PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಏ. ೧೩. ಬದಲಾವಣೆ ಎಂಬ ಶಿರ್ಷಿಕೆ ಅಡಿಯಲ್ಲಿ ಬಂದಿರುವ ಕೊಪ್ಪಳದ ಗೊಂಡಬಾಳರ ಪತ್ರಿಕೆ ಸಾಜದಲ್ಲಿ ನಿಜವಾದ ಬದಲಾವಣೆ ತರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.
ಅವರು ಕಾರಟಗಿಯಲ್ಲಿ ಬದಲಾವಣೆ ಕನ್ನಡ ಇಂಗ್ಲೀಷ ದ್ವಿಭಾಷಾ ಪಾಕ್ಷಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.   ಮಾತನಾಡಿದ ಅವರು, ಪತ್ರಿಕೆಗಳು ಅನೇಕ ಬರುತ್ತವೆ ಆದರೆ ವಸ್ತುನಿಷ್ಠತೆಯ ಕೊರತೆಯಿಂದ ಬೇಗ ಜನರಿಂದ ದೂರ ಸರಿಯುತ್ತವೆ ಎಂದ ಅವರು, ಸಮಾಜದ ಶೋಷಿತ ಹಾಗೂ ಕಟ್ಟಕಡೆಯ ಮನುಷ್ಯನಿಗೂ ಪತ್ರಿಕೆಗಳು ತಲುಪಬೇಕು, ಸಮಾಜದ ಹಿಂದುಳಿದ ಸಮಾಜದಿಂದ ಬಂದ ಮಂಜುನಾಥ ಪತ್ರಿಕೆ ಆರಂಭಿಸಿರುವದು ಆ ಸಮಾಜ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದ ಅವರು ಪತ್ರಿಕೆಯ ಬೆಳವಣಿಗೆಗೆ ಎಲ್ಲಾ ಸಹಕಾರ ನೀಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಿಕೆಯ ಸಂಪಾದಕ-ಪ್ರಕಾಶಕ ಮಂಜುನಾಥ ಜಿ. ಗೊಂಡಬಾಳ, ಶೋಷಿತ ವರ್ಗದ ಧ್ವನಿಯಾಗಿ ಪತ್ರಿಕೆಯನ್ನು ಆರಂಭಿಸಿದ್ದು, ಸಮಾಜದಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುವ ಸಾಧನವಾಗಿ ಪತ್ರಿಕೆಯನ್ನು ಬಳಸಲಾಗುವದು, ಪತ್ರಿಕಯನ್ನು ನಿರಂತರವಆಗಿ ಮುನ್ನಡೆಸಲು ಎಲ್ಲರೂ ಸಹಕಾರ ನೀಡಬೇಕು ಎಂದ ಅವರು, ನಿರಂತರವಾಗಿ ಹೊಸ ಹೊಸ ಪ್ರಯೋಗಗಳನ್ನು ಪತ್ರಿಕ ಮೂಲಕ ಮಾಡಲಾಗುವದು, ಕೆಲವೇ ತಿಂಗಳಲ್ಲಿ ಅದನ್ನು ದಿನಪತ್ರಿಕೆಯಾಗಿ ಆರಂಭಿಸಲಾಗುವದು ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಕಾರಟಗಿ ವಿಶೇಷ ಎಪಿಎಂಸಿ ಅಧ್ಯಕ್ಷ ಶಿವರಡ್ಡಿ ನಾಯಕ, ಗ್ರಾ. ಪಂ. ಸದಸ್ಯ ಈಶಪ್ಪ ಇಟ್ಟಂಗಿ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಜಿಲ್ಲಾ ಕರವೇ ಅಧ್ಯಕ್ಷ ಪಂಪಣ್ಣ ನಾಯಕ, ತಾಲೂಕ ಅಧ್ಯಕ್ಷ ಅರ್ಜುನ ನಾಯಕ, ನಗರ ಅಧ್ಯಕ್ಷ ಚಂದ್ರಶೇಖರಶೆಟ್ಟಿ ಇತರರು ಇದ್ದರು.

Advertisement

0 comments:

Post a Comment

 
Top