ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಪ್ರಸಾದ ವಿತರಣೆ ಕಾರ್ಯವನ್ನು ಏ. ೨೭ ರಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ಇಲಾಖೆಯಿಂದಲೇ ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ಹಣ, ಧವಸ-ಧಾನ್ಯ ನೀಡಬಯಸುವ ಭಕ್ತಾದಿಗಳು ದೇವಸ್ಥಾನದ ಕಾರ್ಯಾಲಯದಲ್ಲಿ ಮಾತ್ರ ಸಂದಾಯ ಮಾಡಿ, ಅಧಿಕೃತ ರಸೀದಿ ಪಡೆಯುವಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕು, ಹಂಪಿ ಕ್ಷೇತ್ರ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಖಾ ವ್ಯಾಪ್ತಿಗೆ ಒಳಪಟ್ಟ ಸಂಸ್ಥೆಯಾಗಿರುತ್ತದೆ ಹಂಪಿ ಶ್ರೀ ವಿದ್ಯಾರಣ್ಯ ಸ್ವಾಮಿಗಳು ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಗುರುಪಾರಂಪರ್ಯ ಗುರುಗಳು ಮತ್ತು ವಂಶಪಾರಂಪರ್ಯ ಧರ್ಮಕರ್ತರಾಗಿರುತ್ತಾರೆ ಇವರುಗಳ ಆಜ್ಞಾನುಸಾರವಾಗಿ ಹಂಪಿ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ದೇವಸ್ಥಾನದ ವತಿಯಿಂದ ಭಕ್ತಾದಿಗಳ ನೆರವಿನೊಂದಿಗೆ ನಿತ್ಯ ಅನ್ನ ದಾಸೋಹ ಪ್ರಸಾದ ವಿತರಣೆ ಕಾರ್ಯವನ್ನು ಪ್ರಾರಂಭಿಸಲಾಗಿದೆ. ದಾಸೋಹ ಕಾರ್ಯಕ್ಕೆ ಹಣ ದವಸ ಧಾನ್ಯಗಳನ್ನು ನೀಡಬಯಸುವ ಭಕ್ತಾದಿಗಳು ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದು ಸಂದಾಯ ಮಾಡಿ ಅಧಿಕೃತ ರಸೀದಿ ಪಡೆದುಕೊಳ್ಳಬೇಕು. ಬ್ಯಾಂಕ್ ಮೂಲಕ ಹಣ ಸಂದಾಯ ಮಾಡಬೇಕಾದಲ್ಲಿ, ದೇವಸ್ಥಾನದ ಉಳಿತಾಯ ಖಾತೆ ಕ್ಯಾನರಾ ಬ್ಯಾಂಕ್ ಸಂಖ್ಯೆ 1187.101.000001 IFSC CODE CNRB 0001187ಈ ಖಾತೆಗೆ ಜಮ ಮಾಡಬಹುದಾಗಿದೆ. ದೇವಸ್ಥಾನದಲ್ಲಿ ಅನ್ನದಾಸೋಹ ಪ್ರಸಾದ ವಿತರಣೆ ಕಾರ್ಯ ಮಾಡುತ್ತೇವೆಂದು ಅನಧಿಕೃತವಾಗಿ ಶ್ರೀ ಪಂಪಾಕ್ಷೇತ್ರ ನಿತ್ಯಾನ್ನದಾನ ಪ್ರಸಾದ ಎಂದು ಹಾಗೂ ಅನಧಿಕೃತ ಟ್ರಸ್ಟ್‌ನ್ನು ರಚಿಸಿಕೊಂಡು ವಿವಿಧ ಸಂಘ ಸಂಸ್ಥೆಗಳು, ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಕಂಡುಬಂದಿದ್ದು, ಇಂತಹ ಅನಧಿಕೃತ ಟ್ರಸ್ಟ್‌ಗಳಿಗೆ ಯಾವುದೆ ಮಾನ್ಯತೆ ಇರುವುದಿಲ್ಲವಾದ್ದರಿಂದ, ಭಕ್ತಾಧಿಗಳು ಇಂತಹ ಟ್ರಸ್ಟ್‌ಗಳಿಗೆ ಪ್ರೋತ್ಸಹ ನೀಡಬಾರದು. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳಿಗೆ, ಅಥವಾ ಟ್ರಸ್ಟ್‌ಗಳಿಗೆ ಹಣ ಅಥವಾ ದವಸ-ಧಾನ್ಯವನ್ನು ನೀಡದಿರಲು ಕೋರಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಅನ್ನ ಸಂತರ್ಪಣೆ ಕಾರ್ಯದಲ್ಲಿ ಪಾತ್ರರಾಗಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ಕೃಪಾರ್ಶಿವಾದಕ್ಕೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment