PLEASE LOGIN TO KANNADANET.COM FOR REGULAR NEWS-UPDATES

 ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರದಂದು ನಡೆದ ಸಮಾಜ ವಿಜ್ಞಾನದ ವಿಷಯದ ಪರೀಕ್ಷೆಗೆ ಜಿಲ್ಲೆಯ ೧೫೭೩೨ ವಿದ್ಯಾರ್ಥಿಗಳು ಹಾಜರಾಗಿದ್ದು, ೪೬೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಮಾಜ ವಿಜ್ಞಾನದ ವಿಷಯಕ್ಕೆ ಬಾಲಕರು-೮೮೭೨, ಬಾಲಕಿಯರು- ೭೩೨೯ ಸೇರಿದಂತೆ ಒಟ್ಟು ೧೬೨೦೧ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೮೫೭೬, ಬಾಲಕಿಯರು- ೭೧೫೬ ಸೇರಿದಂತೆ ಒಟ್ಟು ೧೫೭೩೨ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು,   ೨೯೬-ಬಾಲಕರು, ೧೭೩- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೫೨೧೫ ವಿದ್ಯಾರ್ಥಿಗಳ ಪೈಕಿ ೪೯೯೧ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೫೨೯೮ ವಿದ್ಯಾರ್ಥಿಗಳ ಪೈಕಿ ೫೧೮೩, ಕುಷ್ಟಗಿ ತಾಲೂಕಿನಲ್ಲಿ ೨೬೫೯ ವಿದ್ಯಾರ್ಥಿಗಳ ಪೈಕಿ ೨೫೮೮, ಯಲಬುರ್ಗಾ ತಾಲೂಕಿನಲ್ಲಿ ೩೦೨೯ ವಿದ್ಯಾರ್ಥಿಗಳ ಪೈಕಿ ೨೯೭೦ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೨೨೪, ಗಂಗಾವತಿ- ೧೧೫, ಕುಷ್ಟಗಿ-೭೧ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೫೯ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು  ತಿಳಿಸಿದ್ದಾರೆ.

Advertisement

0 comments:

Post a Comment

 
Top