PLEASE LOGIN TO KANNADANET.COM FOR REGULAR NEWS-UPDATES

 ಅಭಿವೃದ್ದಿಯ ವಿಷಯದಲ್ಲಿ ಹನ್ನೇರಡನೆ ಸ್ಥಾನದಲ್ಲಿರುವ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯಿಂದ ದೇಶದ ಸರ್ವತೋಮುಖ ಅಭಿವೃಯನ್ನು ಬಯಸುವದು ಹಗಲುಗನಸು ಎಂದೇ ಹೆಳಬ

ಹುದು ಎಂದು ಕೊಪ್ಪಳ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಬಸವರಾಜ ಹಿಟ್ನಾಳ ಅಭಿಪ್ರಾಯ ಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಅಳವಂಡಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜಿನಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ದಿಮಾಡಲಾಗದ ನರೇಂದ್ರ ಮೋದಿಯಿಂದ ದೇಶದಲ್ಲಿ ಶಾಂತಿಯುತ, ಮತ್ತು ರಚನಾತ್ಮಕ ಆಡಳಿತವನ್ನು ನೀರಿಕ್ಷಿಸಲು ಸಾಧ್ಯವಿಲ್ಲ. ಕಳೆದ ಹತ್ತು ವರ್ಷಗಳಿಂದ ಕೇಂದ್ರ ಯುಪಿಎ ಸರಕಾರ ಜನಪರ ಕಾರ್ಯಕ್ರಮಗಳನ್ನು, ಕ್ರಾಂತಿಕಾರಕ ಯೊಜನೆಗಳನ್ನ ಜನತೆಯ ಮನೆಬಾಗಿಲಿಗೆ ತಲುಪಿಸಿದ್ದು ಮತ್ತು ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರವು ಕಳೆದ ಒಂದು ವರ್ಷದಿಂದ ಬಡವರ ಪರ, ರೈತವರ್ಗದ ಪರ ಕೈಗೊಂಡ ಹಲವಾರು ಯೋಜನೆಗಳ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ ಹೊರೆತು ಮೋದಿ ಅಲೆ ಎಂಬುದು ಬರಿ ಗಾಳಿಯ ಸುದ್ದಿಯೆಂದು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳರವರು ಮಹಿಳೆಯರ ಮೆಲೆ ಅತ್ಯಾಚಾರ್ಯ ಮಾಡಿದ ಬಿಜೆಪಿಯವರಿಂದ ಸುಭದ್ರ ಸರಕಾರವನ್ನು ನಿರಿಕ್ಷಿಸುವುದು ಅಸಾದ್ಯ. ಬಿಜೆಪಿಯಲ್ಲಿ ಮೋದಿಯವರ ಬೆಳವಣಿಗೆಗೆ ಕಾರಣಿಕರ್ತರಾದ ಎಲ್.ಕೆ ಅಡ್ವಾಣಿ ಸೇರಿದಂತೆ ಅನೇಕ ಹಿರಿಯರನ್ನು ಮೂಲೆಗುಂಪುಮಾಡಿದ ಮೋದಿಯವರಿಗೆ ಕಾಂಗ್ರೇಸ್ ಪಕ್ಷದ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ಹೆಳಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತೊರೆದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ನನ್ನುಸಾಬ ಬಿಸರಳ್ಳಿ, ನಜೀರಸಾಬ ಬಿಸರಳ್ಳಿ, ಗುರುರಾಜ ದಾಸರಡ್ಡಿ, ಕರಿಯಪ್ಪ ಮ್ಯಾಗೇಡಿ, ಬಸವರಾಜ ನಗರ, ಬನ್ನೆಪ್ಪ ಪೂಜಾರ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯ ಕರ್ತರು ಕಾಂಗ್ರೆಸ್ ಪಕ್ಷವನ್ನು ಸೆರ್ಪಡೆಯಾದರು. 
ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಮುಖಂಡರಾದ ಅಂದಣ್ಣ ಅಗಡಿ, ಮಹಿಳಾ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ಶ್ರೀಮತಿ ಅನ್ನಪೂರ್ಣ ಸಿಂಗ್, ಗುರುಮೂರ್ತಿಸ್ವಾಮಿ ಇನಾಮದಾರ, ಹೆಚ್.ಎಲ್. ಹಿರೇಗೌಡ್ರ, ಕೆ.ಎಮ್.ಸೈಯದ್ ಮಾತನಾಡಿದರು. ಸಭೆಯಲ್ಲಿ ಜುಲ್ಲು ಖಾಧರಿ, ಎಸ್.ಬಿ ನಾಗರಳ್ಳಿ, ಸುರೇಶ್ ಭೂಮರಡ್ಡಿ, ಇಂದ್ರಾ ಬಾವಿಕಟ್ಟಿ, ಈಶಪ್ಪ ಮಾದಿನೂರು, ಬಸುವರಡ್ಡೆಪ್ಪ ಹಳ್ಳಿಕೇರಿ, ಹನುಮರಡ್ಡಿ ಹಂಗನಕಟ್ಟಿ, ಗವಿಸಿದ್ದಪ್ಪ ಮುದಗಲ್, ರಂಗಪ್ಪ ಕರಡಿ, ಯಲ್ಲಪ್ಪ ಜೀರ, ಲಿಂಗನಗೌಡ್ರ ಮಾಲಿಪಾಟೀಲ್, ಸಿದ್ದಲಿಂಗಸ್ವಾಮಿ ಇನಾಮದಾರ, ಭರಮಪ್ಪ ನಗರದ, ಗೋಣೆಶ್ ಉಪ್ಪಾರ, ಸುನಂದಮ್ಮ ಗದ್ದಿಕೇರಿ, ಹನುಮಂತ್ರಗೌಡ್ರ ಗಾಳಿ ಹಾಜರಿದ್ದರು, ಸಾವಿತ್ರಿ ಮುಜಮುದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಯುವಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸುರೇಶ್ ದಾಸರಡ್ಡಿ ಕಾರ್ಯಕ್ರಮ ನಿರೂಪಿಸಿದರು.

Advertisement

0 comments:

Post a Comment

 
Top