨. ೯೩ ದಾಖಲಾಗಿದೆ. ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಸಿರಗುಪ್ಪ ಮತಗಟ್ಟೆ ಸಂಖ್ಯೆ ೧೨೫ ರಲ್ಲಿ ಶೇ. ೮೨. ೧೬. ಅತಿ ಕಡಿಮೆ ಸಿರಗುಪ್ಪ ಮತಗಟ್ಟೆ ಸಂಖ್ಯೆ- ೭೯ ರಲ್ಲಿ ಶೇ. ೩೮. ೮೫ ರಷ್ಟು ದಾಖಲಾಗಿದೆ.
0 comments:
Post a Comment